ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿ 60:40 ಅನುಪಾತದಂತೆ ನಾಗರೀಕ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಘಟಕಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸುವ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಅಗ್ನಿಶಾಮಕ ಠಾಣೆಗಳನ್ನು ಹೆಚ್ಚಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ಎನ್ ದೇಗಾಂವ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
2019 ರಂದು ಕಲಬುರಗಿ ಜಿಲ್ಲೆಯಲ್ಲಿ ಪೆÇಲೀಸ್ ಆಯುಕ್ತಾಲಯ ಸ್ಥಾಪನೆಯಾಗಿದ್ದು, ಇದರಲ್ಲಿ ಸಿಮಿ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಘಟಕಗಳಲ್ಲಿ (ಅಂದರೆ ಲೋಕಾಯುಕ್ತ, ಸಿಓಡಿ, ಎಸಿಬಿ, ಜೆಸ್ಕಾಂ, ಐಎಸ್‍ಡಿ) ನಿಯೋಜನೆ ಮಾಡುವಾಗ ತಾರತಮ್ಯವಾಗಿರುತ್ತದೆ. ಈ ಎಲ್ಲಾ ಘಟಕಗಳಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು. ರಾಜ್ಯದಲ್ಲಿರುವ ಎಲ್ಲಾ ಕಮೀಷನರೇಟ್ ನಗರಗಳಾದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡದಂತೆ ಕಲಬುರಗಿ ನಗರಕ್ಕೂ ಸಹ 60:40 ಅನುಪಾತದಂತೆ ಕಲಬುರಗಿ ಜಿಲ್ಲೆಯ ಘಟಕಗಳಲ್ಲಿ ನಾಗರಿಕ ಪೆÇಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ ಅನುಕೂಲವಾಗುವಂತೆ ನಿಯೋಜನೆ ಕರ್ತವ್ಯಕ್ಕೆ ವರ್ಗಾಯಿಸಬೇಕು.
ಕಲಬುರಗಿ ನಗರ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸುಮಾರು 8 ಲಕ್ಷ ಜನರು ವಾಸಿಸುತ್ತಿದ್ದು, ಇದಕ್ಕೆ ಆನುಗುಣವಾಗಿ ಹೊಸ ಪೆÇಲೀಸ್ ಠಾಣೆಗಳ ಅವಶ್ಯಕತೆ ಇರುತ್ತದೆ ಮತ್ತು ಈಗಾಗಲೇ ಇರುವ ಪೆÇಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯಲ್ಲಿ ಕೊರತೆ ಇರುತ್ತದೆ. ಆದ್ದರಿಂದ ಸಿಬ್ಬಂದಿ ಸಂಖ್ಯಾಬಲ ಹೆಚ್ಚಿಸಬೇಕು. ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ ಹೆಚ್ಚುವರಿ ಪೆÇಲೀಸ್ ಠಾಣೆಗಳನ್ನು ಮಂಜೂರು ಮಾಡಬೇಕು.
ಪೆÇಲೀಸರಿಗೆ ಒಂದು ಹಗಲು ರಾತ್ರಿ ಬಿಟ್ ಕರ್ತವ್ಯ ನಿರ್ವಹಿಸಲು ಪೆಟ್ರೋಲ್ ಭತ್ತೆ ನೀಡಬೇಕು, ಔರಾದಕರ್ ವರದಿಯನ್ನು ಮೊದಲಿನಂತೆ ಸಮರ್ಪಕವಾಗಿ ಜಾರಿಗೊಳಿಸಬೇಕು, ಪೆÇಲೀಸರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ದಿನದ ಮೂರು ಬಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಮಾನ್ಯ ಡಿ.ಜಿ. ಆದೇಶದ ಅನುಮೋದನೆ ಹೊರಡಿಸಬೇಕು, ಪೆÇೀಲಿಸ್ ಸಿಬ್ಬಂದಿಗೆ ತಮ್ಮ ವೇತನದಲ್ಲಿ ಬೀಟ್ ಕರ್ತವ್ಯಕ್ಕಾಫಿ 3000 ರಿಂದ 4000 ಖರ್ಚಾಗುತ್ತಿದ್ದು ಆರ್ಥಿಕ ನೆರವು ನೀಡಬೇಕು, ಪೆÇಲೀಸರ ಆರೋಗ್ಯದ ಹಿತದೃಷ್ಟಿಯಿಂದ ಕನಿಷ್ಠ ಎರಡು ದಿನಕೊಮ್ಮೆ ರಾತ್ರಿಗಸ್ತು ನಿರ್ವಹಿಸಲು ಡಿ.ಜಿ. ಆದೇಶ ಅನುಮೋದನೆ ಹೊರಡಿಸಬೇಕು.ಪೆÇಲೀಸ್ ಸಿಬ್ಬಂದಿಗಳ 12 ಗಂಟೆ ಅವಧಿಯನ್ನು 8 ಗಂಟೆಗೆ ಇಳಿಸಬೇಕು, ಸಿಬ್ಬಂದಿಗಳಿಗೆ ಸಿ.ಎಲ್ . ಜೊತೆಗೆ ವಾರದ ರಜೆ ಮಂಜೂರು ಮಾಡಬೇಕು, ಕಲಬುರ್ಗಿ ನಗರದಲ್ಲಿ ಒಂದೇ ಅಗ್ನಿಶಾಮಕ ಠಾಣೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಇತ್ತೀಚಿಗೆ ಹೋಟೆಲ್ ವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಿಸಿದಾಗ ಸರಿಯಾದ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ತಲುಪದೇ ಇದರಿಂದ ಹಲವಾರು ಜೀವಗಳು ಬಲಿಯಾಗಿರುತ್ತವೆ. ಆದ್ದರಿಂದ ಕೂಡಲೇ ಕಲಬುರ್ಗಿ ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇನ್ನು ಹೆಚ್ಚಿನ ಅಗ್ನಿಶಾಮಕ ಠಾಣೆಗಳನ್ನು ಹೆಚ್ಚಿಸಬೇಕು. ಎಂದು ಸಿಎಂ ಅವರುಗೆ ಮನವಿ ಮಾಡಿದ್ದಾರೆ.
ಕಲಬುರಗಿ: ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಮೊದಲು ಕಬ್ಬಿಗೆ ದರ ನಿಗದಿಪಡಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಾಜಿ ಶಾಸಕ…
ಕಲಬುರಗಿ: ಕರ್ನಾಟಕ ರಾಜ್ಯ ಹಾಗೂ ಕಲಬುರಗಿ ಜಿಲ್ಲೆಯ ಬಡ ರೈತರ ಜಮೀನಿನ ಪಹಣಿಯಲ್ಲಿ ಮತ್ತು ಮಠ, ಮಂದಿರಗಳ ಆಸ್ತಿ ದಾಖಲೆಯಲ್ಲಿ…
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಮಲ್ಲಿಕಾರ್ಜುನ ಕಾಂಬಳೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿವಿ ಡಾಕ್ಟರೇಟ್ ಪದವಿ ಲಭಿಸಿದೆ…
ಕಲಬುರಗಿ: ರಾಜ್ಯ ಗಂಗಾಮತ ನೌಕರರ ಸಂಘದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಂಗಾ ವಿದ್ಯಾಸಿರಿ ಯೋಜನೆಯ ಅನುಷ್ಠಾನದ…
ಕಲಬುರಗಿ: ನಗರದ ಸಂತ ಜೋಸೆಫ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ದೇಶಿ ಹಬ್ಬ ದಶಮಾನೋತ್ಸವವನ್ನು ಜಿಲ್ಲಾಧಿಕಾರಿ ಫೌಜಿಯಾ ಬಿ.ತರನ್ನುಮ್ ಅವರು ಉದ್ಘಾಟಿಸಿ…
ಕಲಬುರಗಿ; ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರ ಪತ್ನಿ ಶ್ರೀಮತಿ ಶಕುಂತಲಾ ಭೀಮಳ್ಳಿ ಅವರ…