ಕಲಬುರಗಿ: ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸಿ ಬೆಳೆ ವಿಮೆ ಮಾಡಿಸಿದ ಜಿಲ್ಲೆಯ ನೊಂದ ಎಲ್ಲಾ ರೈತರಿಗೆ ನಿಯಮಾನುಸಾರ ಮಧ್ಯಂತರ ಬೆಳೆ ವಿಮೆ ಪರಿಹಾರ ನೀಡಲು ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗೆ ಮಾಹಾತ್ಮ ಗಾಂಧಿಜಿ ಗ್ರಾಹಕರ ಹಿತರಕ್ಷಣೆ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈಜನಾಥ ಎಸ್ ಝಳಕಿ ಆಗ್ರಹಿಸಿದ್ದಾರೆ.
2024-25 ನೆ ಖರಿಪ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸಹಸ್ರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಇಫೆÇ್ಕೀ ಟೋಕಿಯೋ ಜನರಲ್ ಇನ್ಸೂರೆನ್ಸ್ ಬೆಳೆವಿಮಾ ಕಂಪನಿಯಲ್ಲಿ ತಮ್ಮ ಹೋಲದಲ್ಲಿ ಬಿತ್ತನೆ ಮಾಡಿದ ಉದ್ದು, ಹೆಸರು, ಸ್ಪಯಾಬಿನ, ತೊಗರಿ ಸೇರಿದಂತೆ ಇನ್ನಿತರ ಅನೇಕ ನೊಂದಾಯಿತ ಬೆಳೆಗಳಿಗೆ ನಿಗದಿ ಪಿಡಿಸಿದ ವಿಮಾ ಹಣ ಭರಸಿ ಬೆಳೆವಿಮೆ ಮಾಡಿಸಿದ್ದು ಇದಾದ ಮೇಲೆ ರೈತರ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸ್ವಯಾ ಬಿನ ಬೆಳೆಗಳು ಉತ್ತಮ ವಾಗಿ ಬೆಳೆದು ಇನ್ನೆನು ರಾಶಿ ಮಾಡ ಬೆಕೆನ್ನುವದರಲ್ಲಿ ಅಧಿಕವಾಗಿ ಬಿದ್ದ ಮಳೆಯಿಂದ ರೈತರು ಬೆಳೆದ ಈ ಬೆಳೆಗಳ ಜಮಿನುಗಳಲ್ಲಿ ಮಳೆ ನೀರು ನಿಂತು ಅವರು ಈ ಬೆಳೆಗಳ ರಾಶಿ ಮಾಡಲಾಗದೆ ತುಂಬಾ ಹಾನಿ ಅನುಭವಿಸಿದ್ದಾರೆ.
ರೈತರಿಗೆ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಯಿಂದ ಸೂಕ್ತವಾಗಿ ಜಾಗ್ರತಿ, ಅರಿವು ಮೂಡಿಸದ ಪ್ರಯುಕ್ತ ಸಹಸ್ರಾರು ಮುಗ್ದ ರೈತರು ತಮ್ಮ ಉದ್ದು , ಹೆಸರು, ಸ್ವಯಾ ಬಿನ ಬೆಳೆಗಳು ರಾಶಿವೆಳೆ ಅಧಿಕ ಮಳೆಯಿಂದ ಹಾನಿ ಆದರೂ ಕೂಡ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲಾಗಿಲ್ಲ , ಅದೆ ರೀತಿ ಜಿಲ್ಲೆಯ ಸಹಸ್ರಾರು ರೈತರ ವಿಮಾ ವ್ಯಾಪ್ತಿಗೆ ಒಳಪಟ್ಟ ತೊಗರಿ ಬೆಳೆ ಅಧಿಕ ಮಳೆಯಿಂದ ಬೆಳವಣಿಗೆಯಲ್ಲಿ ಕುಂಟಿತ ಕಂಡಿದ್ದು ಇದರಿಂದ ರೈತರು ನಿರಿಕ್ಷಿಸಿದಷ್ಟು ಇಳುವರಿ ಬರುವುದು ಅಸಾಧ್ಯವಾಗಿದ್ದು ಈ ರೀತಿ ತೋಗರಿ ಬೆಳೆಗಾರ ರೈತರು ಕೂಡ ಹಾನಿ ಅನಿಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿ ಜಿಲ್ಲೆಯ ಸಹಸ್ರಾರು ರೈತರು ಬೆಳೆ ವಿಮೆ ಮಾಡಿಸಿ ಬೆಳೆ ಹಾನಿಗೊಳಗಾಗಿ ನಷ್ಟ ಅನುಭವಿಸಿರುವ ಕುರಿತು ವಿಮಾ ಕಂಪನಿಗೆ ಮಾಹಿತಿ ಇದ್ದರು ಕೂಡ ಹಾಗೂ ಈ ಬಗ್ಗೆ ಅನೇಕ ದಿನಪತ್ರಿಕೆಗಳು ವರದಿ ಮಾಡಿದರು ಕೂಡ ಸಂಬಂದಿಸಿದ ವಿಮಾ ಕಂಪನಿ ಜಿಲ್ಲೆಯ ನೊಂದ ರೈತರಿಗೆ ಇಲ್ಲಿಯ ವರೆಗೆ ಸೂಕ್ತ ಬೆಳೆ ವಿಮಾ ಪರಿಹಾರ ನೀಡದೆ ಮೌನವಹಿಸಿದ್ದು ನಿಜಕ್ಕು ವಿಮಾ ಕಂಪನಿಯ ಈ ಮೌನ ನಡೆಯು ನೊಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನರಲ ಇನ್ಸೂರೆನ್ಸ ಬೆಳೆವಿಮೆ ಕಂಪನಿಗೆ ನಿರ್ದೇಶನ ನಿಡಿ ಜಿಲ್ಲೆಯ ನೊಂದ ರೈತರಿಗೆ ವಿಳಂಬ ಮಾಡದೆ ಒಂದು ವಾರದೊಳಗೆ ಮಧ್ಯಾಂತರ ಸಂಪೂರ್ಣ ಬೆಳೆ ವಿಮೆ ಪರಿಹಾರ ನೀಡಲು ಸಂಬಂಧ ಪಟ್ಟ ವಿಮಾ ಕಂಪನಿಯಿಂದ ಒದಗಿಸಿ ಕೊಟ್ಟು ನೊಂದ ರೈತರ ಹಿತ ಕಾಪಾಡಬೆಕು ಎಂದು ಒತ್ತಾಯಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…