ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ

  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ: ವಿಶ್ವಸಂಸ್ಥೆ ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆ, ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಯ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು, ಅದರ ಮೌಲ್ಯಗಳನ್ನು, ತತ್ವಗಳನ್ನು ಎತ್ತಿಹಿಡಿಯಲು ಕರ್ನಾಟಕ ಸರ್ಕಾರ ಸೆ.15 ರಂದು ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿಯಲ್ಲಿ ಚಿತ್ತಾಪುರ ತಾಲೂಕಿನ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು ಭಾಗವಹಿಸಬೇಕು ಎಂದು ಪುರಸಭೆ ಸದಸ್ಯ ಜಗದೀಶ್ ಚವ್ಹಾಣ ಕೋರಿದ್ದಾರೆ.

ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದ ವರೆಗೆ ಬೆಳಿಗ್ಗೆ 9:30 ಕ್ಕೆ ಮಾನವ ಸರಪಳಿ ನಿರ್ಮಿಸಲಾಗಿದೆ, ಕಾರಣ ಚಿತ್ತಾಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲರೂ ರಾವೂರ ಕ್ರಾಸ್ ಇಂದ ಬಲರಾಮ ಚೌಕ ವರೆಗೆ ನಡೆಯಲಿರುವ ಮಾನವ ಸರಪಳಿಯಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದ್ದಾರೆ .

ಮಾನವ ಸರಪಳಿಗೆ ಎಲ್ಲರೂ ಕೈ ಜೋಡಿಸೋಣ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯೋಣ, 12 ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರ ಕಂಡಿರುವ ಕನಸು ಹಾಗೂ ಮಹಾ ಮಾನವತಾವಾದಿ ವಿಶ್ವ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಕಂಡಿರುವ ಕನಸು ನನಸು ಮಾಡೋಣ ಸವಿಧಾನ ಆಶಯವನ್ನು ಎತ್ತಿ ಹಿಡಿಯೋಣ ಈ ನಿಟ್ಟಿನಲ್ಲಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ಸಂವಿಧಾನ ಪೀಠಿಕೆಯನ್ನು ವಾಚನ ಮಾಡುವ ಮೂಲಕ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಹಾಗೂ ಜಾಗತಿಕವಾಗಿ ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವುದು ಮಾನವ ಸರಪಳಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

emedialine

Recent Posts

ಕೋವಿಡ್‌ನಿಂದ ಮಂಕಾಗಿದ್ದ ರಂಗ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ

ರಂಗದಂಗಳದಲ್ಲಿ ಮಾತುಕತೆಯಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿಕೆ ಕಲಬುರಗಿ: ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ…

9 hours ago

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಪತ್ರಿಕಾ ರಂಗದ ಪಾತ್ರ ಅನನ್ಯ: ಡಾ.ಶಿವರಂಜನ ಸತ್ಯಂಪೇಟೆ

ಕಲಬುರಗಿ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಧಕ-ಬಾಧಕಗಳನ್ನು ನಾಗರಿಕರಿಗೆ ಮುಟ್ಟಿಸುವ ಕಾರ್ಯ ಮಾಡುವ ಪತ್ರಿಕಾ ರಂಗವು ನಾಲ್ಕನೇ ರಂಗವಾಗಿ ಕಾರ್ಯನಿರ್ವಹಿಸುತ್ತಿದ್ದೆ.…

9 hours ago

ರಾಸಯೋ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ : ಪ್ರೊ. ಬಾಬಣ್ಣ ಹೂವಿನಬಾವಿ

ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು.…

11 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ

ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…

12 hours ago

ಜಾನಪದ ನೃತ್ಯೋತ್ಸವ ಕಾರ್ಯಕ್ರಮ

ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …

12 hours ago

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಹನುಮಂತರಾವಗೆ ಅಭಿನಂದನ ಸಮಾರಂಭ

ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…

12 hours ago