ಕಲಬುರಗಿ : ನಗರದ ಹೊರವಲಯದ ಸೈಯದ್ ಚಿಂಚೋಳಿಯಲ್ಲಿರುವ ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಸೇ. 19 ರಿಂದ 21 ರವರೆಗೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ದರ್ಗಾದ ವಂಶಪರಂಪರೆ ಮೂತವಲ್ಲಿ ಹಾಗೂ ಸಜ್ಜದಾ ನಶೀನ್ ಆಶ್ಫಾಕ್ ಅಹ್ಮದ್ ಸಿದ್ಧೀಖಿ ರವರ ನೇತೃತ್ವದಲ್ಲಿ ಸಂದಲ್ (ಗಂಧ), ಚಿರಗಾನ್ (ದೀಪ) ಮತ್ತು ಜಿಯಾರತ್, ಮುಸ್ಲಿಂ ಧಾರ್ಮಿಕ ಕಾರ್ಯರಚನೆ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು.

ದರ್ಗಾದ ಸಜ್ಜದಾ ನಶೀನ್ ಆಶ್ಫಾಕ್ ಅಹ್ಮದ್ ಸಿದ್ಧೀಖಿ ಇವರು ಬಂದ ಅತಿಥಿಗಳಾದ ಚಿತ್ತಾಪೂರ್ ತಾಲೂಕಿನ ದರ್ಗಾ ಹಜರತ್ ಚಿತಾಶಾವಲಿಯ ಸಜ್ಜದಾ ನಶೀನ್ ಸೈಯದ್ ಮಿನ್ಹಾಜುದ್ಧೀನ್ ಸಾಹೇಬ, ದರ್ಗಾ ಬೆಣ್ಣೂರ್ ಸಜ್ಜದಾ ನಶೀನ್ ಸೈಯದ್ ಇಕ್ಬಾಲ್ ಅಲಿ ಸಾಹೇಬ ಮತ್ತು ದರ್ಗಾ ಸಣ್ಣೂರ್ ಮೂತವಲಿ ಮತ್ತು ಸಜ್ಜದಾ ನಶೀನ್ ಅಬ್ದುಲ್ ಸತ್ತಾರ್ ಸಾಹೇಬರು ಇವರೆಲ್ಲಾರಿಗೂ ಸನ್ಮಾಸಿದರು.

ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಶರಣು ಅಲ್ಲಮಪ್ರಭು ಪಾಟೀಲ್ ಇವರು ಭಾಗವಹಿಸಿ ಭಕ್ತರನ್ನು ಉದ್ದೇಶಿಸಿ ಮಾತಾನಾಡುತ್ತಾ ಸದರಿ ಸೈಯದ್ ಚಿಂಚೋಳಿಯಲ್ಲಿರುವ ದರ್ಗಾ ಹಜರತ್ ಸಾತೋ ಶಹೀದ್ ದರ್ಗಾದ ರಸ್ತೆಯನ್ನು ಮತ್ತು ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ಎಂ.ಎಲ್.ಎ ನಿಧಿ ಯೋಜನೆಯಲ್ಲಿ ಮಂಜೂರು ಮಾಡಲಾಗಿದೆ ಮತ್ತು ನೇರವೇರಿದ ಕಾರ್ಯಕ್ರಮವು ಹಿಂದೂ ಮುಸ್ಲಿಂ ಸೌಹಾರ್ದತೆಗೆ ಮಾದರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಹುಮನಿ ನ್ಯೂಸ್ ಉರ್ದು ದಿನಪತ್ರಿಕೆಯ ಹಿರಿಯ ಮುಖ್ಯ ಸಂಪಾದಕ ಅಜೀಜುಲ್ಲಾ ಸರ್ಮಸ್ಥ, ನಯಾ ಸವೇರಾ ಸಂಘಟನೆ ಅಧ್ಯಕ್ಷ ಮೋದೀನ್ ಪಟೇಲ್ ಅಣಬಿ, ಶೇಖ್ ನಿಸಾರ ಸಾಹೇಬ್, ಮೆಹಮೂದ್ ಷಾ, ಮಹಮ್ಮದ್ ಮುನೀರ್, ಇನಾಯತ್ ಖಾನ್ ವಕೀಲರು, ಈರಣ್ಣಾ ಅವರಾದಿ, ಮೆಹಬೂಬ ಸಾಬ್ ಹೊಳಲ್, ಸೈಯದ್ ಪಟೇಲ್ ಮುದ್ದಿ, ಮಹ್ಮದ್ ಜಾಫರ್ ಪಟೇಲ್, ರಘುನಾಥ ಡಾಘೇ, ಕೇಮಲಿಂಗ, ಜಗ್ಗುಬಿಂಗೆ, ಶಂಕರಸಿಂಗ್ ಪೆÇೀಲಿಸ್ ಪಟೇಲ್ ಮತ್ತು ಕರ್ತವ್ಯ ನಿರಿತ ಪೆÇಲೀಸ್ ಸಿಬ್ಬಂದಿಗಳಿಗೆ ದರ್ಗಾದ ವಂಶಪರಂಪರೆ ಮೂತವಲ್ಲಿ ಸಜ್ಜದಾ ನಶೀನ್ ಶ್ರೀ ಆಶ್ಫಾಕ್ ಅಹ್ಮದ್ ಸಿದ್ಧೀಖಿ ಇವರು ಶಾಲು ಹೊದಿಸಿ ಸನ್ಮಾನಿಸಿದರು.

ಸೈಯದ್ ಚಿಂಚೋಳಿ ಗ್ರಾಮದ ಗ್ರಾಮಸ್ಥರು ಮತ್ತು ಸಮಸ್ತ ಭಕ್ತರು ಇವರೆಲ್ಲಾರು ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಪೆÇ್ರತ್ಸಾಹಿಸಿದರು.

ಈ ಮೂರು ದಿನಗಳ ಉರುಸ್ ಕಾರ್ಯಕ್ರಮವನ್ನು ಶಾಂತಿ ಸೌಹಾರ್ದತೆಯಿಂದ ಯಶಸ್ವಿಗೊಳಿಸುವಲ್ಲಿ ಶ್ರೀ ಮಹಮ್ಮದ್ ಘೌಸ್ ಸಿದ್ಧೀಖಿಯವರಲ್ಲದೆ ವಂಶಪರಂಪರೆ ಮೂತವಲ್ಲಿ ಎಲ್ಲಾ ಕುಟುಂಬದ ಸದಸ್ಯರು ಸಹಕರಿಸಿದ್ದಕ್ಕಾಗಿ ದರ್ಗಾದ ವಂಶಪರಂಪರೆ ಮೂತವಲ್ಲಿ ಸಜ್ಜದಾ ನಶೀನ್ ಶ್ರೀ ಆಶ್ಫಾಕ್ ಅಹ್ಮದ್ ಸಿದ್ಧೀಖಿ ಇವರು ಕೃತಜ್ಞನತೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮವನ್ನು ಶಾಂತಿ ಪೂರಕವಾಗಿ ಯಶಸ್ವಿಗೊಳಿಸುವಲ್ಲಿ ಸಹಕರಿಸಿ ಕಾನೂನು ಸುವ್ಯವಸ್ಥೆ ಬಂದೋಬಸ್ತ್ ಮಾಡಿದ ಸಬ್-ಅರ್ಬನ್ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸೆಕ್ಟರ್ ಸಂತೋಷ ಎಲ್ ತತ್ತೆಪಳ್ಳಿ ಇವರು ಮತ್ತು ಸಿಬ್ಬಂದಿಗಳು ಇವರಿಗೆ, ಸ್ವಚ್ಛತೆಯ ಜವಾಬ್ದಾರಿಯನ್ನು ನಿರ್ವಹಿಸಿದ ತಾಜ್-ಸುಲ್ತಾನಪುರ ಪಂಚಾಯತಿಯ ಪಿಡಿಒ ಅನುಪಮ ಮೇಡಂ ಅವರ ಸಿಬ್ಬಂದಿಗಳಿಗೆ, ನಿರಂತರ ವಿದ್ಯುತ ಸರಬರಾಜು ಮಾಡಿದ ಕಾರ್ಯನಿರ್ವಾಹಕ ಅಭಿಯಂತರಾದ ಸುನೀಲಕುಮಾರ, ಸೆಕ್ಷನ್ ಆಫೀಸರ ವಸಂತಕುಮಾರ ಜೆಸ್ಕಾಂ ಮತ್ತು ಅವರ ಸಿಬ್ಬಂದಿಗಳಿಗೆ ಶ್ರೀ ಆಶ್ಫಾಕ್ ಅಹ್ಮದ್ ಸಿದ್ಧೀಖಿ ಅವರು ಪ್ರಕಟಣೆಯ ಮೂಲಕ ಅಭಿನಂದಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

48 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

49 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

52 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago