ಕಲಬುರಗಿ: ಕಲಬುರಗಿಯಲ್ಲಿ ನಡೆಯಲಿರುವ `ಕಾವ್ಯ ಸಂಸ್ಕೃತಿ ಯಾನ’ದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ.ಕಾಶೀನಾಥ ಅಂಬಲಗಿ ಅವರು ಆಯ್ಕೆಯಾಗಿದ್ದಾರೆ ಎಂದು ಆಯೋಜಕರಾದ ಮಲ್ಲಿಕಾರ್ಜುನ ಮಹಾಮನೆ ಹಾಗೂ ಮಹಿಪಾಲರೆಡ್ಡಿ ಮುನ್ನೂರ ತಿಳಿಸಿದ್ದಾರೆ.
ಬೆಂಗಳೂರಿನ ರಂಗಮಂಡಲ ಆಯೋಜಿಸಿದ್ದು, ಸ್ಥಳೀಯ ಸೇಡಂನ ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿμÁ್ಠನ ಸಹಯೋಗದಲ್ಲಿ ಸೆಪ್ಟೆಂಬರ್ 29 ರಂದು ಕಲಬುರಗಿ ನಗರದ ದಿ ಐಡಿಯಲ್ ಫೈನ್ ಆಟ್ರ್ಸ್ ಕಾಲೇಜಿನಲ್ಲಿ ಒಂದು ದಿನದ ಕಾವ್ಯ ಯಾನ ನಡೆಯಲಿದೆ.
ಈ ಯಾನವನ್ನು ಕವಿ ಡಾ.ಕಾಶಿನಾಥ ಅಂಬಲಗೆ ಅವರು ಮುನ್ನಡೆಸಲಿದ್ದಾರೆ. ಕಾವ್ಯ ಸಂಸ್ಕೃತಿ ಯಾನದ ಮೊದಲ ಕಾರ್ಯಕ್ರಮವು ಜುಲೈ ತಿಂಗಳಲ್ಲಿ ಚಾಮರಾಜನಗರದಲ್ಲಿ ಆರಂಭವಾಗಿದ್ದು, ಆಗಸ್ಟ್ ತಿಂಗಳಲ್ಲಿ ಧಾರವಾಡ, ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಕಲಬುರಗಿಯ ಕಲಾನಿಕೇತನದಲ್ಲಿ ತೃತೀಯ ಕಾವ್ಯ ಸಂಸ್ಕøತಿ ಯಾನ ಜರುಗಲಿದೆ. ಸೆ. 29 ರಂದು ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ಕಾವ್ಯ ಸಂಸ್ಕøತಿ ಯಾನ ನಡೆಯಲಿದೆ.
ಸಾಹಿತಿಗಳಾದ ಜಿ ಎನ್ ಮೋಹನ, ಹೇಮಾ ಪಟ್ಟಣಶೆಟ್ಟಿ, ಆರ್ ಜಿ ಹಳ್ಳಿ ನಾಗರಾಜ್, ಚನ್ನಪ್ಪ ಅಂಗಡಿ, ಮೂಡ್ನಾಕೂಡು ಚಿನ್ನಸ್ವಾಮಿ, ಭೈರಮಂಗಲ ರಾಮೇಗೌಡ, ರಂಗಸ್ವಾಮಿ ಸಿದ್ದಯ್ಯ ಸೇರಿದಂತೆ ಅನೇಕರು ಡಾ.ಕಾಶಿನಾಥ ಅಂಬಲಗೆ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…