`ಕಾವ್ಯ ಸಂಸ್ಕøತಿ ಯಾನ’ ಅಧ್ಯಕ್ಷರಾಗಿ ಕವಿ ಅಂಬಲಗೆ ಆಯ್ಕೆ

0
54

ಕಲಬುರಗಿ: ಕಲಬುರಗಿಯಲ್ಲಿ ನಡೆಯಲಿರುವ `ಕಾವ್ಯ ಸಂಸ್ಕೃತಿ ಯಾನ’ದ  ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ.ಕಾಶೀನಾಥ ಅಂಬಲಗಿ ಅವರು ಆಯ್ಕೆಯಾಗಿದ್ದಾರೆ ಎಂದು ಆಯೋಜಕರಾದ ಮಲ್ಲಿಕಾರ್ಜುನ ಮಹಾಮನೆ ಹಾಗೂ ಮಹಿಪಾಲರೆಡ್ಡಿ ಮುನ್ನೂರ ತಿಳಿಸಿದ್ದಾರೆ.

ಬೆಂಗಳೂರಿನ ರಂಗಮಂಡಲ ಆಯೋಜಿಸಿದ್ದು, ಸ್ಥಳೀಯ ಸೇಡಂನ ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿμÁ್ಠನ ಸಹಯೋಗದಲ್ಲಿ ಸೆಪ್ಟೆಂಬರ್ 29 ರಂದು ಕಲಬುರಗಿ ನಗರದ ದಿ ಐಡಿಯಲ್ ಫೈನ್ ಆಟ್ರ್ಸ್ ಕಾಲೇಜಿನಲ್ಲಿ ಒಂದು ದಿನದ ಕಾವ್ಯ ಯಾನ ನಡೆಯಲಿದೆ.

Contact Your\'s Advertisement; 9902492681

ಈ ಯಾನವನ್ನು ಕವಿ ಡಾ.ಕಾಶಿನಾಥ ಅಂಬಲಗೆ ಅವರು ಮುನ್ನಡೆಸಲಿದ್ದಾರೆ. ಕಾವ್ಯ ಸಂಸ್ಕೃತಿ ಯಾನದ ಮೊದಲ ಕಾರ್ಯಕ್ರಮವು ಜುಲೈ ತಿಂಗಳಲ್ಲಿ ಚಾಮರಾಜನಗರದಲ್ಲಿ ಆರಂಭವಾಗಿದ್ದು, ಆಗಸ್ಟ್ ತಿಂಗಳಲ್ಲಿ ಧಾರವಾಡ, ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಕಲಬುರಗಿಯ ಕಲಾನಿಕೇತನದಲ್ಲಿ ತೃತೀಯ ಕಾವ್ಯ ಸಂಸ್ಕøತಿ ಯಾನ ಜರುಗಲಿದೆ. ಸೆ. 29 ರಂದು ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ಕಾವ್ಯ ಸಂಸ್ಕøತಿ ಯಾನ ನಡೆಯಲಿದೆ.

ಸಾಹಿತಿಗಳಾದ  ಜಿ ಎನ್ ಮೋಹನ, ಹೇಮಾ ಪಟ್ಟಣಶೆಟ್ಟಿ, ಆರ್ ಜಿ ಹಳ್ಳಿ ನಾಗರಾಜ್, ಚನ್ನಪ್ಪ ಅಂಗಡಿ, ಮೂಡ್ನಾಕೂಡು ಚಿನ್ನಸ್ವಾಮಿ, ಭೈರಮಂಗಲ ರಾಮೇಗೌಡ, ರಂಗಸ್ವಾಮಿ ಸಿದ್ದಯ್ಯ ಸೇರಿದಂತೆ ಅನೇಕರು ಡಾ.ಕಾಶಿನಾಥ ಅಂಬಲಗೆ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here