ಕಲಬುರಗಿ; ತಗ್ಗಿನಲ್ಲಿ ಬಿದ್ದುಮೃತನ ಕುಟುಂಬಕ್ಕೆ ಪರಿಹಾರ ಸರಕಾರಕ್ಕೆ ಮನವಿ

ಕಲಬುರಗಿ: ನಗರದ ವಾರ್ಡ್ ನಂ. 53ರ ರೆಹಮತ್ ನಗರ ಬಡಾವಣೆಯಲ್ಲಿ ಕಾಮಗಾರಿ ನಡೆಯುತ್ತಿರುವ ತಗ್ಗಿನಲ್ಲಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಈತನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈ ಗೊಂಡು ಮೃತನ ಕುಟುಂಬಕ್ಕೆ ಪರಿಹಾರ ಧನ ಒದಗಿಸಬೇಕೆಂದು ಕಲ್ಯಾಣಕರ್ನಾಟಕ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದತ್ತು ಹಯ್ಯಾಳಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ವಾರ್ಡ್ ನಂ.53ರ ರೆಹಮತ್ ನಗರ ಬಡಾವಣೆಯಲ್ಲಿ ಮಹಾನಗರ ಪಾಲಿಕೆಯ ಪರವಾನಗಿ ಪಡೆಯದೇ ಪಿ.ಡಬ್ಲೂ.ಡಿ. ಅಧಿಕಾರಿಗಳು ಅಕ್ರಮವಾಗಿಗುತ್ತಿಗೆದಾರನಮುಖಾಂತರ ಕಾಮಗಾರಿಯನ್ನು ಪ್ರಾರಂಭಿಸಿರುತ್ತಾರೆ. ಕಾಮಗಾರಿಯ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೇ ಹಾಗೂಅನುಮತಿ ಪಡೆಯದೇ ಕಾಮಗಾರಿಯನ್ನು ಪ್ರಾರಂಭಿಸಿರುವುದ ರಿಂದ ಮೃತನ ಸಾವಿಗೆ ನೇರವಾಗಿ ಪಿ.ಡಬ್ಲೂ.ಡಿ ಅಧಿಕಾರಿಗಳು, ಲ್ಯಾಂಡ್‍ಆರ್ಮಿ, ಎಲ್.ಎನ್.ಟಿ ಕಂಪನಿ ಮತ್ತುಗುತ್ತಿಗೆದಾರ ನೇರ ಕಾರಣವಾಗಿರುತ್ತಾರೆ. ಇವರು ಯಾವ ಕಾಮಗಾರಿಯನ್ನು ಪರವಾನಿಗೆ ಪಡೆಯದೆ ಮಾಡುತ್ತಾ ಗುಂಡಾ ವರ್ತನೆತೋರುತ್ತಿದ್ದಾರೆ.

ಇವರೆಲ್ಲರನ್ನುಅಮಾನತ್ತು ಮಾಡಿಆದೇಶ ಹೊರಡಿಸಬೇಕು.ಒಂದು ವೇಳೆ ಪಿ.ಡಬ್ಲೂ.ಡಿ ಅಧಿಕಾರಿಗಳು, ಲ್ಯಾಂಡ್‍ಆರ್ಮಿ, ಎಲ್.ಎನ್.ಟಿ ಕಂಪನಿ, ಗುತ್ತಿಗೆದಾರನಿಗೆಅಮಾನತ್ತು ಮಾಡದೇ ಹೋದರೆ ನಮ್ಮ ಸೇನೆ ವತಿಯಿಂದ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ತಿಳಿಸುತ್ತೇವೆ. ಸರ್ಕಾರದ ವತಿಯಿಂದತಕ್ಷಣ ಮೃತನಕುಟುಂಬಕ್ಕೆ 50 ಲಕ್ಷಪರಿಹಾರಧನವನ್ನು ಘೋಷಿಸಬೇಕು.

ಮೃತನ ಕುಟುಂಬಸ್ಥರಿಗೆ ಪಿ.ಡಬ್ಲೂ.ಡಿ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಬೇಕು. 16 ರಂದು ಮುಖ್ಯಮಂತ್ರಿಗಳ ಆಗಮನದ ದಿನ ಪಿ.ಡಬ್ಲೂ.ಡಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ರಸ್ತೆ ಕಳಪೆ ಕಾಮಗಾರಿ ಮಾಡಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಲ್ಲದೇ, ಜನರ ಜೀವನದ ಜೊತೆಗೆ ಚಲ್ಲಾಟ ವಾಡುತ್ತಿದ್ದಾರೆ. ಕೂಡಲೇ ಈ ಸಾವಿಗೆ ಕಾರಣರಾದವರನ್ನು ಬಂಧಿಸಿ, ಕಲಬುರಗಿ ನಗರಾದ್ಯಂತಈ ಗುತ್ತಿಗೆದಾರನಕಳಪೆ ಕಾಮಗಾರಿಗಳನ್ನು ಪಟ್ಟಿ ಸಿದ್ದಪಡಿಸಿ ಲೈಸೆನ್ಸ್ ರದ್ದುಗೊಳಿಸಿ ಅವರ ವಿರುದ್ಧಕ್ರಮ ಕೈಗೊಳ್ಳಬೇಕು. ಕೂಡಲೇ ಉಸ್ತುವಾರಿ ಸಚಿವರು, ಸ್ಥಳಿಯ ಸಂಸದರು ಮೃತನ ಕುಟುಂಬಕ್ಕೆ ಭೇಟಿ ನೀಡಿ ಪರಿಹಾರ ಧನ ಮತ್ತು ಅವರ ಕುಟುಂಬಕ್ಕೆ ಉದ್ಯೋಗ ಭರವಸೆ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಷ ಬನಪಟ್ಟಿ, ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ ಮಹಾರಾಜ, ಬಸವರಾಜ ಹಯ್ಯಾಳಕರ್, ರಾಮಣ್ಣ ತಾರ್‍ಫೈಲ್, ಭೀಮಣ್ಣ ರಾಮಣ್ಣ ಸಂಗಾವಿ, ಕಾಶಿ ವಿಶ್ವನಾಥ, ಆಕಾಶ ನಂದಿ ಸೇರಿದಂತೆ ಇತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago