ಸರ್ವರೂ ಸಹಕಾರಿ ತತ್ವದೊಂದಿಗೆ ನಡೆಯೋಣ

ಕಲಬುರಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿ.ಸಿ.ಸಿ ಬ್ಯಾಂಕ್‌ನ ತಾಯಿ ಬೇರು. ಗ್ರಾಮೀಣ ಮಟ್ಟದಲ್ಲಿ ಕೃಷಿಕರು ಸೇರಿ ಷೇರು ಹಾಕುವ ಮೂಲಕ ರಚಿತವಾಗಿರುತ್ತದೆ. ಕೃಷಿಗೆ ಬೇಕಾದ ಸಾಲ, ಸೌಲಭ್ಯಗಳನ್ನು ನೇರವಾಗಿ ರೈತರಿಗೆ ವಿತರಿಸುವ ಕೆಲಸವನ್ನು ಈ ಸಹಕಾರ ಸಂಘಗಳು ಮಾಡುತ್ತವೆ. ನಿತ್ಯದ ವ್ಯವಹಾರ ನೋಡಿಕೊಳ್ಳಲು ಪ್ರತಿ ಸಂಘಕ್ಕೂ ಒಬ್ಬ ಕಾರ್ಯದರ್ಶಿ ಇರುತ್ತಾನೆ ಎಂದು ಕಲ್ಬುರ್ಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷರಾದ ಸುರೇಶ ಸಜ್ಜನ ಹೇಳಿದರು.

ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ದ್ವೀತಿಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಒಂದು ಜಿಲ್ಲೆಯ ಇಂತಹ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯತ್ವದ ಒಟ್ಟು ರೂಪವೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌. ಅಂದರೆ, ವ್ಯಕ್ತಿಯೊಬ್ಬ ನೇರವಾಗಿ ಈ ಬ್ಯಾಂಕ್‌ನ ಸದಸ್ಯನಾಗುವಂತಿಲ್ಲ. ಪ್ರಾಥಮಿಕ ಸಂಘಗಳು,ಕೃಷಿ ಉತ್ಪಾದನೆ ಸಂಘಗಳು, ಹಾಲು ಉತ್ಪಾದನೆ ಸಂಘಗಳು ಸೇರಿದಂತೆ ಇತರೆ ಸಂಘಗಳು ಸದಸ್ಯತ್ವ ಪಡೆದಿರುತ್ತಾರೆ, ಎಂದು ಸರ್ವ ಸದಸ್ಯರಿಗೆ ವಿವರವಾಗಿ ಜಿಲ್ಲಾ ಸಹಕಾರಿ ಒಕ್ಕೂಟ ಯೂನಿಯನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮವನ್ನು ಕಲ್ಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನರಡ್ಡಿಗೌಡ ಕೌಳೂರ ಉದ್ಘಾಟಿಸಿ ಮಾತನಾಡಿದ ಸಂದರ್ಭ ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ –ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಠ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ.ಪರಸ್ಪರ ಸಹಕಾರ, ನಂಬಿಕೆಯ ಅಮೂಲ್ಯ ತತ್ವಗಳ ಬುನಾದಿಯ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್‌ಗಳು ಇಂದು ಆರ್ಥಿಕ ನಷ್ಟ ಅನುಭವಿಸಲು, ಕೆಲವೊಮ್ಮೆ ಪತನದ ಹಾದಿಯಲ್ಲಿ ಸಾಗಲು ಅವುಗಳ ಮೂಲ ರಚನೆಯ ಲೋಪವೇ ಕಾರಣ ಎನ್ನುತ್ತಾರೆ.

ಸಹಕಾರಿ ಧುರೀಣರು. ಯಾವುದೇ ಒಂದು ಸಹಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಲು ಮೊದಲು ಸಹಕಾರ ಮನೋಭಾವದ ಸಮಾನ ಮನಸ್ಕರು ಒಂದೆಡೆ ಸೇರಿ ಸಹಕಾರ ಸಂಘಗಳು ಬೆಳವಣಿಗೆ ಮಾಡೋಣಾ ಎಂದು ಸಲಹೆ ನೀಡಿದರು,ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪೂರ ಸಹಕಾರ ಪಿತಾಮಹರಾದ ಸಿದ್ದನಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮುಖಾಂತರ ಮಾತನಾಡಿದರು.

ಯಾದಗಿರಿ ಜಿಲ್ಲಾ ಯುನಿಯನ್ ಒಕ್ಕೂಟವು ದ್ವೀತಿಯ ವರ್ಷದ ಎರಡು ವರ್ಷಗಳ ಕಾಲ ಅನೇಕ ವಿವಿಧ ಸಹಕಾರ ಸಂಘದ ಬ್ಯಾಂಕಿಗೆ ತರಬೇತಿ ನೀಡುವುದು ನಮ್ಮ ಒಕ್ಕೂಟದ ಉದ್ದೇಶವಾಗಿರುತ್ತದೆ ಎಂದರು ಇದೆ ಸಂದರ್ಭದಲ್ಲಿ ನಮ್ಮ ಒಕ್ಕೂಟವು ಮುಂದಿನ ದಿನಗಳಲ್ಲಿ ಒಕ್ಕೂಟದ ತರಬೇತಿ ಕೇಂದ್ರ ಕಛೇರಿಯನು ಅತಿ ಶೀಘ್ರದಲ್ಲಿ ಪ್ರಾರಂಭ ಮಾಡಲಾಗುತ್ತದೆ ಈಗಾಗಲೇ ಸ್ಥಳ ಕೂಡ ಅವಕಾಶ ದೂರೆಕಿದ್ದು ಸಹಕಾರಿ ಮಹಾಮಂಡಳ ಸಭೆಯಲ್ಲಿ ತೀರ್ಮಾನಿಸಿ ಒಪ್ಪಿಗೆ ತೆಗೆದುಕೊಂಡು ಕ್ರಮವಹಿಸಲಾಗುವದು ಎಂದು ಸರ್ವ ಸದಸ್ಯರಿಗೆ ತಿಳಿಸಿದರು.

ಒಕ್ಕೂಟದ ವತಿಯಿಂದ ಜಿಲ್ಲೆಯ ಹಿರಿಯ ಸಹಕಾರಿಗಳಿಗೆ ಹಾಗೂ ಸಹಕಾರಿ ಹಿರಿಯ ಧುರೀಣರಿಗೆ ಗೌರವಿಸಲಾಯಿತು.

ಪ್ರಮುಖರಾದ ಮಲ್ಲಿಕಾರ್ಜುನರಡ್ಡಿಗೌಡ ಕೌಳೂರ, ಎಂ.ನಾರಾಯಣ ಶಹಪುರ್,ಭಿಮರೆಡ್ಡಿ ಬೈರಡ್ಡಿ ಗೋಗಿ,ರಾಮನಗೌಡ ಸುಬೇದಾರ, ಅಕ್ಕಮಾಹಾದೇವಿ ಆಲಗೂರ, ಕವಿತಾ ರೇವಡಿ ಹುಣಸಗಿ, ಇವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಯುನಿಯನ್ ಒಕ್ಕೂಟದ ನಿರ್ದೇಶಕರಾದ ಸಿದ್ರಾಮರಡ್ಡಿ ಕೌಳೂರ,ಬಾಪುಗೌಡ ಹುಣಸಗಿ, ರಾಜಾಮುಖಂದ ನಾಯಕ, ಕೆಂಚಪ್ಪ ನಗನೂರ, ನಾಜಿಮ್ ಅಹಮ್ಮದ್, ಅಂಬ್ರಣ್ಣಗೌಡ ಗಡ್ಡೆಸೂಗರು, ವೈಜನಾಥ ಪಾಟೀಲ್ ತುಮಕೂರು ಪ್ರಕಾಶ ಅಂಗಡಿ ಕನ್ನೆಳ್ಳಿ,ಸಹಕಾರ ಸಂಘಗಳು ಸಹಾಯಕ ನಿಬಂಧಕರಾದ ಸಿಮಾ ಪಾರೂಖಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಸುಜಾತ ಹಿರೇಮಠ, ಮಲ್ಲಯ್ಯ ಸ್ವಾಮಿ ಹಾಗೂ ಅನೇಕ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಅನೇಕ ಸರ್ವ ಸದಸ್ಯರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago