ಇಂದು ಶ್ರಮಿಸಿದರೆ ಮುಂದಿನ ಸುಖ ಜೀವನಕ್ಕೆ ದಾರಿದೀಪ

ಕಲಬುರಗಿ: ಇಂದಿನ ಮಕ್ಕಳು ಬಹಳ ಕಷ್ಟಪಟ್ಟು ಇಂತಹ ಸ್ಪರ್ಧಾ ಯುಗದಲ್ಲಿ ಶ್ರಮ ಪಟ್ಟು ಓದಿದರೆ ಮುಂದಿನ ನಿಮ್ಮ ಜೀವನಕ್ಕೆ ದಾರಿದೀಪವಾಗುವುದೆಂದು ಐಎಎಸ್ ಅಧಿಕಾರಿ ಮತ್ತು ಗೃಹ ಮಂಡಳಿ ಆಯುಕ್ತರಾದ ಶ್ರೀ ಕವಿತಾ ಮನ್ನಿಕೇರಿಯವರು ಹೇಳಿದರು.

ಅವರು ಜಿಲ್ಲಾ ಗಾಣಿಗ ಸಮಾಜ ನೌಕರರ ಸಂಘ ಹಮ್ಮಿಕೊಂಡ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಿ ಸನ್ಮಾನಿಸಿ ಮಾತನಾಡುತ್ತಾ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿ ಕಷ್ಟ ಪಟ್ಟರೆ ಮುಂದೆ ನಾವು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆದು ಸುಖಕರವಾದ ಜೀವನವನ್ನು ನಡೆಸಬಹುದು ಇಲ್ಲದೇ ಹೋದರೆ ಜೀವನದಲ್ಲಿ ಬಹಳ ಹೇಳು ಬೀಳುಗಳನ್ನು ಕಾಣೋದಲ್ಲದೆ ಕಷ್ಟದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಇಂದಿನ ಸ್ಪರ್ಧಾ ಯುಗದಲ್ಲಿ ನಾವು ಎಷ್ಟೇ ಕಷ್ಟಪಟ್ಟು ಶ್ರಮಿಸಿ ಓದಿದರೂ ಅದು ಕಡಿಮೆ ಆದ್ದರಿಂದ ನಮ್ಮ ಸಮಾಜದ ಮಕ್ಕಳು ಬಹಳ ಶ್ರಮವಹಿಸಿ ಈಗ ಶ್ರಮಪಟ್ಟರೆ ಮುಂದೆ ನಿಮಗೆ ಸುಖಕರ ಜೀವನ ಸಿಗಲಿದೆ ಎಂದು ಹೇಳಿದರು.

ವೇದಿಕೆ ಮೇಲೆ ಅಸಿನ ರಾಧ ಸಮಾಜದ ಇನ್ನೊಬ್ಬ ಅತಿಥಿಗಳಾದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲ ಸಚಿವರಾದ ರುದ್ರಗೌಡ ಬಿರಾದಾರವರು ಮಾತನಾಡುತ್ತಾ ನಮ್ಮ ಸಮಾಜ ಇನ್ನೂ ಬಹಳ ಹಿಂದುಳಿದಿದೆ ಅದಕ್ಕೆ ಮುಂದೆ ತರಲು ಶಿಕ್ಷಣ ಬಹಳ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಇನ್ನೋರ್ವ ಅತಿಥಿಗಳಾದ ಸೇಡಂನ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುನಿಲ್ ಬಾವಿಕಟ್ಟಿ ಮಾತನಾಡುತ್ತಾ ಮಕ್ಕಳು ಗುರಿ ಇಟ್ಟುಕೊಂಡು ಪರಿಶ್ರಮ ಪಟ್ಟರೆ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಪೋಲಿಸ್ ಪಾಟೀಲ್ ಅವರು ಮಾತನಾಡುತ್ತಾ ನಮ್ಮ ಸಮಾಜ ಇನ್ನೂ ಬಹಳ ಹಿಂದುಳಿದಿದೆ ಅದಕ್ಕೆ ಮುಖ್ಯ ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಎಂದರು.

ಆದಕಾರಣ ಸಮಾಜ ಬಾಂಧವರು ಯಾರು ಅನ್ಯತಾ ಭಾವಿಸದೆ ಸಮಾಜದಲ್ಲಿ ಬೆಳೆಯುವ ವ್ಯಕ್ತಿಯನ್ನು ನಾವೆಲ್ಲರೂ ಕೂಡಿ ಪ್ರೋತ್ಸಾಹಿಸಿದರೆ ಸಮಾಜ ಮುಂದೆ ಬರಲು ಸಾಧ್ಯ ಎಂದು ಹೇಳಿದರು.

ಉದ್ಘಾಟನೆಯನ್ನು ಆಳೂರು ಸಿದ್ದಾರೂಢ ಮಠದ ಶಂಕರಾನಂದ ಮಹಾಸ್ವಾಮಿಗಳು ನೆರವೇರಿಸಿದರು
ವೇದಿಕೆಯ ಮೇಲೆ ಸಮಾಜದ ಹಿರಿಯರಾದ ಅಪ್ಪಾರಾಯ ಗೌಡ ಮಾಲಿ ಪಾಟೀಲ್ ಅತ್ನೂರ್, ಮಲ್ಲಿನಾಥ ಗೌಡ ಪಾಟೀಲ ಯಲಗೋಡ, ದೇವೇಂದ್ರ ಎಸ್ ಬಿರಾದಾರ್ ಮತ್ತು ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಶರಣು ಬಿಲ್ಲಾಡ್, ಮತ್ತು ಆಡಳಿತ ಮಂಡಳಿಯ ಸದಸ್ಯರು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago