ಕಲಬುರಗಿ: ತಳವಾರ್ ಸಮುದಾಯದ ಹೋರಾಟಕ್ಕೆ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲ

ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನಡೆಯುತ್ತಿರುವ ಅಖಿಲ ಕರ್ನಾಟಕ ಮಾಹರ್ಷಿ ವಾಲ್ಮೀಕಿ ತಳವಾರ್ ಸಮಾಜ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ತಳವಾರ್ ಸಮಾಜದ ವಿವಿಧ ಬೇಡಿಕೆಗಳ ಆಗ್ರಹಿಸಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ನಡೆಯುತ್ತಿರುವ ನಾಲ್ಕನೇ ದಿನದ ಧರಣಿ ಸತ್ಯಾಗ್ರಹಕ್ಕೆ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲಿಸಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರ ಮಾತನಾಡಿ ತಳವಾರ್ ಸಮುದಾಯದ ನ್ಯಾಯಯುತವಾದ ಬೇಡಿಕೆಯಾಗಿರುವ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಮತ್ತು ಸರ್ಕಾರಿ ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ತಳವಾರ್ ಸಮುದಾಯದ ಜನರಿಗೆ ಯಾವುದೇ ಅನಾವಶ್ಯಕ ದಾಖಲೆಗಳನ್ನು ಕೇಳದೆ ಸರಿಯಾದ ಪ್ರಮಾಣದಲ್ಲಿ ಕಾಸ್ಟ್ ಸರ್ಟಿಫಿಕೇಟ್ ದಾಖಲತಿಗಳನ್ನು ನೀಡಬೇಕು ಹಾಗೂ ಸರ್ಕಾರಿ ನೌಕರರಿಗೆ ಈಗಾಗಲೇ ನಾಲ್ಕು ವರ್ಷಗಳ ಕಳೆದಿದ್ದು ಇವಾಗಲಾದರೂ ನೌಕರರಿಗೆ ಸಿಂಧುತ್ವಗಳನ್ನು ತಡ ಮಾಡದೆ ನೀಡಬೇಕು ಎಂದು ಸರ್ಕಾರಕ್ಕೆ ಹಾಗು ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದರು.

ಒಂದು ವೇಳೆ ನೀಡದೆ ಹೋದಲ್ಲಿ ರಾಜ್ಯದಲ್ಲಿ ತಳವಾರ್ ಸಮುದಾಯದ ಜೊತೆಗೆ ರಾಷ್ಟ್ರಿಯ ಸಮಾಜ ಪಕ್ಷ ದೊಡ್ಡ ಮಟ್ಟದ ಹೋರಾಟ ರೂಪಿಸಲಿದೆ ಎಂದು ನುಡಿದರು ಈ ಸಂದರ್ಭದಲ್ಲಿ ಮುಖಂಡರಾದ ಶರಣಬಸಪ್ಪ ದೊಡ್ಮನಿ, ಜಿಲ್ಲಾಧ್ಯಕ್ಷರಾದ ದೇವೇಂದ್ರ ಚಿಗರಳ್ಳಿ, ಶ್ರೀಮಂತ ಮಾವನೂರು, ಅಯ್ಯಪ್ಪ ಸಿಂದಗಿ, ಮಾಂತೇಶ್ ಅವರಾದಿ, ವಿಜಯ್ ಕುಮಾರ್ ಬೋರಗಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

emedialine

Recent Posts

ಸರ್ವರೂ ಸಹಕಾರಿ ತತ್ವದೊಂದಿಗೆ ನಡೆಯೋಣ

ಕಲಬುರಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿ.ಸಿ.ಸಿ ಬ್ಯಾಂಕ್‌ನ ತಾಯಿ ಬೇರು. ಗ್ರಾಮೀಣ…

17 mins ago

ಸಚಿವರಿಂದ ಮನ್ನೂರ ಆಸ್ಪತ್ರೆಯ ದ ವೆಲ್ ನೇಸ್ ರೆವೂಲೇಷನ ಮ್ಯಾಗಝೀನ್ ಲೋಕಾರ್ಪಣೆ

ಕಲಬುರಗಿ: ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ…

24 mins ago

ಡಾ. ಎಂ.ಎಂ. ಕಲಬುರ್ಗಿ ಸಂಸ್ಮರಣೆ ನಾಳೆ

ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಡಾ. ಎಂ.ಎಂ. ಕಲಬುರಗಿ ವಿಚಾರ ವೇದಿಕೆಯ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ…

29 mins ago

ಕಲಬುರಗಿ: ಅಂಗವಿಕಲ ಕಲ್ಯಾಣ ಅಧಿಕಾರಿಗೆ ಸನ್ಮಾನ

ಕಲಬುರಗಿ: ಅಂಗವಿಕಲ ಕಲ್ಯಾಣ ಇಲಾಖೆಯಿಂದ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಸರಕಾರದದ ಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾ…

2 hours ago

ಮಕ್ಕಳಿಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ…

2 hours ago

ಶಹಾಪುರ: ಮಹಿಳೆ ಸಮಾಜದ ಬೆನ್ನೆಲುಬು

ಶಹಾಪುರ : ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು,ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ತಮ್ಮ ಆರೋಗ್ಯವನ್ನು ಅಪಾಡಿಕೊಳ್ಳುವುದರ ಜೊತೆಗೆ ಜೀವನ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420