ದೇಶದ ಉನ್ನತಿಗೆ ಯುವಕರು ಅಣಿಗೊಳ್ಳಲು ವಿವೇಕಾನಂದರ ಕರೆ

ಚಿಂಚೋಳಿ: ಸ್ವಾಮಿ ವಿವೇಕಾನಂದರು ವಿಶ್ವ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು. ಅಮೆರಿಕದ ಜನರ ಮನಸ್ಸನ್ನು ಒಂದೇ ಒಂದು ಪದದಿಂದ ಗೆದ್ದ ವಿವೇಕಾನಂದರು ಭಾರತವು ಇಡೀ ಜಗತ್ತಿಗೆ ಬುನಾದಿ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಲ್ಲಿಕಾ ರ್ಜುನ ಪಾಲಾಮಾರ ನುಡಿದರು.

ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರ ಬೆಂಗಳೂರು ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯಲ್ಲಿ ಮಾತಾಡಿದ ಅವರು ಮಾನವೀಯ ಮೌಲ್ಯಗಳು ಯಾವಾಗ ಸಾಯುತ್ತವೆ ಅವಾಗ ಭಾರತವು ಸಾಯುತ್ತದೆ ಎಂಬ ವಿವೇಕಾನಂದರ ವಾಣಿಯನ್ನು ತಿಳಿಸಿದರು.

ಜೀವನಕ್ಕೆ ದಾರಿ ದೀಪವಾದ ನುಡಿಗಳನ್ನು ಆಡುತ್ತಿದ್ದರು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಇಲ್ಲದವನು ಮನುಷ್ಯನೆ ಅಲ್ಲ ಎಂದರು. ಜೀವನ ಧರ್ಮಕ್ಕೆ ಭದ್ದರಾಗಬೇಕು. ದೇಶದ ಉನ್ನತಿಗೆ ಯುವಕರು ಅಣಿಗೊಳ್ಳಬೇಕು. ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಹೊಂದಬೇಕು. ಬಲವೇ ಜೀವನ ದುರ್ಬಲವೆ ಮರಣ ಆದ್ದರಿಂದ ಯುವಕರು ಸದೃಢವಾದ ದೇಹ ಮನಸ್ಸು ಹೊಂದಬೇಕು. ಜೀವನದಲ್ಲಿ ಸೋಲಾದರೆ ದೃತಿಗೆಡಬಾರದು ಮುನ್ನುಗ್ಗಬೇಕು ಏಳಿ ಎದ್ದೇಳಿ ಸತ್ಯದ ಕಡೆಗೆ ಚಲಿಸಲು ವಿವೇಕಾನಂದರು ಕರೆ ನೀಡಿದರು ಎಂದರು.

ಸಮಾಜಿಕ ಸೇವಕರಾದ ಮಾರುತಿ ಗಂಜಗೇರಿ ಅವರು ಸನ್ಮಾನ ಸ್ವೀಕರಿಸಿ ದೇಶದ ನಿಜ ಶಕ್ತಿ ಎಂದರೇ ಯುವಕರೆಂದು ವಿವೇಕಾನಂದರು ತಿಳಿದ್ದಿದರು. ಹರಿಯುವ ನೀರಿನ ವಿರುದ್ದ ಈಜುವ ಯುವಕರು ಭಾರತದಲ್ಲಿ ಇದ್ದರೆ ಅವರನ್ನು ಪ್ರೋತ್ಸಾಹ ನೀಡಬೇಕು ಎಂದರು. ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕು, ಜವಾಬ್ದಾರಿಯುತ ಜೀವನಕ್ಕೆ ಅಣಿಯಾಗಬೇಕು ಎಂದರು.

‌ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ತೊ. ಮಲ್ಲಪ್ಪ ತೊಟ್ನಳ್ಳಿ ವಹಿಸಿ ಭಾರತದ ಹಿಂದೂ ಸಂಸ್ಕೃತಿ ಅನನ್ಯತೆಯನ್ನು ದೇಶ ವಿದೇಶಗಳಲ್ಲಿ ಮುಟ್ಟಿಸುವಲ್ಲಿ ಪಾತ್ರ ಗಣನೀಯ. ಯುವಕರಿಗೆ ಜಾಗೃತಿ ಮೂಡಿಸುವ ನುಡಿ ಮುತ್ತುಗಳನ್ನು ಹೇಳಿದ್ದಾರೆ ಅವನ್ನು ಪಾಲನೆ ಮಾಡುವುದು ಅವಶ್ಯಕತೆ ಇದೆ ಎಂದರು.

ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿದರು. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಪ್ರಾಸ್ತಾವಿಕ ನುಡಿ ಆಡಿದರು. ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಬಸವರಾಜ ಐನೊಳಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು.

emedialine

Recent Posts

ಒಂದು ತಿಂಗಳೊಳಗೆ ವಕ್ಫ್ ಆಸ್ತಿ ಖಾತಾ ಅಪಡೇಷನ್ ಕಾರ್ಯ ಮುಗಿಸಲು ಗಡುವು

ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರಿಂದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನೆ ಕಲಬುರಗಿ; ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗೆ…

44 mins ago

ಕಲ್ಯಾಣದ ರಚನಾತ್ಮಕ ಅಭಿವೃದ್ಧಿಗೆ ಸಮಿತಿಯಿಂದ ಮುಖ್ಯಮಂತ್ರಿಗೆ ಪ್ರಸ್ತಾವನೆ

ಕಲಬುರಗಿ.ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಸೆಪ್ಟೆಂಬರ್ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಂಗವಾಗಿ ಮತ್ತು ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕಲಬುರಗಿ ಭೇಟಿಯ…

45 mins ago

ಮಹಾದೇವಿಯಕ್ಕಗಳ ಸಮ್ಮೇಳನ; ಸೆ. 21 ರಿಂದ

ಕಲಬುರಗಿ: ಇಲ್ಲಿನ ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಸೆ. 21ರಿಂದ ಎರಡು ದಿನಗಳ ಕಾಲ 14ನೇ ಮಹಾದೇವಿಯಕ್ಕಳ ಸಮ್ಮೇಳನ…

2 hours ago

ಶೇ.100 ರಷ್ಟು ಫಲಿತಾಂಶ ಸಾಧಿಸಿದ ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ

ಕಲಬುರಗಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಫಲಿತಾಂಶದ ಪಟ್ಟಿಯಲ್ಲಿ ಗೋದುತಾಯಿ ಶಿಕ್ಷಣ ಮಹಿಳಾ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರು…

2 hours ago

ರಾವೂರ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ: ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿವೇಕಾನಂದ ಪ್ರಾಥಮಿಕ ಮತ್ತು ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ತಾಲೂಕ…

4 hours ago

ಜೀ಼ ಕನ್ನಡದ ಸರಿಗಮಪ ಆಡಿಷನ್ ಕಲಬುರಗಿಯಲ್ಲಿ ಇದೇ ಶನಿವಾರದಂದು

  ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು ನಿಮ್ಮೂರಿಗೂ ಬರ್ತಿದೆ ಸರಿಗಮಪ ಆಡಿಷನ್, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420