ವಾಡಿ: ಪಂಡಿತ್ ದೀನದಯಾಳ ಉಪಾಧ್ಯಾಯರ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನಸಂಘದ ನಾಯಕ ಮತ್ತು ಬಿಜೆಪಿ ವಿಚಾರವಾದಿ ಪಂಡಿತ್ ದೀನದಯಾಳ್ ಉಪಾಧ್ಯಾಯರ 108ನೇ ಜಯಂತಿ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವು ದೀನದಯಾಳರು ಕಂಡಿದ್ದ ಹಾದಿಯಲ್ಲಿಯೇ ಮುಂದೆ ಸಾಗುತ್ತಿದೆ. ಕಾಶ್ಮೀರದ ವಿಷಯವೇ ಆಗಿರಬಹುದು, ರಾಷ್ಟ್ರೀಯ ಶಿಕ್ಷಣ ನೀತಿಯೇ ಆಗಿರಬಹುದು, ಮೇಕ್‌ ಇನ್‌ ಇಂಡಿಯಾ, ಸ್ವಚ್ಛ ಭಾರತ್‌ ಸೇರಿದಂತೆ ಅನೇಕ ಯೋಜನೆ ಹಾಗೂ ಅಭಿಯಾನಗಳೇ ಇರಬಹುದು ಇವೆಲ್ಲದರಲ್ಲೂ ಪಂಡಿತ್ ದೀನದಯಾಳ ಉಪಾಧ್ಯಾಯರು ಪ್ರತಿಪಾದಿಸಿದ್ದ ನೀತಿಗಳನ್ನು ಕಾಣುತ್ತೇವೆ.

1953ರಲ್ಲಿ ಶ್ಯಾಮಪ್ರಸಾದಮುಖರ್ಜಿಯವರ ಮರಣಾನಂತರ ಜನಸಂಘದ ಹೊಣೆಗಾರಿಕೆ ದೀನ್‌ದಯಾಳರ ಹೆಗಲಿಗೆ ಬಿತ್ತು. ತಮಗೆ ಒದಗಿ ಬಂದ ಜವಾಬ್ದಾರಿಯನ್ನು ಅತ್ಯಂತ ಜವಾಬ್ದಾರಿ ಯಿಂದ ನಿರ್ವಹಿಸಿದ ಶ್ರೀಯುತರು ಪಕ್ಷದ ಆದರ್ಶ ಮತ್ತು ತತ್ವಗಳನ್ನು ಜೊತೆಗೂಡಿಸಿಕೊಂಡು ಭಾರತೀಯ ಜನಸಂಘವನ್ನು ರೂಪಿಸಿದರು.

ದೀನ್‌ದಯಾಳರು ಏಕಾತ್ಮವಾದದಲ್ಲಿ ಪ್ರಬಲ ನಂಬಿಕೆಯನ್ನಿರಿಸಿದ್ದರು. ಇದು ದೇಹ, ಮನಸ್ಸು, ಮಾನಸಿಕತೆಗಳು ಹೇಗೆ ಆತ್ಮನೊಂದಿಗೆ ಒಂದಾಗಿ ಸಮಾಜದ ಜೊತೆ ಸ್ಪಂದಿಸಿಕೊಳ್ಳುತ್ತದೆ, ಅಗತ್ಯತೆ ಮತ್ತು ಆಧ್ಯಾತ್ಮಿಕತೆಗಳ ಸಂಗಮವನ್ನು ಹೇಗೆ ಸಾಧ್ಯವಾಗಿಸಿಕೊಳ್ಳುವುದು ಎನ್ನುವುದನ್ನು ಏಕಾತ್ಮವಾದವು ತಿಳಿಸುತ್ತದೆ.

ಇದು ಈ ಮಣ್ಣಿನ ಚಿಂತನೆಯಾಗಿದ್ದು, ಸರ್ವಕಾಲಕ್ಕೂ ಸಲ್ಲುವಂತದ್ದಾಗಿದೆ. ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅವರು ಜಾಣ್ಮೆ ಮತ್ತು ಪ್ರಯೋಗಿಕ ಮತ್ತು ಸರಳ ವ್ಯಕ್ತಿಯಾಗಿದ್ದರು. ಸ್ವಾವಲಂಬಿ ಭಾರತದ ಕನಸನ್ನು ಕಂಡ ಅವರು, ಹಳ್ಳಿಹಳ್ಳಿಗಳು ಆರ್ಥಿವಾಗಿ ಸದೃಢವಾಗಬೇಕು ಅದಕ್ಕಾಗಿ ವಿಕೇಂದ್ರಿತ ಆಡಳಿತ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕೆಂದು ಹೇಳುತ್ತಿದ್ದರು.

ಸಮಾಜವಾದ, ಕಮ್ಯುನಿಸಂ, ಬಂಡವಾಳಶಾಹಿ ಅಥವಾ ಪ್ರತ್ಯೇಕವಾದ ಮುಂತಾದ ಪಾಶ್ಚಿಮಾತ್ಯ ಪರಿಕಲ್ಪನೆಗಳು ಎಂದೂ ಭಾರತದ ಬೆಳವಣಿಗೆಯ ದೃಷ್ಠಿಯಿಂದ ಪೂರಕವಲ್ಲ ಎನ್ನುವುದನ್ನು ಅವರಾಗಲೇ ಗ್ರಹಿಸಿಕೊಂಡಿದ್ದರು. ನಮ್ಮ ಸನಾತನ ಸಂಸ್ಕೃತಿ ಮತ್ತು ಧರ್ಮಗಳೇ ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಜೊತೆಗೆ ಆಧುನಿಕ ಬೆಳವಣಿಗೆಗಳನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುವ ವಿಶಾಲ ಮನೋಭಾವವನ್ನು ಸಹ ಪಂಡಿತ್‌ಜೀ ಅವರು ಹೊಂದಿದ್ದರು.

1968 ರ ಫೆಬ್ರವರಿ 11 ನೇ ತಾರೀಕಿನಂದು ಉತ್ತರಪ್ರದೇಶದ ಮುಘಲ್ ಸರಾಯ್ ರೈಲ್ವೆ ಯಾರ್ಡ್‌ನಲ್ಲಿ, ​ಪಂಡಿತ್ ದೀನದಯಾಳ ಉಪಾಧ್ಯಾಯರ ಕೊಲೆಯಾಗುತ್ತದೆ. ಈ ಹೇಯ ಘಟನೆ ಜರಗುವ ಮುನ್ನ ಕಲ್ಲಿಕೋಟಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಭಾಗವಹಿಸಿದ್ದರು.

ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮುಂದೆ 1980 ರಲ್ಲಿ ಭಾರತೀಯ ಜನತಾ ಪಕ್ಷವಾಗಿ ರೂಪಗೊಂಡು ವಿಶ್ವದ ಬೃಹತ್ ಪಕ್ಷವಾಗಿದೆ,ಅಂತಹ ಆದರ್ಶ ತತ್ವಗಳ ಪಕ್ಷದ ಕಾರ್ಯಕರ್ತ ಆಗಿರುವುದು ನಮ್ಮಗೆ ಹೆಮ್ಮೆಯ ವಿಷಯ ಎಂದರು.

ಈ ಸಂಧರ್ಭದಲ್ಲಿ ವಿಠಲ ವಾಲ್ಮೀಕ ನಾಯಕ, ಗಿರಿಮಲ್ಲಪ್ಪ ಕಟ್ಟಿಮನಿ,ಶರಣಗೌಡ ಚಾಮನೂರ, ಕಿಶನ ನಾಯಕ,ಪ್ರಮೋದ್ ಚೊಪಡೆ,ಕಿಶನ ಜಾಧವ, ಅಂಬದಾಸ ಜಾಧವ,ಆನಂದ ಇಂಗಳಗಿ, ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಉಮಾಭಾಯಿ ಗೌಳಿ ಸೇರಿದಂತೆ ಇತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

27 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

28 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

31 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago