ಪಾರಂಪರಿಕ ವೈದ್ಯ ಪರಿಷತ್ ಉಚಿತ ಆರೋಗ್ಯ ತಪಾಸಣೆ

ಸುರಪುರ: ರಾಣಿ ಪಾಪಮ್ಮ ಜೇಜಾ ತುಮಕೂರ ಜಹಾಗೀರ್ದಾರ್ ಅವರ 20ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಆರ್.ಸಿ.ನಾಯಕ ಜನಸೇವಾ ಶೈಕ್ಷಣಿಕ ಟ್ರಸ್ಟ್ ಇವರ ಸಹಯೋಗ ದೊಂದಿಗೆ ಸಪ್ಟೆಂಬರ್ 20 ರಂದು ಬೆಳಿಗ್ಗೆ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುರ್ವೇದಿಕ್ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ರಾಜ್ಯ ಖಜಾಂಚಿ ರಾಜಾ ಚೆನ್ನಪ್ಪ ನಾಯಕ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಕಾರ್ಯಕ್ರಮದ ಸಾನಿಧ್ಯವನ್ನು ನಿಷ್ಠಿ ಕಡ್ಲೆಪ್ಪನವರ ವಿರಕ್ತಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಜಿ ಇರಕಲ್ಲ ಶಿವಶಕ್ತಿ ಪೀಠದ ಜಗದ್ಗುರು ಶ್ರೀ ಬಸವಪ್ರಸಾದ ಮಹಾಸ್ವಾಮೀಜಿ ವಹಿಸಲಿದ್ದು,ಸುರಪುರ ಅರಸು ಮನೆತನದ ಡಾ.ರಾಜಾ ಕೃಷ್ಣಪ್ಪ ನಾಯಕ ಹಾಗೂ ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಲಿದ್ದು,ಡಾ.ನಿರ್ಮಲ ಕನ್ನಾಳ ವಿಜಯಪುರ ನೇತೃತ್ವ ವಹಿಸಲಿದ್ದಾರೆ.

ಪರಿಷತ್ ರಾಜ್ಯಾಧ್ಯಕ್ಷ ವೈದ್ಯ ಆನಂದ ಡಿ.ಹೆರೂರ,ಪ್ರ.ಕಾರ್ಯದರ್ಶಿ ಕುಮಾರಸ್ವಾಮಿ ಕಸಬಾಲಿಂಗಸೂಗೂರ,ಅಧ್ಯಕ್ಷತೆಯನ್ನು ಟ್ರಸ್ಟ್ ಗೌರವಾಧ್ಯಕ್ಷರಾದ ಹುಲಿಹೈದರ ಸಂಸ್ಥಾನದ ವಶಂಸ್ಥ ರಾಜಾ ಸುಭಾಶ್ಚಂದ್ರ ನಾಯಕ ವಹಿಸಲಿದ್ದು,ಡಿವೈಎಸ್ಪಿ ಜಾವಿದ್ ಇನಾಂದಾರ್,ತಹಸಿಲ್ದಾರ್ ಹುಸೇನಸಾಬ್ ಅಪ್ಪಾಸಾಬ್ ಸರಕಾವಸ್,ಪಿಐ ಆನಂದ ವಾಘಮೊಡೆ,ಡಾ.ಶಫೀಕ್ ಅಹ್ಮದ್,ಅರಣ್ಯಾಧಿಕಾರಿ ಬುರ್ರಾನುದ್ದಿನ್,ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ,ಸಿಡಿಪಿಓ ಅನಿಲ್‍ಕುಮಾರ ಕಾಂಬ್ಳೆ,ಬಿಇಓ ಯಲ್ಲಪ್ಪ ಕಾಡ್ಲೂರ ಉಪಸ್ಥಿತರಿರಲಿದ್ದಾರೆ.ಧನ್ವಂತರಿ ಭಾವಚಿತ್ರಕ್ಕೆ ಹಾಗೂ ರಾಣಿ ದಿ.ಪಾಪಮ್ಮ ಜೇಜಾ ಅವರ ಭಾವಚಿತ್ರಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾವಾದಿ ರಾಜಾ ವೆಂಕಟಪ್ಪ ನಾಯಕ,ರಾಜಾ ಸೀತಾರಾಮ ನಾಯಕ,ರಾಜಾ ಸೋಮನಾಥ ನಾಯಕ ಗುರಗುಂಟಾ ಸಂಸ್ಥಾನ,ರಾಜಾ ವೆಂಕಪ್ಪ ನಾಯಕ ಟಿಹೆಚ್‍ಓ ಅವರು ಪುಷ್ಪಾರ್ಚನೆ ಮಾಡಲಿದ್ದು,ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಆಶಯ ನುಡಿ ನುಡಿಯಲಿದ್ದು,ವಿಶೇಷ ಆಹ್ವಾನಿತರಾಗಿ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ರಾಜಾ ಕೃಷ್ಣದೇವರಾಜ (ಬಬ್ಲು ದೊರೆ),ನಗರಸಭೆ ಸದಸ್ಯ ವೇಣುಮಾಧವ ನಾಯಕ ಭಾಗವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ವೈದ್ಯ ನರಸಿಂಹ ವೈದ್ಯ ಶಹಾಪುರ,ವೈದ್ಯ ಮಕ್ತುಮ್ ಪಟೇಲ್ ಪರಿಷತ್ ಯಾದಗಿರಿ ಜಿಲ್ಲಾಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ತುಮ್ ಪಟೇಲ್ ವಜ್ಜನ್,ಅಬೀದ್ ಹುಸೇನ ಪಗಡಿ,ರಾಜಾ ದೇವೆಂದ್ರ ನಾಯಕ,ರಾಜಾ ಉಡಚಪ್ಪ ನಾಯಕ,ಮಹಾಂತೇಶ ಹಿರೇಮಠ,ಪ್ರಕಾಶ ಕೊಡವಿ,ನೀಲಕಂಠ ಸೇರಿದಂತೆ ಇತರರಿದ್ದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

emedialine

Recent Posts

ಶಾಲಾ ಮಕ್ಕಳಿಗೆ ಬಸವಣ್ಣನವರ ವಚನ ಸುಧೆ ಕೈಪಿಡಿ ವಿತರಣೆ

ಬಿ.ಆರ್. ಪಾಟೀಲರ 76ನೇ ಹುಟ್ಟುಹಬ್ಬದ ಆಚರಣೆ ನಿಮಿತ್ತ ಕಲಬುರಗಿ: ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವುಗಳ ನಡುವಿನ…

14 hours ago

ಕಲಬುರಗಿ : ಸಮಾಜ ಬದಲಾಗದ ಹೊರತು ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ: ನ್ಯಾ.ಬಿ.ವೀರಪ್ಪ

ಸುಳ್ಳು ದೂರು ಕೊಟ್ಟಲ್ಲಿ 3 ವರ್ಷ ಜೈಲು ಶಿಕ್ಷೆ ಕಲಬುರಗಿ: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಬೇಕಾದರೆ…

14 hours ago

ಶ್ರೀ ಡಾ. ಶರಣಬಸವಪ್ಪ ಅಪ್ಪಾ ನಡೆದಾಡುವ ದೇವರು: ಬಸವರಾಜ ದೇಶಮುಖ

ಕಲಬುರಗಿ: ಕಲಬುರಗಿ ಜಿಲ್ಲೆ ಶರಣರ ಹೆಬ್ಬಾಗಿಲು. ಇಲ್ಲಿ ಅನೇಕ ಶರಣರು, ದಾಸರು ಬಾಳಿ ಬದುಕಿದ ನೆಲ. ಶಿಕ್ಷಣ ಮತ್ತು ದಾಸೋಹ…

14 hours ago

ನಿರಂತರ ರಂಗಕ್ರಿಯೆಗೆ ರಂಗಾಯಣ ಬದ್ಧ: ರಾಜು ತಾಳಿಕೋಟೆ

ಧಾರವಾಡ: ಉತ್ತರ ಕರ್ನಾಟಕದಾದ್ಯಂತ ನಾಟಕ ಚಟುವಟಿಕೆಗಳನ್ನು ನಿರಂತರ ನಡೆಸಿ ರಂಗಲೋಕವನ್ನು ಜೀವಂತವಾಗಿರಿಸಲು ಬದ್ಧವಾಗಿದ್ದೇನೆಂದು ಖ್ಯಾತ ನಟ, ನಿರ್ದೇಶಕ ರಾಜು ತಾಳಿಕೋಟೆ…

14 hours ago

ಅಂಕದ ಜೊತೆಗೆ ಕ್ರೀಡೆಯು ಇರಲಿ: ಡಾ. ಸದಾನಂದ ಪೆರ್ಲ

ಕಲಬುರಗಿ : ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕದ ಬೆನ್ನ ಹಿಂದೆ…

15 hours ago

ಕಲಬುರಗಿ: ಅದ್ಧೂರಿಯಾಗಿ ಜರುಗಿದ ಪೂಜ್ಯ ಡಾ ಅಪ್ಪಾಜಿಯವರ ಜನ್ಮದಿನಾಚರಣೆ

ಕಲಬುರಗಿ; ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ…

20 hours ago