ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆಶಂಕರಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಜಡೆಶಂಕರಲಿಂಗ ಪಲ್ಲಕ್ಕಿ ಮಹೋತ್ಸವ ಸೋಮವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.
ಮಕ್ತಂಪೂರದ ಶ್ರೀ ಜಡೆಶಂಕರಲಿಂಗ ದೇವಸ್ಥಾನದಿಂದ ಮಧ್ಯಾಹ್ನ ಪುರವಂತರ ಸೇವೆಯೊಂದಿಗೆ ಪ್ರಾರಂಭವಾಗಿ, ನಗರದ ಗಣೇಶ ಮಂದಿರ, ಸರಾಫ ಬಜಾರ, ಕಪಡಾ ಬಜಾರ, ಚೌಕ್ ಪೋಲಿಸ್ ವೃತ್ತ, ಕಿರಾಣ ಬಜಾರ ಸೇರಿದಂತೆ ಮುಖ್ಯರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಿತು. ಬ್ಯಾಂಡ್, ಬಾಜಾ ಭಜಂತ್ರಿ, ವಾದ್ಯ ವೈಭವದೊಂದಿಗೆ ಶ್ರದ್ಧಾ ಭಕ್ತಿಯಿಂದ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ಬಾಂಧವರು ಪಾಲ್ಗೊಂಡಿದ್ದರು.
ಪಲ್ಲಕ್ಕಿ ಉತ್ಸವ ಅಂಗವಾಗಿ ಭಾನುವಾರ ರಾತ್ರಿ 8.30ರಿಂದ ಬೆಳಗಿನ ಜಾವದವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಅಲ್ಲದೆ ಸೋಮವಾರ ಸಂಜೆ ಅನುದೀಪ ಆನಂದ ದಂಡೋತಿ ಅವರು ಸುಪರ್ ಮಾರ್ಕೆಟ್‍ನ ಆನಂದ ಹೊಲಸೇಲ್ ಬಳಿ ದಿ.ಶ್ರೀಮತಿ ಶರಣಮ್ಮ ದಂಡೋತಿ, ದಿ.ಶಿವಶರಣಪ್ಪ ದಂಡೋತಿ ಅವರ ಸ್ಮರಣಾರ್ಥ ಅನ್ನದಾಸೋಹ ಏರ್ಪಡಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…