ಹೈದರಾಬಾದ್ ಕರ್ನಾಟಕ

ಕಲಬುರಗಿ: ಅದ್ಧೂರಿಯಾಗಿ ಜರುಗಿದ ಪೂಜ್ಯ ಡಾ ಅಪ್ಪಾಜಿಯವರ ಜನ್ಮದಿನಾಚರಣೆ

ಕಲಬುರಗಿ; ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ ಅವರ 90ನೇ ಜನ್ಮದಿನಾಚರಣೆಯನ್ನು ಗುರುವಾರ ಸಂಜೆ ಅದ್ದೂರಿಯಾಗಿ ಆಚರಿಸಲಾಯಿತು.

ಡಾ.ಅಪ್ಪಾಜಿಯವರ ಕುಟುಂಬದಲ್ಲಿನ ವೈಯುಕ್ತಿಕ ದುರಂತದ ಹಿನ್ನೆಲೆಯಲ್ಲಿ ಡಾ. ಅಪ್ಪಾಜಿಯವರ ಜನ್ಮದಿನದ ಸಾರ್ವಜನಿಕ ಆಚರಣೆಯನ್ನು ರದ್ದುಪಡಿಸಿ, ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ಆವರಣದಲ್ಲಿ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸಿದ ಡಾ. ಅಪ್ಪಾಜಿಯವರ ಅಭಿಮಾನಿಗಳು ಹಾಗೂ ಭಕ್ತರು, ಶಿಕ್ಷಣ ಕ್ಷೇತ್ರದ ದಾರ್ಶನಿಕ ಡಾ. ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಸಂಸ್ಥ್ತಾನದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಹುಟ್ಟು ಹಬ್ಬದ ಸ್ಮರಣಾರ್ಥ ಬೆಳಿಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಿ, ಸಂಜೆ ದೇವಸ್ಥಾನದ ಆವರಣದಲ್ಲಿರುವ ದಾಸೋಹ ಮಹಾಮನೆಯಲ್ಲಿ ಹುಟ್ಟು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಸಮಾರಂಭದಲ್ಲಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಶಿಕ್ಷಣ ತಜ್ಞರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಮಹಾಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದರು ಮತ್ತು ಡಾ. ಅಪ್ಪಾಜಿ ಅವರಿಗೆ ಪುಷ್ಪಗುಚ್ಛಗಳನ್ನು ಅರ್ಪಿಸಿದರು. ಮಹಾಮನೆಯಲ್ಲಿ ವಾಸ್ತವಿಕವಾಗಿ ಹೂಮಾಲೆ ಮತ್ತು ಹೂಗುಚ್ಛಗಳ ಪ್ರವಾಹವಾಗಿತ್ತು.

ಮಹಾಮನೆಗೆ ಭೇಟಿ ನೀಡಿ ಡಾ. ಅಪ್ಪಾಜಿ ಹಾಗೂ ಡಾ. ಅವ್ವಾಜಿ ಅವರಿಗೆ ನಮನ ಸಲ್ಲಿಸಿದ ಪ್ರಮುಖರಲ್ಲಿ ಪೆÇಲೀಸ್ ಆಯುಕ್ತ ಡಾ. ಎಸ್.ಡಿ.ಶರಣಪ್ಪ, ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್, ಶಾಸಕ ತಿಪ್ಪಣ್ಣ ಕಮಕನೂರ, ಬಿಜೆಪಿ ಶಾಸಕ ಹಾಗೂ ಹೈದರಾಬಾದ್ ಕರ್ನಾಟಕ ಎಜುಕೇಷನ್ ಸೊಸೈಟಿ ಅಧ್ಯಕ್ಷ ಶಶಿಲ್ ಜಿ. ನಮೋಶಿ, ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಸದಸ್ಯರಾದ ಶ್ರೀ ಅರುಣಕುಮಾರ ಪಾಟೀಲ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಮತ್ತು ಇತರ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಶ್ರೀಶೈಲಂನ ಸಾರಂಗ ಮಠದ ಜಗದ್ಗುರು ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಚೌಡಾಪುರಿ ಮಠದ ಡಾ. ರಾಜಶೇಖರ ಮಹಾಸ್ವಾಮಿಗಳು ಸೇರಿದ್ದರು.

ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಸೇರಿದಂತೆ ವಿವಿಯ ಕುಲಸಚಿವ ಡಾ. ಎಸ್.ಜಿ.ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಪೆÇ್ರ. ಕಿರಣ ಮಾಕಾ, ನಿರ್ದೇಶಕರಾದ ಪೆÇ್ರ. ವಿ.ಡಿ.ಮೈತ್ರಿ, ಪ್ರೊ. ಎನ್. ಎಸ್. ದೇವರಕಲ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಡಾ. ಅಪ್ಪಾಜಿ ಮತ್ತು ಡಾ. ಅವ್ವಾಜಿ ಅವರಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು. ಗೌರವ ಸೂಚಕವಾಗಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ನಡೆಯುತ್ತಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು ಡಾ. ಅಪ್ಪಾಜಿ ಹಾಗೂ ಡಾ. ಅವ್ವಾಜಿ ಅವರನ್ನು ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಡಾ .ಅಪ್ಪಾಜಿ ಅವರ ಪುತ್ರಿಯರಾದ ಕುಮಾರಿ ಭವಾನಿ, ಕುಮಾರಿ ಶಿವಾನಿ, ಕುಮಾರಿ ಮಹೇಶ್ವರಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಡಾ. ಉಮಾದೇವಿ ದೇಶಮುಖ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಫಾರೂಕ್ ಮನ್ನೂರ್ ಮಕ್ಕಳೊಂದಿಗೆ ಜನ್ಮದಿನಾಚರಣೆ

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…

21 hours ago

ಜಾನಪದದಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿದೆ: ಯಲ್ಲಪ್ಪ ನಾಯ್ಕೋಡಿ

ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…

22 hours ago

ಕಲಬುರಗಿ ಸ್ಮಾರ್ಟ್ ಸಿಟೀ ಎನ್ನುವುದು ಸಿಎಂ ತೋರಿಸುವ ಹಗಲ ನಕ್ಷತ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…

22 hours ago

ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…

22 hours ago

ಕಲಬುರಗಿ; 10 ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…

22 hours ago

ವಾಡಿ; ಮಕ್ಕಳ ದಿನಾಚರಣೆ ಸಂಭ್ರಮ

ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…

22 hours ago