ತಂತ್ರಜ್ಞಾನ ಕೇಂದ್ರ ಸ್ಥಾಪನೆಯಿಂದ ಕಲಿಕೆಗೆ ಪ್ರೋತ್ಸಾಹ: ಕುಲಪತಿ ಪ್ರೊ. ದಯಾನಂದ ಅಗಸರ

ಕಲಬುರಗಿ: ವೈಜ್ಞಾನಿಕ ಕ್ಷೇತ್ರದಲ್ಲಿನ ಸಂಶೋಧನೆಯ ಅವಿಷ್ಕಾರಗಳಿಂದ ಹೊಸ ಆಲೋಚನೆಗಳ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಿಂದ ಸಂಶೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕಲಿಕೆಗೆ ಪ್ರೋತ್ಸಾಹ ಸಿಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಮಂಗಳೂರಿನ ನೆಟ್ಟಿ ವಿಶ್ವವಿದ್ಯಾಲಯದ ಡಿಎಸಟಿ ಸೆಂಟರ ಜಂಟಿಯಾಗಿ ಮಂಥನ ಸಭಾಂಗಣದಲ್ಲಿ ಆಯೋಜಿಸಿದ ವಿಜ್ಞಾನ ಶಿಕ್ಷಕರಿಗಾಗಿ “ಎನೇಬ್ಲಿಂಗ್ ಟ್ರಾನ್ಸ್ಲೇಷನ್ ಆಫ್ ರಿಸರ್ಚ್ ಇನಟು ಟೆಕ್ನಾಲಜಿಸ್” ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಯಿಂದ ತಂತ್ರಜ್ಞಾನದ ಕಲಿಕೆಗೆ ಪ್ರೋತ್ಸಾಹ ದೊರೆತರೆ ಕೈಗಾರಿಕೆಗಳು ಮತ್ತು ಸ್ಥಳೀಯ ಉದ್ಯಮಗಳಿಗೆ ತಂತ್ರಜ್ಞಾನ ವರವಾಗಲಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿನ ಅವಿಷ್ಕಾರದ ಉಪಯೋಗವನ್ನು ವಿವಿಧ ವೃತ್ತಿ ಕ್ಷೇತ್ರಗಳ ಹೂಡಿಕೆದಾರರು, ಮಧ್ಯಸ್ಥಗಾರರು, ಶೈಕ್ಷಣಿಕ ನೇತಾರರೊಂದಿಗೆ ಸಂಪರ್ಕ ಸಾಧಿಸಿ ಸಂಶೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ನಾವೀನ್ಯ ಆಲೋಚನೆ ಜೊತೆಗೆ ತಂತ್ರಜ್ಞಾನ ಕೌಶಲ್ಯದಿಂದ ಪ್ರಗತಿ ಸಾಧಿಸಬಹುದು ಎಂದರು.

ಎನ್‌ಐಐಟಿಇ ವಿಶ್ವವಿದ್ಯಾಲಯದ ಸಲಹೆಗಾರ ಪ್ರೊ. ಇದ್ಯಾ ಕರುಣಾಸಾಗರ ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರಸ್ತುತ ವೈಜ್ಞಾನಿಕ ಕ್ಷೇತ್ರಗಳಲ್ಲಿ ಆಗುತ್ತಿರುವ ಸಂಶೋಧನೆಗಳಿಂದ ಪರಿಸರ ಮತ್ತು ಜೀವಸಂಕುಲಗಳ ಸಂರಕ್ಷಣೆ ಸಾಧ್ಯವಿದೆ. ತಂತ್ರಜ್ಞಾನದಿಂದ ನೆರವಿನಿಂಧ ಜೀವ ಸಂಕುಲದ ಆರೋಗ್ಯ ರಕ್ಷಣೆ ಸಿಗಲಿದೆ. ವಿಜ್ಞಾನ ಶಿಕ್ಷಕರು ತಂತ್ರಜ್ಞಾನ ಬಳಕೆಯೊಂದಿಗೆ ಯುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಿ ಸಂಶೋಧನೆಗೆ ಉತ್ತೇಜಿಸಬೇಕು. ಭಾರತದಲ್ಲಿ ಹೆಚ್ಚು ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಆರ್ & ಡಿ ಕೇಂದ್ರಗಳನ್ನು ಸ್ಥಾಪಿಸುವುದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ ಎಂದರು.

ನೆಟ್ಟಿ ವಿಶ್ವವಿದ್ಯಾಲಯದ ಪ್ರೊಜೆಕ್ಟ್ ಅಂಡ್ ಡಿಎಸ್‌ಟಿಟಿಇಸಿ ನಿರ್ದೇಶಕ ಡಾ. ಇಂದ್ರಾಣಿ ಕರುಣಾಸಾಗರ ಮಾತನಾಡಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ನಡೆದಿರುವ ಹೊಸ ಅಧ್ಯಯನಗಳಿಂದ ದೇಶದಲ್ಲಿ ವಿವಿಧ ಕ್ಷೇತ್ರಗಳ ಬೆಳವಣಿಗೆ ಕಾಣಬಹುದು. ಅದರ ಜೊತೆಗೆ ಸರ್ಕಾರ ಮತ್ತು ಸರ್ಕಾರೇತರ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಪ್ರೋತ್ಸಾಹಧನವನ್ನು ಯೋಜನೆ ಮುಖಾಂತರ ಪಡೆಯವ ಮೂಲಕ ಸಂಶೋಧನೆ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಇದರಿಂದ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಉತ್ತೇಜನ ಮತ್ತು ಪ್ರೋತ್ಸಾಹ ಸಿಗಲಿದೆ ಎಂದರು.

ಕಾರ್ಯಕ್ರಮಸಂಯೋಜಕ ಪ್ರೊ. ಆರ್. ಎಲ್. ರಾಯಬಾಗಕರ್ ಹಾಗೂ ಉಪ ಸಂಯೋಜಕ ಪ್ರೊ. ಕೆ. ವಿಜಯಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರೊ. ಕೆರೂರ್, ಪ್ರೊ. ಎನ್.ಬಿ. ನಡುವಿನಮನಿ, ಪ್ರೊ. ವಿ.ಎಂ. ಜಾಲಿ, ಪ್ರೊ. ಹುನಗೋಡಿ ಮಠ, ಪ್ರೊ. ಚಂದ್ರಕಾಂತ ಕೆಳಮನಿ, ಪ್ರೊ. ಜಿ.ಎಂ. ವಿದ್ಯಾಸಾಗರ, ಪ್ರೊ. ಸಿ. ಸುಲೋಚನಾ, ಪ್ರೊ. ಸುಜಾತ ಇಂಗಿನ್ ಶೆಟ್ಟಿ, ಪ್ರೊ. ಆನಂದ ನಾಯಕ್, ಡಾ. ಪ್ರಕಾಶ ಕರಿಯಜ್ಜನವರ್ ಹಾಗೂ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ. ಜಿ.ಎಂ. ವಿದ್ಯಾಸಾಗರ ಅತಿಥಿಗಳನ್ನು ಪರಿಚಯಿಸಿದರು. ದಾನೇಶ್ವರಿ ಪ್ರಾರ್ಥಿಸಿದರು, ಪ್ರೊ. ಆರ್.ಎಲ್. ರಾಯಬಾಗಕರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ರಾಷ್ಟç ಮತ್ತು ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳು, ಸಂಘ ಸಂಸ್ಥೆಗಳ ಮತ್ತು ಉದ್ಯಮಗಳ ಸಹಭಾಗಿತ್ವದಿಂದ ಹೊಸ ತಂತ್ರಜ್ಞಾನ ವಿಸ್ತರಣೆಯಾಗಲಿದೆ. ಇದರಿಂದ ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಜ್ಞಾನದ ಆಲೋಚನೆ, ಪ್ರಾಯೋಗಿಕ ಚಿಂತನೆ, ತಂತ್ರಜ್ಞಾನ ಪರಿಣಿತಿ ಸಾಧ್ಯವಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ಜೀವ ಸಂಕುಲ ಸಂರಕ್ಷಣೆ ಮತ್ತು ಮಾನವ ಕಲ್ಯಾಣ ಅಭಿವೃದ್ಧಿಯಾಗಲಿದೆ.-ಪ್ರೊ. ಇದ್ಯಾ ಕರುಣಾಸಾಗರ, ಸಲಹೆಗಾರ, ನಿಟ್ಟಿ ವಿಶ್ವವಿದ್ಯಾಲಯ, ಮಂಗಳೂರು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago