ಗಣೇಶ್ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಶರಣಬಸಪ್ಪಗೌಡಾ ದರ್ಶನಾಪುರ ದಂಪತಿ

ಕಲಬುರಗಿ: ನಗರದ ಸದಾಶಿವನಗರ,ನವಜೀವನ ನಗರ,ಗಾಬರೇ ಲೇಔಟ,ಮೋಹನ ನಗರದಲ್ಲಿ ಬರುವ ಶ್ರೀ ಗಣೇಶ ಮಂದಿರದಲ್ಲಿ ವಿಜ್ರಂಭಣೆಯಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು.

ಸದಾಶಿವ ನಗರ ಬಡಾವಣೆಯ ನಿವಾಸಿಗಳು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡಾ ದರ್ಶನಾಪುರ ದಂಪತಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿ ಗಣೇಶನ ಆಶಿರ್ವಾದದಿಂದ ನಾಡು ಸುಖ ಸಮೃದ್ದಿ ಕಾಣಲಿ ಎಂದು ಹೇಳಿದರು,

ಸುಮಾರು ವರ್ಷಗಳಿಂದ ಆಚರಿಸುವ ಗಣೇಶ ಉತ್ಸವವು ಮೂರು ದಿನಗಳ ಕಾಲ ವಿಜ್ರಂಬಣೆಯಿಂದ ಆಚರಿಸಲಾಗುತ್ತದೆ ,ಎಸ್.ಎಸ್.ಎಲ್.ಸಿ.ದ್ವಿತೀಯ ಪಿ.ಯು.ಸಿ.ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಬಡಾವಣೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ,ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವದು.ವಿಸರ್ಜನೆಯ ಮೂರನೆ ದಿನದಂದು ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಸಚಿವರು,ಹಾಗೂ ಮೇಯರ್ ಅವರು ಬಹುಮಾನಗಳನ್ನು ವಿತರಿಸುವರು

.ಇಲ್ಲಿಯ ಗಣೇಶನ ವಿಶೇಷತೆಯೆಂದರೆ ಮಣ್ಣಿನಿಂದ ತಯಾರಿಸಿದ ಗಣಪ ಹಾಗೂ ಯಾವುದೇ ಭಾಜಾ ಭಜಂತ್ರಿ ಡಿಜೆ ಕುಣಿತಗಳ ಆಡಂಬರವಿಲ್ಲದೇ ಸರಳವಾಗಿ ಅರ್ಥಪೂರ್ಣವಾಗಿ ಗಣೇಶೋತ್ಸವ ಆಚರಿಸುವದು ಇಲ್ಲಿನ ವಿಶೇಷತೆಯಾಗಿದೆ.ಪ್ರತಿದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷರಾದ ಹಾವೇಂದ್ರ ಪುಣ್ಯಶೆಟ್ಟಿ,ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ,,ಲಕ್ಚ್ಮೀಕಾಂತ ಪಲ್ಲಾ,ಅಮರೇಶಗೌಡ‌ ದರ್ಶನಾಪೂರ,ಡಾ.ರಾಜೇಂದ್ರ ಕೊಂಡಾ,ಡಾ.ಮಹೇಶ ಗಂವ್ಹಾರ, ಚನ್ನಬಸಪ್ಪಾ ಮುಧೋಳ,ಗಂಗಾಧರ ಡೋಣಿ,ಮಲ್ಲಿಕಾರ್ಜುನ ಸ್ವಾಮಿ,ನರಸಣ್ಣ ತಂಬುರಿ,ಸುಭಾಷ ಮೋತಕಪಲ್ಲಿ,ಡಾ.ಮುದ್ದಾ,ಶರಬಣ್ಣಾ ದಿಡ್ಡಿ,ಸತ್ಯಶೀಲರಡ್ಡಿ ಪಲ್ಲಾ ಬಸವರಾಜ ಪಾಟೀಲ,ರಾಮು ರಾಠೋಡ,ಅರ್ಚಕ ವಿವೇಕ ಸ್ವಾಮಿ ಭಾಗವಹಿಸಿದ್ದರು

emedialine

Recent Posts

ವೀ.ಲಿಂ.ಸಂಘಟನಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಸವರಾಜ ಶೆಳ್ಳಗಿ

ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…

36 mins ago

ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿಶ್ವ ಓಜೋನ್ ದಿನ

ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…

38 mins ago

ನಕಲಿ ವೈದ್ಯನ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ

ಸುರಪುರ: ತಾಲೂಕಿನ ಆಲ್ದಾಳ ಗ್ರಾಮದಲ್ಲಿ ನಕಲಿ ವೈದ್ಯನ ಕ್ಲಿನಿಕ್ ಮೇಲೆ ತಾಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮತ್ತು ಅವರ ತಂಡ ದಾಳಿ…

40 mins ago

ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಿ

ಕಲಬುರಗಿ: ಬಾಕಿ ವೇತನ ಪಾವತಿಸಲು ಸಿಬ್ಬಂದಿ ಕಡಿತ ಮಾಡಿದ ಆದೇಶವನ್ನು ವಾಪಸ್ ಪಡೆಯಬೇಕು. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವುದು…

41 mins ago

ಶಿಸ್ತು ಮತ್ತು ದಕ್ಷತೆಯಿಂದ ಉತ್ತಮ ಭವಿಷ್ಯ

ಕಲಬುರಗಿ: ಬದುಕಿನಲ್ಲಿ ಮುಂದೆ ಬರಬೇಕಾದರೆ ಒಳ್ಳೆ ಭವಿಷ್ಯ ಕಾಣಬೇಕಾಗಿದ್ದರೆ ನೀವು ನಿಷ್ಠೆ, ಪರಿಶ್ರಮ ಮತ್ತು ಸಂಕಲ್ಪ ಹೊಂದಿರಬೇಕು. ಕೇವಲ ಪದವಿಗಾಗಿ ಓದುವುದನ್ನು…

43 mins ago

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು; ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 2024-25ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ…

46 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420