ಪ್ರವಾದಿಯ ಅನುಯಾಯಿಗಳು ಎಲ್ಲಿ?

(1)
ಪ್ರವಾದಿಯ ಅನುಯಾಯಿಗಳು ಎಲ್ಲಿ?

ನಿನ್ನ ಒಡ ಹುಟ್ಟಿದವರ ವಿರುದ್ಧವಾದರೂ ಸರಿಯೇ ಸತ್ಯವನ್ನೆ ನುಡಿ ಎಂದ ನನ್ನ ಪ್ರವಾದಿಯ
ಅನುಯಾಯಿಗಳು ಎಲ್ಲಿ?

ನೆರೆಹೊರೆಯವನು ಉಪವಾಸ
ಇರುವಾಗ ಹೊಟ್ಟೆ ತುಂಬ ಉಣ್ಣುವವನು ನನ್ನವನಲ್ಲ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಕಾಮಿ೯ಕನ ಬೆವರು ಆರುವ
ಮುನ್ನ ವೇತನ ಪಾವತಿಸಲು ಹೇಳಿದ
ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ ?

ಅನ್ಯಾಯವಾಗಿ ಒಂದು ಜೀವ ಹರಣ
ಮಾಡಿದರೆ ಇಡೀ ಮನುಕುಲ
ಹತ್ಯೆ ಮಾಡಿದಂತೆ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಬಡವರನ್ನು ಬಿಟ್ಟು ಶ್ರೀಮಂತರನ್ನು ಆಮಂತ್ರಿಸುವ ವಿವಾಹ ಔತಣ ಅತ್ಯಂತ ಕೆಟ್ಟದ್ದು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಯಾರ ಹೃದಯದಲ್ಲಿ ಅತ್ಯಲ್ಪವಾದರೂ ದುರಹಂಕಾರವಿದೆಯೋ ಅವನು ಸ್ವಗ೯ ಪ್ರವೇಶಿಸಲಾರ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ನೆರೆಹೊರೆಯವರೂಂದಿಗೆ ಅತ್ಯುತ್ತಮವಾಗಿ ನಡೆದುಕೊಳ್ಳುವನೇ ನೈಜ ಮುಸ್ಲಿಮನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಹುಲ್ಲು ಸೌದೆ ಸುಡುವಂತೆ ನಿಮ್ಮ ಒಳಿತನ್ನು ಭಸ್ಮ ಮಾಡುವ ಅಸೂಯೆ ಎಂಬ ಬೆಂಕಿಯ ಕುರಿತು ಎಚ್ಚರಿಸಿದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ನನ್ನನ್ನು ಬಡ ಶೋಷಿತರ ಮತ್ತು ರೋಗಿಗಳ ಮಧ್ಯೆ ಹುಡುಕಲು ಹೇಳಿದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ತಂದೆ ತಾಯಿಯ ಸೇವೆಯ ಮೂಲಕ ಸ್ವಗ೯ ಪ್ರಾಪ್ತಿಯ ಅವಕಾಶ ವಂಚಿತನೇ ದರಿದ್ರನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ದಾನ ಧರ್ಮದಿಂದ ಸಂಪತ್ತು ಕ್ಷಿಣಿಸದು, ಶ್ರಮವಿಲ್ಲದೆ ವೃದ್ಧಿಯಾಗುವ ಬಡ್ಡಿ ಹರಾಮ್ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಆತನೆ ಉಣಿಸಿದನು ಕುಡಿಸಿದನು ಮತ್ತು ಸತ್ಯ ವಿಶ್ವಾಸಿಯನ್ನಾಗಿಸಿದನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ ಎಲ್ಲಿ ಎಲ್ಲಿ?

ರಚನೆ: ಹಟ್ಟಿ ನಜೀರ್ ಮಿಯಾನ್
ಕಲಬುರಗಿ.ಮೊ: 9880792177

emedialine

View Comments

  • ಹಟ್ಟಿ ನಜೀರ್ ಮಿಯಾನ್ ಅವರ "ಅನುಯಾಯಿಗಳು ಎಲ್ಲಿ?" ಕವಿತೆ ತುಂಬಾ ಹಿಡಿಸಿತು. ಹೇಳಬೇಕಾದ್ದನ್ನು ಅತ್ಯಂತ ಸ್ಪಷ್ಟವಾಗಿ ಹಾಗೂ ಮನವರಿಕೆ ಆಗುವಂತೆ ಬರೆದಿದ್ದಾರೆ. ಅತ್ಯಂತ ಪ್ರಮುಖವಾಗಿ, ಕಾರ್ಮಿಕನ ಬೆವರು ಒಣಗುವುದಕ್ಕೂ ಮೊದಲೇ ವೇತನ ಪಾವತಿಸಬೇಕೆಂಬ ಕಿವಿಮಾತು ಇಸ್ಲಾಂ ಧರ್ಮವು ಮಾನವೀಯ ಮೌಲ್ಯಗಳ ಆರಾಧನೆಗಿಂತಲೂ ಆಚರಣೆಗೆ ಹೆಚ್ಚು ಒತ್ತು ನೀಡಿದೆ ಎಂಬುದು ಮನದಟ್ಟಾಗುವಂತಿದೆ.

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

7 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

7 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

7 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

7 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

7 hours ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

7 hours ago