ವಾಡಿ: ಬಡಾವಣೆಯ ಮಧ್ಯೆ ಹಾದುಹೋದ ಹೈವೋಲ್ಟ್ ವಿದ್ಯುತ್ ತಂತಿ ತೆರವುಗೊಳಿಸಬೇಕು ಮತ್ತು ಮನೆ ಬೆಳಕಿಗಾಗಿ ವಿದ್ಯುತ್ ಸಂಪರ್ಕ ಪಡೆಯಲು ಅಗತ್ಯ ಕಂಬ ತಂತಿ ಅಳವಡಿಸಬೇಕು ಎಂದು ಆಗ್ರಹಸಿ ಬಡಾವಣೆಯ ಜನರು ಜೆಸ್ಕಾಂ ವಿರುದ್ಧ ಸಿಡಿದೆದ್ದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಕಳೆದ ಹತ್ತಾರು ವರ್ಷಗಳಿಂದ ವಿದ್ಯುತ್ ಸಂಪರ್ಕಕ್ಕಾಗಿ ಹರಸಾಹಸ ಮಾಡುತ್ತಿರುವ ಪುರಸಭೆ ವ್ಯಾಪ್ತಿಯ ವಾರ್ಡ್-22 ಹನುಮಾನ ನಗರದ ಜನರು ಜನಧ್ವನಿ ಜಾಗೃತ ಸಮಿತಿ ನೇತೃತ್ವದಲ್ಲಿ ಸಂಘಟಿತರಾಗಿ ಹೋರಾಟಕ್ಕೆ ಮುಂದಾದರು. ಜನರ ಒತ್ತಾಯಕ್ಕೆ ಮಣಿದು ಬಡಾವಣೆಗೆ ಭೇಟಿ ನೀಡಿದ ಜೆಸ್ಕಾಂ ಶಾಖಾಧಿಕಾರಿ ರಾಜು ಬಿರಾದಾರ ಅವರನ್ನು ಬಡಾವಣೆಯಲ್ಲಿ ಸುತ್ತಾಡಿಸುವ ಮೂಲಕ 440 ಕೆ.ವಿ ವಿದ್ಯುತ್ ತಂತಿ ಅವಾಂತರವನ್ನು ವಿವರಿಸಿದರು. ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವೈಯಕ್ತಿಕವಾಗಿ ಕಂಬಗಳನ್ನು ಹಾಕಿಕೊಂಡು ಅನುಭವಿಸುತ್ತಿರುವ ಅಸುರಕ್ಷತೆ ಪರಸ್ಥಿತಿಯನ್ನು ಗಮನಕ್ಕೆ ತಂದರು.
ಬಡಾವಣೆಯಲ್ಲಿ 2000 ಜನಸಂಖ್ಯೆಯಿದೆ. ಸುಮಾರು ಎರಡುನೂರು ಮನೆಗಳಿವೆ. ಹೈವೋಲ್ಟ್ ತಂತಿ ಬಡಾವಣೆಯ ಹಲವು ಮನೆಗಳಿಗೆ ತಾಗುತ್ತಿದೆ. ಇದರಿಂದ ಪ್ರಾಣಾಪಾಯಗಳು ಸಂಭವಿಸುತ್ತಿವೆ. ಜೀವ ಭಯದ ಮಧ್ಯೆ ಬದುಕುತ್ತಿದ್ದೇವೆ ಎಂದು ಗೋಳು ಹೇಳಿಕೊಂಡರು. ತಕ್ಷಣ 440 ಕೆ.ವಿ ವಿದ್ಯುತ್ ಲೈನ್ ತೆರವುಗೊಳಿಸಬೇಕು. ಬಡಾವಣೆಯಲ್ಲಿ ಅಗತ್ಯವಿರುವಷ್ಟು ವಿದ್ಯುತ್ ಕಂಬಗಳನ್ನು ಅಳವಡಿಸಿ ತಂತಿ ಜೋಡಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು.
ಜೆಸ್ಕಾಂ ಎಇಇ ಅವರಿಗೆ ಬರೆದ ಮನವಿಪತ್ರವನ್ನು ಸ್ವೀಕರಿಸಿ ಮಾತನಾಡಿದ ನಗರ ವಿದ್ಯುತ್ ಕಚೇರಿ ಶಾಖಾಧಿಕಾರಿ ರಾಜು ಬಿರಾದಾರ, ಬಡಾವಣೆ ಸೃಷ್ಠಿಯಾಗುವ ಮೊದಲು ಹೈವೋಲ್ಟ್ ವಿದ್ಯುತ್ ತಂತಿ ಹಾದುಹೋಗಿದೆ. ಇದರಲ್ಲಿ ಜೆಸ್ಕಾಂ ತಪ್ಪಿಲ್ಲ. ಈಗ ಬಡಾವಣೆ ಸೃಷ್ಠಿಯಾಗಿ ಜನ ವಸತಿ ಬೆಳೆದಿದೆ. ಹೀಗಾಗಿ ವಿದ್ಯುತ್ ಆತಂಕ ಎದುರಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ವಾಸ್ತವ ಸ್ಥಿತಿಯನ್ನು ತಿಳಿಸುತ್ತೇನೆ.
ಮಳೆಗಾಲವಾದ್ದರಿಂದ ವಿದ್ಯುತ್ ತಂತಿ ತೆರವು ಕಾರ್ಯ ಸಾಧ್ಯವಿಲ್ಲ. ಪುರಸಭೆ ಅಧಿಕಾರಿಗಳು ವಿದ್ಯುತ್ ಕಂಬಗಳನ್ನು ಒದಗಿಸಿದರೆ ಓಣಿಯಲ್ಲಿ ಅಳವಡಿಸುತ್ತೇವೆ. ತಾಳ್ಮೆಯಿಂದ ಜನರು ಕೆಲಸ ಮಾಡಿಸಿಕೊಳ್ಳಬೇಕು ಎಂದರು.
ನಿಯಮಾನುಸಾರ ಅದೇನು ಕ್ರಮ ಕೈಗೊಳ್ಳುತ್ತೀರೋ ಗೊತ್ತಿಲ್ಲ. ಸಾವು ನೋವುಗಳು ಸಂಭವಿಸುವ ಮೊದಲು ಆದಷ್ಟು ಬೇಗ ಹೈವೋಲ್ಟ್ ತಂತಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಜನಧ್ವನಿ ಜಾಗೃತ ಸಮಿತಿಯ ಕಾರ್ಯದರ್ಶಿ ಶೇಖ ಅಲ್ಲಾಭಕ್ಷ್, ಉಪಾಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಭೀಮಸಿಂಗ್ ಚವ್ಹಾಣ, ಈರಣ್ಣ ಯಲಗಟ್ಟಿ, ಶಿವಪ್ಪ ಮುಂಡರಗಿ, ಸುರೇಶ ನಾಟೇಕರ, ಶಂಕರ ಮನ್ನು ಚವ್ಹಾಣ, ದಾಮು ಚವ್ಹಾಣ, ಮನ್ನು ಚವ್ಹಾಣ, ಮೋಹನ್ ಕೋಬಾ ರಾಠೋಡ, ಧರ್ಮರಾಜ ರಾಠೋಡ, ಶಾರುಬಾಯಿ ಕಿಶನ, ಮಾಲಾಬಾಯಿ ಮೋಹನ್, ಸುನಿತಾ ರಾಠೋಡ, ಎಲ್ಲಮ್ಮ, ಸಕ್ಕುಬಾಯಿ, ಗೀತಾಬಾಯಿ, ಗಂಗಮ್ಮ, ಇಂದಿರಾಬಾಯಿ ಸೇರಿದಂತೆ ಬಡಾವಣೆಯ ಹಲವರು ಇದ್ದರು..
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…