14೦೦ ವರ್ಷಗಳು ಗತ್ತಿಸಿದ್ದರೂ ಪ್ರವಾದಿ ಮುಹಮ್ಮದ (ಸ.ಅ) ಇಂದಿಗೂ ಜೀವಂತ

ಕಲಬುರಗಿ: ಜಗತ್ತಿನ ಬಹುತೇಕ ಮಹಾಪುರುಷರು ದೇವರಾಗಿದ್ದಾರೆ. ಆದರೆ ಮುಹಮ್ಮದರು ಐತಿಹಾಸಿಕ ಪುರುಷರಾಗಿ ಉಳಿದಿದ್ದಾರೆ, ಸಮಸಮಾಜದ ಕಲ್ಪನೆ, ಮನಷ್ಯರನ್ನು ಮನುಷ್ಯರೆಂದು ಸಾರಿದ ಸಂದೇಶದಿಂದ ಇದು ಸಾಧ್ಯವಾಗಿದೆ ಎಂದು ಖ್ಯಾತ ಪ್ರವಚನಕಾರ ಮುಹ್ಮದ್ ಕುನ್ಹಿ ಪ್ರತಿಪಾದಿಸಿದರು.

ಕಲಬುರಗಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಮಾಯತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ ಆದರ್ಶ ಸಮಾಜದ ನಿಮಾಣ ಪ್ರವಾದಿ ಮುಹಮ್ಮದರ ಶಿಕ್ಷಣದ ಬೆಳಕಿನಲ್ಲಿ ಎಂಬ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ಪ್ರವಾದಿ ಮುಹಮ್ಮದ್ (ಸ.ಅ) ಅವರು 1400 ವರ್ಷಗಳ ಹಿಂದೆ ಮಾನವೀಯತೆಯ ಪರಿಪೂರ್ಣ ಪಾಠ ಮಾಡಿದ್ದಾರೆ. ಅವರ ಸಂದೇಶಗಳು ಇಂದಿಗೂ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಲು ಮತ್ತು ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸಲು ಸಹಕಾರಿಯಾಗಿವೆ. ಪ್ರವಾದಿ ಅವರ ಜೀವನದ ಕುರಿತು ಪ್ರತಿಯೊಬ್ಬರೂ ಅದ್ಯಯನ ನಡೆಸಿ ಜೀವನದ ಆಳ ಅಗಲ ತಿಳಿದುಕೊಳ್ಳಲು ಸಾಧ್ಯ.

14೦೦ ವರ್ಷಗಳ ಪ್ರವಾದಿ ಮುಹಮ್ಮದರು ಇಂದಿಗೂ ನಮ್ಮಲ್ಲಿ ಜೀವಂತವಾಗಿ ಆದರ್ಶ ವ್ಯಕ್ತಿಯಾಗಿದ್ದಾರೆ, ಹೊರತು ದೇವರಾಗಿಲ್ಲ, ಸಾವಿರಾರು ವರ್ಷಗಳ ಹಿಂದೆ ಮನುಷ್ಯ ಮನುಷ್ಯರನ್ನು ಕೊಲ್ಲುವ ಹಿಂಸಿಸುವ, ಹೆಣ್ಣುಮಗು ಜನಿಸಿದರೆ ಜೀವಂತ ಸಮಾದಿ ಮಾಡುವ ಸಮಾಜವನ್ನು ತಿದ್ದು ಉತ್ತಮ ಸಮಾಜ ಕಟ್ಟಿ ಹೆಣ್ಣು ಮಗುವಿನ ಶ್ರೇಷ್ಠತೆಯನ್ನು ಪ್ರಪಂಚಕ್ಕೆ ಸಾರಿದ ಪ್ರವಾದಿಗಳು, ಯಾವತ್ತು ಪುರಾಣದ ವಸ್ತುವಾಗಿಲ್ಲ ಅವರು ಜೀವಂತ ಪ್ರವಾದಿಯಾಗಿದ್ದಾರೆಂದು ಹೇಳಿದರು.

ನಾನು ಶ್ರೇಷ್ಠ ಕನಿಷ್ಟ ಎಂಬ ಅಹಂ ಸುಳಿದಾಡಿದಾಗ ಜಗತ್ತಿನಲ್ಲಿ ಅಪರಾಧಗಳು ಜನಾಂಗಿಯ ದ್ವೇಷಗಳು ಹುಟ್ಟಲಿಕ್ಕೆ ಕಾರಣಗಳಾಗುತ್ತಿವೆ. ಧರ್ಮಧಾರಿತ, ಜನಾಂಗೀಯ ದ್ವೇಷ ಆಗಿದೆ. ಅಂದು ಪ್ರವಾದಿ ಮುಹ್ಮದರು ನಾವೆಲ್ಲರೂ ಸಮಾನರು ಎಂಬ ತತ್ವ ಪಾಲನೆಯಾದರೆ ಆ ಸಮಾಜದಲ್ಲಿ ಕಲಹಗಳಿರಲ್ಲವೆಂದರು ಹೇಳಿದರು.

ಭೂಮಿಯ ಮೇಲೆ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಡುತ್ತದೆ ಯಾವಧರ್ಮದಲ್ಲಿ ದಯೆ, ಪ್ರೀತಿ, ನಂಬಿಕೆ, ಆದರ್ಶಗಳು ಇರುವುದಿಲ್ಲವೋ ಅದು ಧರ್ಮವೆಂದು ಕರೆಸಿಕೊಳ್ಳುವುದಿಲ್ಲ. ಜಗತ್ತಿನಲ್ಲಿ ಎರಡು ಪಂಗಡದ ಜನರಿದ್ದಾರೆ ಒಂದು ಬೆಂಕಿ ಹಚ್ಚುವ ಮತ್ತು ಇನ್ನೊಂದು ಬೆಂಕಿ ಆರಿಸುವ ಪಂಗಡ, ಆದರೆ ಇಂದು ದೇಶದಲ್ಲಿ ಬೆಂಕಿ ಹಚ್ಚುವವರ ಸಂಖ್ಯೆ ಹೆಚ್ಚಾಗಿದೆ ಆದನ್ನು ದೇಶ ಆಳುತ್ತಿದೆ ಎಂದು ಆಳಂದ ಅನುಭವ ಮಂಟಪದ ಪೂಜ್ಯ ಕೋರಣೇಶ್ವ ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಸಮಾಜವನ್ನು ಜೋಡಿಸುವ ಶಕ್ತಿಗಳೊಂದಿಗೆ ನಮ್ಮ ಬೆಂಬಲವಿರಬೇಕೆ ಹೊರತು ಬೆಂಕಿ ಹಚ್ಚುವರೊಂದಿಗಲ್ಲವೆಂದು ಮಾರ್ಮಿಕವಾಗಿ ನುಡಿದಿರು.ಸಮಾರಂಭದಲ್ಲಿ ಶರಣಬಸವ ವಿವಿ ರಜಿಸ್ಟ್ರಾರ ಡಾ. ಎಸ್. ಡೊಳ್ಳೆ ಗೌಡರ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ನೀಲಕಂಠರಾವ ಮುಲಗೆ, ಕಲಬುರಗಿ ಜಮಾಯಿತೆ ಇಸ್ಲಾಂ ಹಿಂದ್‌ ಮುಪ್ಪಿ ಅಮಿನುಲ್ ಹುಸೇನಿ ನದ್ವಾಯಿ ಸೇರಿದಂತೆ ಹಲವರು ಮಾತನಾಡಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago