ಬಿಸಿ ಬಿಸಿ ಸುದ್ದಿ

ಕಲ್ಲು ತೂರಾಟ, ಚಪ್ಪಲಿ ಪ್ರದರ್ಶನ: ಕಲ್ಯಾಣ ಪರ್ವದ ಕೊನೆಯಲ್ಲಿ ಪ್ರತಿಭಟನೆಯ ಬಿಸಿ

ಬಸವಕಲ್ಯಾಣ್: ಪಟ್ಟಣದ ಬಸವ ಮಹಾಮನೆಯ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ೧೮ನೇ ಕಲ್ಯಾಣ ಪರ್ವದ ಕೊನೆಯ ದಿನವಾದ ಭಾನುವಾರ ಸಮಾರೋಪ ಸಮಾರಂಭದ ಹಿನ್ನಲೆಯಲ್ಲಿ ನಗರದಲ್ಲಿ ಪ್ರತಿಭಟನೆ, ಗಲಾಟೆಗಳು ಸಂಭವಿಸಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಪೊಲೀಸರ ಮಧ್ಯೆ ಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.

ಐತಿಹಾಸಿಕ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಬಸವ ಮಹಾಮನೆಯ ಆವರಣದ ವರೆಗೂ ಬಸವ ಭಕ್ತರ ಮೆರವಣಿಗೆ ಸಾಗಿತು. ಈ ಹಿನ್ನಲೆಯಲ್ಲಿ ಶ್ರೀ ಬಸವೇಶ್ವರ್ ದೇವಸ್ಥಾನ ಪಂಚ ಕಮೀಟಿಯಿಂದ ನಗರದ ಶ್ರೀ ಬಸವೇಶ್ವರ್ ವೃತ್ತದಲ್ಲಿ ವಚನಾಂಕಿತ ತಿದ್ದಿದ್ದಾರೆ. ಇವರಿಗೆ ಕಲ್ಯಾಣ ಪರ್ವ ಮಾಡಲು ಯಾವುದೇ ನೈತಿಕತೆ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಮೆರವಣಿಗೆಯು ಶ್ರೀ ಬಸವೇಶ್ವರ್ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಎರಡೂ ಕಡೆಯಿಂದಲೂ ಕೂಗಾಟ, ಕ್ಕಾರಗಳು ಜೋರಾದವು. ಬಿಡಿಪಿಸಿಯಿಂದ ಘೋಷಣೆಗಳು ಕೂಗಿ ವಚನಾಂಕಿತ ತಿದ್ದಿದ್ದವರಿಗೆ ಬಸವಣ್ಣನ ಕರ್ಮ ಭೂಮಿಯಲ್ಲಿ ಕಲ್ಯಾಣ ಪರ್ವ ಮಾಡಲು ನೈತಿಕತೆ ಇಲ್ಲ, ಇದಕ್ಕೆ ನಮ್ಮ ವಿರೋಧ ಇದೆ ಎಂದು ಪರ್ವದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದರು. ಆದರೆ ಶಾಂತ ರೀತಿಯಿಂದ ನಡೆಯುತ್ತಿದ್ದ ಪ್ರತಿಭಟನೆಯೂ ಒಮ್ಮೆಲೆ ಎರಡೂ ಕಡೆಯಿಂದ ಕಾವು ಹೆಚ್ಚಾಯಿತು. ಹೀಗಾಗಿ ಪೊಲೀಸರು ಮೆರವಣಿಗೆಗೆ ಮುಂದೆ ಸಾಗಿಸುವ ಕೆಲಸ ಮಾಡಿದರೆ ಇತ್ತ ಶ್ರೀ ಬಸವೇಶ್ವರ್ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಘೋಷಣೆಗಳು ಕೂಗಲಾಗುತ್ತಿತ್ತು.

ಪ್ರತಿಭಟನಾದಲ್ಲಿ ಪಾಲ್ಗೊಂಡ ಬಿಡಿಪಿಸಿ ಅಧ್ಯಕ್ಷ ಅನಿಲ್ ರಗಟೆ ಅವರ ಹಣೆಗೆ ಕಲ್ಲೊಂದು ಬಡೆಯಿತು. ಹೀಗಾಗಿ ಪ್ರತಿಭಟನಾಕಾರರು ಕುಪಿತಗೊಂಡು ಚಪ್ಪಲಿ ಕೈಯಲ್ಲಿ ಹಿಡಿದು ಪ್ರದರ್ಶಿಸಿದರು. ಇದರಿಂದ ಮತ್ತಷ್ಟು ಕೆರಳಿದ ಮೆರವಣಿಗೆಯಲ್ಲಿ ಭಾಗವಹಿಸಿದವರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಲು ಮುಂದಾದರು. ಆದಾಗ್ಯೂ, ಸ್ಥಳದಲ್ಲಿದ್ದ ಪೊಲೀಸರು ತಡೆದು ಮುಂದಾಗುವ ಅನಾಹುತಗಳು ತಡೆದು ತಿಳಿಗೊಳಿಸಿ ಮೆರವಣಿಗೆ ಸುಗಮವಾಗಿ ಮುಂದೆ ಸಾಗಿಸುವ ಕೆಲಸ ಮಾಡಿದರು. ಮೆರವಣಿಗೆ ಶಾಂತ ರೀತಿಯಿಂದ ಮುಂದೆ ಸಾಗಿದರೆ, ಇತ್ತ ಪ್ರತಿಭಟನೆ ನಡೆಸುತ್ತಿದ್ದವರು ವಾಪಸ್ಸಾದರು. ಹೀಗಾಗಿ ಭಾನುವಾರ ಪೊಲೀಸರು ಕಾರ್ಯತೆಯಿಂದಾಗಿ ಘಟನೆಗಳು ನಡೆದಿಲ್ಲ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಬಿಡಿಪಿಸಿ ಅಧ್ಯಕ್ಷ ಅನಿಲ್ ರಗಟೆ, ವಿಶ್ವಸ್ಥ ಸಮಿತಿಯ ಅಧ್ಯಕ್ಷ ಮಲ್ಲಯ್ಯ ಸ್ವಾಮಿ, ಪದಾಕಾರಿಗಳಾದ ರೇವಣಪ್ಪ ರಾಯವಾಡೆ, ಬಸವರಾಜ್ ಬಾಲಕಿಲೆ, ಸುಭಾಷ್ ಹೊಳಕುಂದೆ, ಅಶೋಕ್ ನಾಗರಾಳೆ, ಸುರೇಶ್ ಸ್ವಾಮಿ, ರಾಜಕುಮಾರ್ ಚಿರಡೆ, ಜಗನ್ನಾಥ್ ಖೂಬಾ, ಗದಗೆಪ್ಪಾ ಹಲಶೆಟ್ಟೆ, ರಾಜಕುಮಾರ್ ಹೊಳಕುಂದೆ, ಭದ್ರಿನಾಥ್ ಪಾಟೀಲ್, ಮಲ್ಲಿಕಾರ್ಜುನ್ ಕುರುಕೋಟೆ, ಮಲ್ಲಿಕಾರ್ಜುನ್ ಚಿರಡೆ, ಶಿವರಾಜ್ ಶಾಶೆಟ್ಟೆ, ಡಾ. ಪ್ರತ್ವಿರಾಜ್ ಬಿರಾದಾರ್, ರವಿ ಕೊಳಕೂರ್, ಶಿವಕುಮಾರ್ ಬಿರಾದಾರ್, ಡಾ. ಎಸ್.ಬಿ/ ದುರ್ಗೆ, ಶಶಿಕಾಂತ್ ದುರ್ಗೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆಯ ಹಿನ್ನಲೆಯಲ್ಲಿ ನಗರದ ಶ್ರೀ ಬಸವೇಶ್ವರ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹುಮ್ನಾಬಾದ್ ಡಿವೈಎಸ್‌ಪಿ ಮಹೇಶ್ವರಪ್ಪ, ಸಿಪಿಐಗಳಾದ ಮಲ್ಲಿಕಾರ್ಜುನ್ ಯಾತನೂರ್, ಎಂ.ಎಂ. ಡಪ್ಪಿನ್, ಪಿಎಸ್‌ಐ ಸುನೀಲಕುಮಾರ್ ಸೇರಿದಂತೆ ಎರಡು ಡಿಆರ್ ತುಕಡಿಗಳು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

8 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

19 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

19 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

21 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

21 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

21 hours ago