ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಿ; ಅಟ್ಟೂರ

ಕಲಬುರಗಿ: ವಂಚನೆಗೊಳಿಸಿದ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಹೂಡಿಕೆದಾರರಿಗೆ ಸರಕಾರ ಹಣ ನೀಡಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಷನ್ (ಂIಙಈ) ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು.

ನಗರದ ಜಿಲ್ಲಾಧಿಕಾರಿ ಗಳ ಕಾರ್ಯಾಲಯದ ಮುಂದೆ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ಅಸಹಕಾರ ಹೋರಾಟಕ್ಕೆ ಬೆಂಬಲಿಸಿ ಮಾತನಾಡುತ್ತಾ 2019 ರಲ್ಲಿ ಸಂಸತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ರನ್ವಯ ಸರ್ವಾನುಮತದಿಂದ ಜಾರಿಗೆ ತಂದಿದೆ. ಮೋಸದ ಕಂಪನಿಗಳು ಮತ್ತು ಸೊಸೈಟಿಗಳಲ್ಲಿ ಕಳೆದು ಹೋದ ಠೇವಣಿ ಮತ್ತು ಮರುಪಾವತಿಸಲಾಗುತ್ತದೆ. ಅರ್ಜಿದಾರರು 180 ದಿನಗಳಲ್ಲಿ ಮೂರು ಪಟ್ಟು ಮರುಪಾವತಿ ಪಡೆಯಲು ಕಾನೂನು ಬದ್ಧ ಹಕ್ಕನ್ನು ನೀಡಿದ್ದಾರೆ.

ಈ ಕಾಯ್ದೆ ಅನ್ವಯ ಸಾರ್ವಜನಿಕರಿಗೆ ಸರ್ಕಾರ ಹಣ ಮರುಪಾವತಿಸಬೇಕು. ಕಂಪನಿಗಳ ಭರವಸೆ ಮೇಲೆ ಸಾರ್ವಜನಿಕರು ಹಣವನ್ನು ಹೂಡಿದ್ದಾರೆ ದೇಶಾದ್ಯಂತ ಸಾವಿರಾರು ಕೋಟಿ ಜನ ಹಣವನ್ನು ಠೇವಣಿ ಮಾಡಿ ಕಷ್ಟದಲ್ಲಿದ್ದಾರೆ ಕೂಡಲೇ ಸರ್ಕಾರವು ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಹಣ ನೀಡಬೇಕು ಹಾಗೂ ಹಣ ಪಡೆದ ಕಂಪನಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಈ ಹೋರಾಟಕ್ಕೆ ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ರಾಷ್ಟ್ರ ಮಟ್ಟದಲ್ಲಿ ಚರ್ಚಿಸಿ ಬೆಂಬಲ ಸೂಚಿಸುತ್ತದೆ ಎಂದು ಹೇಳಿದರು. ಹೋರಾಟದಲ್ಲಿ ವೈ. ಎಸ್ ತಳವಾರ ಬಳ್ಳುಂಡಗಿ, ಶ್ರೀಶೈಲ ಪಾಟೀಲ, ನಿವೃತ್ತ ಶಿಕ್ಷಕರಾದ ನೀಲಕಂಠಯ್ಯ ಹಿರೇಮಠ, ವಿಠ್ಠಲ ಕುಂಬಾರ, ಶಿವಶರಣಪ್ಪ ಖೋಬರೆ, ಸಿದ್ದರಾಮ ಹಣಮಶೆಟ್ಟಿ,ಎ ಎನ ಪರೀಟ, ವೀರಣ್ಣ ಮಡಿವಾಳ, ಕಮಲಾ ಕೋರೆ, ಸುಭದ್ರಾಬಾಯಿ ಕಾಂಬಳೆ, ಚಂದ್ರಕಾಂತ ಕಲಶೆಟ್ಟಿ, ಜಯರಾಜ್ ಎಸ್ ಮುಗುಳಿ, ಸಿ ಕೆ ನಾಟಿಕಾರ, ಪರ್ವತಯ್ಯ ಸಾಲಿಮಠ, ವಿಜಯಕುಮಾರ ಶೆಟ್ಟಿ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago