ಕೆಕೆಆರ್‌ಡಿಬಿಗೆ ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳ ಅವಧಿಗೆ ವಾರ್ಷಿಕ 5 ಸಾವಿರ ಕೋಟಿ ಅನುದಾನ ನೀಡಲಿ

ಕಲಬುರಗಿ; ಕಲಬುರಗಿ ಕೇಂದ್ರವಾಗಿರುವಂತೆ ಇರುವ ಹಿಂದುಳಿದ ಕಲ್ಯಾಣ ನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್‌, ಬಳ್ಳಾರಿ, ಯಾದಗಿರಿ, ರಾಯಚೂರು, ಕೊಪ್ಪಳ ವಿಜಯನಗರ ಜಿಲ್ಲೆಗಳಲ್ಲಿನ ಮೂಲ ಸೌಕರ್ಯ ಸೃಷ್ಟಿ, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು, ಶಿಕ್ಷಣ ಮಟ್ಟ ಹೆಚ್ಚಿಸಲು, ಆರೋಗ್ಯ ಸೇವೆಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ವಾರ್ಷಿಕ 5 ಸಾವಿರ ಕೋಟಿ ರುಪಾಯಿಯಂತೆ ಮುಂದಿನ 5 ವರ್ಷಗಳಿಗೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡುವಂತಾಗಲಿ.ಈ ಕುರಿತಂತೆ ಕಲಬುರಗಿಯಲ್ಲಿ ಸೆ. 17 ರಂದು ನಡೆದ ಐತಿಹಾಸಿಕ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ಜಾರಿಗೆ ತರಲು ಕೇಂದ್ರದ ಮೇಲೆ ರಾಜ್ಯ ಒತ್ತಡ ಹೇರಲಿ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಧರ್ಮಸಿಂಗ್‌ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ನೀಡಿ ಗಮನ ಸೆಳೆದಿದ್ದಾರೆ.

ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗಲೇ ಹಿಂದುಳಿದ ಈ ಬಾಗದ ಪ್ರಗತಿ ವೇಗವರ್ಧನೆಗೆ ಸಂವಿಧಾನದ ಕಲಂ 371 ಜೆ ಅನ್ವಯಿಸಲಾಗಿದೆ. ರಾಹುಲ್‌ ಗಂಧಿಯವರೇ ಕಲಬುರಗಿಗೆ ಬಂದಾಗ ಕಲಂ 371 ಜೆ ಅನುಷ್ಠಾನದ ಬಗ್ಗೆ ತಾವು ನೀಡಿದ್ದ ವಾಗ್ದಾನದಿದಂತೆಯೇ ಅದನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಲಂ ಕಲ್ಯಾಣ ನಾಡಿಗೆ ಅನ್ವಯವಾಗಲು ಮಾಜಿ ಸಿಎಂ ದಿ. ಧರಂಸಿಂಗ್‌ ಅವರು ಎಐಸಿಸಿ ಅದ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆ ಅಪಾರ ಇಷ್ಟೆಲ್ಲಾ ಇದ್ದರೂ ಕೇಂದ್ರ ಸರ್ಕಾರದ ಈ ಭಾಗಕ್ಕೆ ಅಭಿವೃದ್ಧಿ ಅನುದಾನ ಇಲ್ಲಿಯವರೆಗೂ ನೀಡದೆ ಅಲಕ್ಷಿಸಿದೆ ಎಂದು ಡಾ. ಅಜಯ್‌ ಸಿಂಗ್‌ ಪತ್ರದಲ್ಲಿ ಅಂಕಿ- ಸಂಖ್ಯೆ ಸಮೇತವಾಗಿ ವಿವರಿಸಿದ್ದಾರೆ.

ಸಂವಿಧಾನದ ಕಲಂ 371 ಜೆ ಅನುಷ್ಠಾನದ ನಂತರ ಪ್ರತ್ಯೇಕ ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯ್‌ತು. ಮುಂದೆ 2019 ರಲ್ಲಿ ಈ ಭಾಗಕ್ಕೆ ಕಲ್ಯಾಣ ಕರ್ಟಕವೆಂಬ ಮರುನಾಮಕರಣ ಮಾಡಿದಾಗ, ಕಲ್ಯಾಣ ಕರ್ಟಾಟಕಪ್ರದೇಶಾಭಿವೃದ್ಧಿ ಮಂಡಳಿ ಎಂದು ಅಭಿವೃದ್ಧಿ ಮಂಡಳಿಗೆ ಹೆಸರಿಡಲಾಯ್ತು.

ಉದ್ಯೋಗ ನೇಮಕಾತಿ, ಅಭಿವೃದ್ಧಿ ಅನುದಾನ ಹಾಗೂ ಶಿಕ್ಷಣದಲ್ಲಿ ಕಲಂ 371 ಜೆ ಕಲ್ಯಾಣಕ್ಕೆ ವಿಶೇಷ ರಕ್ಷಾಕವಚವಾಗಿ ನಿಂತಿದೆ. ರಾಜ್ಯ ಆರಂಭದಲ್ಲಿ ಕೆಕೆಆರ್‌ಡಿಬಿಗೆ 1 ಸಾವಿರ ಕೋಟಿ ರು ನಿಂದ ಹಿಡಿದು ಇದೀಗ 5 ಸಾವಿರ ಕೋಟಿ ರು ವರೆಗೂ ಅನುದಾನ ನೀಡುತ್ತಿದೆ. ರಾಜ್ಯ ನೀಡುವ 5 ಸಾವಿರ ಕೋಟಿ ಅನುದಾನದಷ್ಟೇ ಮೊತ್ತ ಕೇಂದ್ರದಿಂದಲೂ ನಮ್ಮ ಬಾಗಕ್ಕೆ ಬಿಡುಗಡೆಯಾಗಬೇಕು. ಹೆಚ್ಚುವರಿ ಅನುದಾನ ನಾವಿಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿಯಂತಹ ಅಭಿವೃದ್ಧಿಗೆ ಬಳಸಲು ಅನುಕೂಲವಾಗುತ್ತದೆ ಎಂದೂ ಡಾ. ಅಜಯ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

2013- 14 ರಿಂದ 2024- 25 ರ ವರೆಗೆ ರಾಜ್ಯ ಸರ್ಕಾರ 19, 778 ಕೋಟಿ ರು ಅನುದಾನ ಈ ಬಾಗಕ್ಕೆ ಮೀಸಲಿಟ್ಟಿದ್ದು ಈ ಪೈಕಿ 13, 228 ಕೋಟ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದು ಅದರಲ್ಲಿ 11, 221 ಕೋಟಿ ರು ಅನುದಾನ ವೆಚ್ಚವಾಗಿದೆ. ಕೆಕೆಆರ್‌ಡಿಬಿ ಈ ಹಣದಲ್ಲಿ ಮೂಲ ಸವಲತ್ತು ಹುಟ್ಟು ಹಾಕಲು ಸಾಕಷ್ಟು ಯೋಜನೆಗಳನ್ನು ಈ ಬಾಗದ 7 ಜಿಲ್ಲೆಗಳಲ್ಲಿ ಕೈಗೊಂಡಿದೆ. 2024- 25 ರಲ್ಲಿ ಸರಕಾರ ಮಂಡಳಿಗೆ 5 ಸಾವಿರ ಕೋಟಿ ರು ಅನುದಾನ (ಸಾರ್ವಕಾಲಿಕ ದಾಖಲೆ) ಬಿಡುಗಡೆ ಮಾಡಿದೆ.

ಈ ಅನುದಾನವನ್ನ ಮಾನವಾಭಿವೃದ್ಧಿ ಸೂಚ್ಯಂಕದ ಪ್ರಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಲಾಗುತ್ತಿದೆ. ಅಕ್ಷರ, ಆರೋಗ್ಯ, ಅರಣ್ಯ, ಕೃಷಿ, ಅಂತರ್ಜಲ ವೃದ್ಧಿಯಂತಹ ಹಲವು ಯೋಜನೆಗಳು ಅನುಷ್ಠಾನದ ವಿವಿಧ ಹಂತದಲ್ಲಿದ್ದು ಪ್ರಗತಿ ಹಸಿರು ಚಿಗುರುತ್ತಿದೆ. ಈ ಭಾಗದ ಕೂಲಿ ಕಾರ್ಮಿಕರ ಕುಟುಂಬಗಳ ಗುಳೆ ತಪ್ಪಿಸಲು ಇಲ್ಲಿ ಉದ್ಯೋಗಾಧಾರಿತ ಯೋಜನೆಗಳು ಜಾರಿಗೆ ತರುವ ಅಗತ್ಯವಿದೆ.

ಇದಕ್ಕೆಲ್ಲ ಹೆಚ್ಚಿನ ಅನುದಾನವೂ ಬೇಕು. ಹೀಗಾಗಿ ಕೇಂದ್ರ ಸಕ್ರಾದ ಹೆಚ್ಚುವರಿಯಾಗಿ ರಾಜ್ಯ ಬಿಡುಗಡೆ ಮಾಡುತ್ತಿರುವ 5 ಸಾವಿರ ಕೋಟಿ ಮೊತ್ತದಷ್ಟು ಅನುದಾನ ಮಂಡಳಿಗೆ 2024- 25 ರಿಂದ ಮುಂದಿನ 5 ವರ್ಷಗಳ ಕಾಲ ಬಿಡುಗಡೆ ಮಾಡಿದಲ್ಲಿ ಈ ಭಾಗದಲ್ಲಿನ ಆರೋಗ್ಯ, ಶಿಕ್ಷಣ, ಬಾಲ ಕ್ರ್ಮಿಕತೆ ನಿರ್ಮೂಲನೆ, ಉದ್ಯೋಗ ಸೃಷ್ಟಿ, ಅಪೌಷ್ಟಿಕತೆ ನಿವಾರಣೆಯಂತಹ ಹಲವು ಹತ್ತು ರಂಗಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗಲಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಅವರು ಸಿಎಂ ಸಿದ್ದರಾಮಯ್ಯನವರಿಗೆ ಬರೆದಂತಹ 5 ಪುಟಗಳ ಸವಿವರವಾದಂತಹ ಪತ್ರದ ಮೂಲಕ ಗಮನ ಸೆಳೆದಿದ್ದಾರೆ.

ತಾವು ಮುಖ್ಯನಮಂತ್ರಿಗಳಿಗೆ ನೀಡಿರುವ ಪತ್ರದಲ್ಲಿ ಡಾ. ಅಜಯ್ಸಿಂಗ್‌ ಅವರು ಕಲ್ಯಾಣ ಭಾಗದ ತಲಾ ಆದಾಯ, ಆರ್ಥಿಕ ಸಮೀಕ್ಷೆಯ ವರದಿಗಳು, ರಾಜ್ಯದ ಇತರೆ ಭಾಗಗಳಿಗೆ ಹೋಲಿಕೆ ಮಾಡಿ ನೀಡಿರುವ ತೌಲನಿಕ ವರದಿಗಳು, ನಿರುದ್ಯೋಗ, ಉದ್ಯೋಗ ಸೃಷ್ಟಿಯ ಅಗತ್ಯತೆ, ಉನ್ನತ ಶಿಕ್ಷಣದ ಪ್ರವೇಶಾನುಪಾತದ ವರದಿಗಳು ಸೇರಿದಂತೆ ಹಲವು ವೈಜ್ಞಾನಿಕ ಸಮೀಕ್ಷಾ ವರದಿಗಳ ಮುಖ್ಯಂಶಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಗಳಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಕೆಆರ್‌ಡಿಬಿ ಮೂಲಕ ನಾನು ಅಂಕಿ ಸಂಖ್ಯೆ ಸಮೇತ ನೀಡಲಾಗಿರುವ ಮನವಿಯಂತೆಯೇ ಈಗಾಗಲೇ ಕಲಬುರಗಿಯಲ್ಲಿ ಸೆ.1 ರಂದು ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ರಾಜ್ಯ ನೀಡುತ್ತಿರುವ 5 ಸಾವಿರ ಕೋಟಿ ರು ನಷ್ಟೇ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ನಿರ್ಣಯ ಕೈಗೊಂಡಿದ್ದಾರೆ. ಇದು ಅನುಷ್ಠಾನಕ್ಕೆ ಬರಬೇಕು. ಇದಕ್ಕಾಗಿ ರಾಜ್ಯದಿಂದ ಕೇಂದ್ರ ಸರ್ಕಾರದ ಮಲೆ ಒತ್ತಡ ಹೇರಬೇಕು. ಅದಕ್ಕಾಗಿ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಂಡು ಪತ್ರ ಕೊಟ್ಟು ಮತ್ತೆ ಗಮನ ಸೆಳೆದಿರುವೆ. -ಡಾ. ಅಜಯ್‌ ಧರ್ಮಸಿಂಗ್‌, ಅಧ್ಯಕ್ಷರು, ಕೆಕೆಆರ್‌ಡಿಬಿ, ಕಲಬುರಗಿ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago