ಕಲಬುರಗಿ: ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿದ್ದಾರೆ ಮಾತ್ರ ಮಕ್ಕಳಿಗೆ ಪ್ರಾಚೀನ ಮತ್ತು ಪ್ರಸ್ತುತ ಸಮಾಜದ ಆಗುಹೋಗುಗಳ ಕುರಿತು ಭೋದನೆ ಮಾಡಬಹುದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಠಬೋಧನೆ ಮಾಡಿದರೆ ಮಾತ್ರ ನೀವು ಮಕ್ಕಳ ಗಮನ ಸೆಳೆಯಬಹುದು ಎಂದು ಮಹಾಗಾಂ ವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶರಣಪ್ಪಾ ಮಾಳಗೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಕಮಲಾಪುರ ವತಿಯಿಂದ ಕಮಲಾಪುರದಲ್ಲಿ ರವಿವಾರ ಹಮ್ಮಿಕೊಂಡ
ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಇಂದಿನ ಯುವ ಸಮೂಹದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಡಿಸಿದರು.
ಮಾಜಿ ಜಿಲ್ಲಾ ಪಂಚಯತ್ ಸದಸ್ಯ ಶಿವಶೆಟ್ಟಿ ಪಾಟೀಲ ಮಾತನಾಡಿ ಗುರುವಿನ ಮಾರ್ಗದಲ್ಲಿ ಸಾಗಿದರೆ ಅಂದುಕೊಂಡ ಗುರಿ ಸಾಧಿಸಬಹುದು ಎಂದುರು.
ಕಾಂಗ್ರೆಸ್ ಮುಖಂಡ ಗುರು ಮಾಟೂರ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರವಾದದ್ದು, ಹಿಂದೆ ಗುರು ಮುಂದೆ ಗುರು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಗುರಿ ಸಾಧಿಸಬಹುದು ಎಂದರು.
ಪಿಜಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಕಲಬುರ್ಗಿ ವಿವಿಗೆ ಟಾಪರ್ ಬಂದ ಪಲ್ಲವಿ ತಂದೆ ರಮೇಶ್ ಅವರನ್ನು ಸತ್ಕರಿಸಲಾಯಿತು .
ಸರಕಾರಿ ಪ್ರೌಡಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಸೋಮನಗೌಡ ವಿಟಲಾಪುರ, ಸರಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಪರಮೇಶ್ವರ ಓಕಳಿ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೆಂಗಟಿ
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಅಂಜನಾ ಶಿರವಾಳ ಮಾತನಾಡಿದರು.
ಕಸ್ತೂರಬಾಯಿ ಪ್ರಾಥ೯ನಾ ಗೀತೆ ಹಾಡಿದರು, , ರವೀಂದ್ರ ಬಿಕೆ ನಿರೂಪಿಸಿದರು, ಅಂಬಾರಾಯ ಮಾಡ್ದೆ ಸ್ವಾಗತಿಸಿದರು.
ಪ್ರಶಸ್ತಿ ಪಡೆದ ಶಿಕ್ಷಕರು: ಅನಿಲಕುಮಾರ ಕೋರ್ ಮಹಾಗಾಂವ (ಖಾಸಗಿ ), ಜಯಶ್ರೀ ಬಾಚಗುಂಡಿ, ಮೀರಾಬಾಯಿ ರಡ್ಡಿ, , ಸುಭದ್ರಾಬಾಯಿ ಬೆನೂರ, , ನಿಂಗಪ್ಪ ನಾಗುರೆ, ರೂಪಶ್ರೀ ವಿಜಿ, ಸಂತೋಷ್ ಕಲ್ಮೂಡಕರ್, ರಾಜೇಶ್ ಮುಸ್ತಾರಿಕರ್, ಸದಾಶಿವ ಚನ್ನಪ್ಪಗೊಳ,
ಕನ್ನಡ ನಾಡು ನುಡಿ ಉಳಿಸಿ ಬೆಳೆಸುವುದರ ಜೊತೆಗೆ ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪ್ರವೃತ್ತಿಯನ್ನಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸುವ ಕಾಯ್೯ ಕಮಲಾಪುರ ಕಸಾಪ ಮಾಡುತ್ತಿದೆ, ನಿಮ್ಮೆಲ್ಲರ ಸಹಕಾರ ನಮ್ಮೊಂದಿ ಗಿರಲಿ. -ಸುರೇಶ್ ಲೆಂಗಟಿ, ತಾಲೂಕಾ ಅಧ್ಯಕ್ಷ ಕಸಾಪ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…