ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲುವ ಕೆಲಸ ಪತ್ರಕರ್ತರು ಮಾಡಬೇಕು

ಕಮಲಾಪುರ; ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲುವ ಕೆಲಸ ಪತ್ರಕರ್ತರು ಮಾಡಬೇಕು, ಸಮಾಜದಲ್ಲಿನ ಸಮಸ್ಯೆಗಳ ಸುದ್ದಿ ಪ್ರಕಟಿಸಿ ಪರಿಹಾರ ಒದಗಿಸಬೇಕು, ತಪ್ಪು ಮಾಡಿದವರ ಕಿವಿ ಹಿಂಡುವದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯವಾಗಿದೆ, ಈ ಮೂಲಕ ಸಮಾಜವನ್ನು ಸರಿದಾರಿಗೆ ತರುವವನೇ ನಿಜವಾದ ಪತ್ರಕರ್ತ ಎಂದು ಶಾಸಕ ಬಸವರಾಜ ಮತ್ತಿಮುಡು ಹೇಳಿದರು.

ಕಮಲಾಪುರನ ಆಕೃತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಕಮಾಪುರ ತಾಲೂಕಾ ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ , ವಿವಿಧ ಕ್ಷೇತ್ರದ ಪ್ರಮುಖರಿಗೆ ವಿಶೇಷ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಕಮಲಾಪುರದಲ್ಲಿ ಪತ್ರಿಕಾ ಭವನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ, ಎಲ್ಲಾ ಪತ್ರಕರ್ತರು ಒಟ್ಟುಗೂಡಿ ಸಂಘವನ್ನು ಬೆಳೆಸಬೇಕು, ವಿವಿಧ ಕ್ಷೇತ್ರದ ಪ್ರಮುಖರನ್ನು ಗುರುತಿಸಿ ವಿಶೇಷ ಸತ್ಕರಿಸಿದ ಕ್ರಮ ಶ್ಲಾಘನೀಯ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ಸಂಘದ ಅಡಿಯಲ್ಲಿ ಜರುಗಳಿ ಅಭಿಲಾಶೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ ಸೂರ್ಯನ ಬೆಳಕು ಹೋಗದ ಸ್ಥಳಕ್ಕೆ ಹೋಗಿ ವರದಿ ಮಾಡುವ ಪತ್ರಕರ್ತರ ಸೇವೆ ಸ್ಮರಣೀಯವಾಗಿದೆ, ಕೆಂಬಾಳೆ ನಾಡು ಹೊಸ ದಿಕ್ಕಿನೆಡೆಗೆ ಕೊಂಡ್ಯೊಯ್ಯುವ ಕೆಲಸ ಪತ್ರಕರ್ತರ ಸಂಘ ಮಾಡಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಡಿಗೇರ ಮಾತನಾಡಿ ಪತ್ರಕರ್ತ ರು ಯಾರದೇ ಗುಲಾಮನಾಗಬಾರದು, ಸ್ವತಂತ್ರವಾಗಿ ವರದಿ ಮಾಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ ಮಾತನಾಡಿ ಪತ್ರಕರ್ತರು ಸಾವರ್ಜನಿಕರಿಗಾಗಿ ಹಗಲಿರುಳು ಶ್ರಮಿಸುವ ಪತ್ರಕರ್ತರ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು ಕರೆ ನೀಡಿದರು.

ಕಮಲಾಪುರ ವೀರಶೈವ ಲಿಂಗಾಯತ ಮುಖಂಡ ರವಿ ಬಿರಾದರ ಮಾತನಾಡಿ ಪತ್ರಕರ್ತರು ಹಣವಂತರ, ರಾಜಕಾರಣಿಗಳ ಹಾಗೂ ಭ್ರಷ್ಟ ಅಧಿಕಾರಿಗಳ ಪರವಾಗಿ ಕೆಲಸ ಮಾಡಬಾರದು, ಪತ್ರಿಕಾರಂಗಕ್ಕೆ ಅಗಾಧವಾದ ಶಕ್ತಿ ಇದೆ, ಈ ಹಿಂದೆ ಸರಕಾರ ಕೆಡುವಿ, ಸರಕಾರ ರಚನೆ ಮಾಡುವಲ್ಲಿ ಪತ್ರಿಕಾ ರಂಗ ಮಹತ್ತರ ಪಾತ್ರ ವಹಿಸಿದ ಉದಾಹರಣೆಗಳಿವೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಅಧಿಕಾರ ದುರುಪಯೋಗ ಪಡೆಸಿಕೊಂಡರೆ
ಮೂಗುದಾರ ಹಾಕುವ ಕೆಲಸ ಮಾಡಬೇಕು ಎಂದರು.

ತಾಲೂಕಿನ ಉತ್ತಮ ಶಿಕ್ಷಕರು, ಮಾಜಿ ಸೈನಿಕರು, ಸ್ನಾತಕೋತ್ತರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರಿಸಿ ಗೌರವಿಸಲಾಯಿತು.

ವಿವಿಧ ಕ್ಷೇತ್ರದ ಪ್ರಮುಖರಿಗೆ ವಿಶೇಷ ಸತ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ರಾಯಚೂರು ತಹಶಿಲ್ದಾರ ಸುರೇಶ ವರ್ಮಾ, ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷಪ್ಪ ಜಮಾದಾರ, ಕಮಲಾಪುರ ಡಿಗ್ರಿ ಕಾಲೇಜಿನ ಪ್ರಾಚಾರ್ಯೆ ಡಾ ಅಮೃತಾ ಕಟಕೆ, ಮಹಾಗಾಂವ ಕ್ರಾಸ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಶರಣಪ್ಪ ಮಾಳಗೆ, ಸಂಯುಕ್ತ ಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರ ಭಿಮಾಶಂಕರ ಫಿರೋಜಾಬಾದ, ಕಮಲಾಪುರ ಮಾಜಿ ಗ್ರಾಪಂ ಅಧ್ಯಕ್ಷ ಅಬ್ದು ಸತ್ತಾರ, ಜಿಲ್ಲಾ ಕಾರ್ಮಿಕ ಹೋರಾಟಗಾರ ಸುನೀಲ ಮಾನಪಡೆ ಸಕಲರನ್ನು ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಮರಣೀಯ ಸೇವೆ ಗುರುತಿಸಿ ವಿಶೇಷವಾಗಿ ಸತ್ಕರಿಸಲಾಯಿತು.

ಸೊಂತ -ಕಲಮೂಡ ಮುಲ್ಲಾಮಾರಿ ತೀರ್ಥ ಕ್ಷೇತ್ರದ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರ ದಿವ್ಯ ಸಾನಿಧ್ಯ ವಹಿಸಿದ್ದರು, , ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ, ಮಾಜಿ ಜಿಪಂ ಸದಸ್ಯ ಶಿವಶೆಟ್ಟಿ ಪಾಟೀಲ, ವೀರಶೈವ ಲಿಂಗಾಯ ಮುಖಂಡ ರವಿ ಬಿರಾದರ, ಬಿಜೆಪಿ ಮುಖಂಡ ಶಿವಕುಮಾರ ಪಸಾರ, ಕಾಂಗ್ರೆಸ್ ಮುಖಂಡ ಗುರು ಮಾಟೂರ, ತಹಶಿಲ್ದಾರ ಮಹಮ್ಮದ್ ಮೊಹಸಿನ್, ಪ ಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಹಿರಿಯ ಸಾಹಿತಿ ರವೀಂದ್ರ ಭಂಟನಳ್ಳಿ, , ಶಿವಕುಮಾರ ದೊಶೆಟ್ಟಿ, ಅಮೃತ ಗೌರೆ, ಮಲ್ಲಿಕಾರ್ಜುನ ಮರತೂರಕರ, ರಾಜೇಂದ್ರ ಮಾಡಬೂಳ, ಅಮರನಾಥ ಚಿಕ್ಕೆಗೌಡ, ರಾಮಲಿಂಗ ನಾಟೀಕಾರ, ಶಿವಾ ಅಷ್ಟಗಿ, ಸಂತೋಷ ರಾಂಪೂರ, ನಿಂಗಪ್ಪ ಪ್ರಬುದ್ದಕರ್, ನರೇಶ ಹರಸೂರಕರ, ಶಶಿಧರ ಮಾಕಾ, ಸುವರ್ಣಾ ಕಲ್ಯಾಣ, ವಿಶಾಲಾಕ್ಷಿ ಮಾಯಣ್ಣವರ, ಅಂಬಾರಾಯ ಜವಳಗಾ, ಶರಣು ಗೌರೆ, ಸುರೇಶ ರಾಠೋಡ, ಮಹಾದೇವ ದಸ್ತಾಪುರ, ಶಿವರಾಜ ಹಿಚಗೇರಿ, ರೇವಣಸಿದ್ದ ಮುಕರಂಬಿ, ಮಹಾದೇವ ದಸ್ತಾಪುರ, ಹಣಮಂತ ಹೊಸಮನಿ, ಸಾಗರ ಗುತ್ತೇದಾರ, ನಟರಾಜ ಕಲ್ಯಾಣ, ಕಮಲಾಪುರ ಪತ್ರಕರ್ತರ ಸಂಘದ ಖಜಾಂಚಿ ಶಿವಲಿಂಗ ಬೆಳಕೋಟಾ, ಉಪಾಧ್ಯಕ್ಷರಾದ ರಮೇಶ ಕಟ್ಟಿಮನಿ, ರಮೇಶ ಕಟ್ಟಿಮನಿ, ಚೆನ್ನವೀರ ದಸ್ತಾಪುರ, ಕಾರ್ಯದರ್ಶಿ ಆನಂದ ತೆಗನೂರ, ಕಾರ್ಯಕಾರಣಿ ಸದಸ್ಯ ಸನಾಗರಾಜ ಶಿಲ್ಡ್, ಸುಧಾಕರ ಲೇಂಗಟಿ ಇದ್ದರು.

ಕಮಲಾಪುರ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮೂಲಗೆ ಸ್ವಾಗತಿಸಿದರು, ಕಸ್ತೂರಿಬಾಯಿ, ರಾಜೇಶ್ವರ ಪ್ರಾರ್ಥಿಸಿದರು, ಶಿವಲಿಂಗ ಬೆಳಕೋಟಾ ವಂದಿಸಿದರು, ರವೀಂದ್ರ ಬಿಕೆ ನಿರೂಪಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago