ಪ್ರವಾದಿಯ ಅನುಯಾಯಿಗಳು ಎಲ್ಲಿ?

1
197

(1)
ಪ್ರವಾದಿಯ ಅನುಯಾಯಿಗಳು ಎಲ್ಲಿ?

ನಿನ್ನ ಒಡ ಹುಟ್ಟಿದವರ ವಿರುದ್ಧವಾದರೂ ಸರಿಯೇ ಸತ್ಯವನ್ನೆ ನುಡಿ ಎಂದ ನನ್ನ ಪ್ರವಾದಿಯ
ಅನುಯಾಯಿಗಳು ಎಲ್ಲಿ?

ನೆರೆಹೊರೆಯವನು ಉಪವಾಸ
ಇರುವಾಗ ಹೊಟ್ಟೆ ತುಂಬ ಉಣ್ಣುವವನು ನನ್ನವನಲ್ಲ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಕಾಮಿ೯ಕನ ಬೆವರು ಆರುವ
ಮುನ್ನ ವೇತನ ಪಾವತಿಸಲು ಹೇಳಿದ
ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ ?

ಅನ್ಯಾಯವಾಗಿ ಒಂದು ಜೀವ ಹರಣ
ಮಾಡಿದರೆ ಇಡೀ ಮನುಕುಲ
ಹತ್ಯೆ ಮಾಡಿದಂತೆ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಬಡವರನ್ನು ಬಿಟ್ಟು ಶ್ರೀಮಂತರನ್ನು ಆಮಂತ್ರಿಸುವ ವಿವಾಹ ಔತಣ ಅತ್ಯಂತ ಕೆಟ್ಟದ್ದು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಯಾರ ಹೃದಯದಲ್ಲಿ ಅತ್ಯಲ್ಪವಾದರೂ ದುರಹಂಕಾರವಿದೆಯೋ ಅವನು ಸ್ವಗ೯ ಪ್ರವೇಶಿಸಲಾರ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ನೆರೆಹೊರೆಯವರೂಂದಿಗೆ ಅತ್ಯುತ್ತಮವಾಗಿ ನಡೆದುಕೊಳ್ಳುವನೇ ನೈಜ ಮುಸ್ಲಿಮನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಹುಲ್ಲು ಸೌದೆ ಸುಡುವಂತೆ ನಿಮ್ಮ ಒಳಿತನ್ನು ಭಸ್ಮ ಮಾಡುವ ಅಸೂಯೆ ಎಂಬ ಬೆಂಕಿಯ ಕುರಿತು ಎಚ್ಚರಿಸಿದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ನನ್ನನ್ನು ಬಡ ಶೋಷಿತರ ಮತ್ತು ರೋಗಿಗಳ ಮಧ್ಯೆ ಹುಡುಕಲು ಹೇಳಿದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ತಂದೆ ತಾಯಿಯ ಸೇವೆಯ ಮೂಲಕ ಸ್ವಗ೯ ಪ್ರಾಪ್ತಿಯ ಅವಕಾಶ ವಂಚಿತನೇ ದರಿದ್ರನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ದಾನ ಧರ್ಮದಿಂದ ಸಂಪತ್ತು ಕ್ಷಿಣಿಸದು, ಶ್ರಮವಿಲ್ಲದೆ ವೃದ್ಧಿಯಾಗುವ ಬಡ್ಡಿ ಹರಾಮ್ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಆತನೆ ಉಣಿಸಿದನು ಕುಡಿಸಿದನು ಮತ್ತು ಸತ್ಯ ವಿಶ್ವಾಸಿಯನ್ನಾಗಿಸಿದನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ ಎಲ್ಲಿ ಎಲ್ಲಿ?

ರಚನೆ: ಹಟ್ಟಿ ನಜೀರ್ ಮಿಯಾನ್
ಕಲಬುರಗಿ.ಮೊ: 9880792177

1 ಕಾಮೆಂಟ್

  1. ಹಟ್ಟಿ ನಜೀರ್ ಮಿಯಾನ್ ಅವರ “ಅನುಯಾಯಿಗಳು ಎಲ್ಲಿ?” ಕವಿತೆ ತುಂಬಾ ಹಿಡಿಸಿತು. ಹೇಳಬೇಕಾದ್ದನ್ನು ಅತ್ಯಂತ ಸ್ಪಷ್ಟವಾಗಿ ಹಾಗೂ ಮನವರಿಕೆ ಆಗುವಂತೆ ಬರೆದಿದ್ದಾರೆ. ಅತ್ಯಂತ ಪ್ರಮುಖವಾಗಿ, ಕಾರ್ಮಿಕನ ಬೆವರು ಒಣಗುವುದಕ್ಕೂ ಮೊದಲೇ ವೇತನ ಪಾವತಿಸಬೇಕೆಂಬ ಕಿವಿಮಾತು ಇಸ್ಲಾಂ ಧರ್ಮವು ಮಾನವೀಯ ಮೌಲ್ಯಗಳ ಆರಾಧನೆಗಿಂತಲೂ ಆಚರಣೆಗೆ ಹೆಚ್ಚು ಒತ್ತು ನೀಡಿದೆ ಎಂಬುದು ಮನದಟ್ಟಾಗುವಂತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here