ಸಿಯುಕೆಯಲ್ಲಿ ಹೊಸದಾಗಿ ಪ್ರವೇಶ ಪಡೆದ ಸ್ನಾತಕ ವಿದ್ಯಾರ್ಥಿಗಳಿಗೆ ಒರಿಯೆಂಟೆಶನ್

ಕಲಬುರಗಿ: ಯುವಕರಿಂದ ಮಾತ್ರ ವಿಕಸಿತ ಭಾರತ ಸಾಧ್ಯ” ಎಂದು ಸಿಯುಕೆಯ ಕುಲಸಚಿವರಾದ ಪೆÇ್ರ. ಆರ್ ಆರ್ ಬಿರಾದಾರ ಅವರು ಹೇಳಿದರು.

2024-25 ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪ್ರವೇಶ ಪಡೆದ ಸ್ನಾತಕ ವಿದ್ಯಾರ್ಥಿಗಳ ಒರಿಯೆಂಟೆಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಭಾರತವು 2047 ರ ಒಳಗೆ ಅಭಿವೃದ್ದಿ ಹೊಂದಿದ ದೇಶಗಳ ಪಟ್ಟಿಗೆ ಸೆರುಬೇಕಾದರೆ ಆಧುನಿಕ ಕೌಶಲ್ಯವುಳ್ಳ, ಧೃಡವಾದ ಇಚ್ಚಾಶಕ್ತಿಯಿರುವ, ಉತ್ಸಾಹಿ ಯುವಕರು ಬಹುಮುಖ್ಯವಾದ ಪಾತ್ರ ವಹಿಸಲಿದ್ದಾರೆ.

ಇಂದು ವಿಶ್ವವಿದ್ಯಾಲಯಗಳು ಯುವಕರ ಕೌಶಲ್ಯ ಇನ್ನಷ್ಟು ವೃದ್ದಿಸಿ ವಿಕಸಿತ ಭಾರತ ಸಾದನೆಗೆ ತಯ್ಯಾರಿ ಮಾಡಬೇಕಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ನುರತ ಶಿಕ್ಷಕರು, ಆಧುನಿಕ ಮೂಲ ಸೌಕರ್ಯಗಳು ವಿವಿಧ ಸಂಸ್ಖೃತಿ, ಭಾμÉಗಳನ್ನು ಹೊಂದಿದ ವಿದ್ಯಾರ್ಥಿಗಳ ಜ್ಞಾನ ಕೇಂದ್ರವಾಗಿರುವುದರಿಂದ ಇದು ವಿದ್ಯಾರ್ಥಿಗಳ ಸವಾರ್ಂಗಿಣ ಅಭಿವೃದ್ದಿ ಸಾಧಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ.

ನಿವೇಲ್ಲರೂ ಬೆರೆ ಬೆರೆ ರಾಜ್ಯಗಳಿಂದ ನಿಮ್ಮ ಜೀವನದ ಗುರಿಯನ್ನು ಸಾಧಿಸಲು ಮಹತ್ವಕಾಂಕ್ಷೆಯನ್ನು ಇಟ್ಟುಕೊಂಡು ಬಂದಿದ್ದಿರಿ. ಆದ್ದರಿಂಧ ತಾವುಗಳು ತಮ್ಮ ಕಠಿಣ ಪರಿಶ್ರಮ, ಸತತ ಅಧ್ಯಯನ, ಧೃಡವಾದ ಆತ್ಮ ವಿಶ್ವಾಸ, ಪ್ರಾಮಾಣಿಕತೆ, ಧನಾತ್ಮಕ ಚಿಂತನೆ, ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣ, ದುಶ್ಚಟಗಳಿಂದ ದೂರುವಿದ್ದು, ತಮ್ಮ ಗುರಿ ಸಾಧಿಸಿ. ನಿವೆಲ್ಲರೂ ಇಲ್ಲಿ ಜ್ಞಾನಾರ್ಜನೆಗೆ ಬಂದಿರುವುದರಿಂದ ಜ್ಞಾನ ಸಂಪಾದನೆಯೆ ತಮ್ಮ ಮೂಲ ಮಂತ್ರವಾಗಿರಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನಿಈಡಿದರು.

ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಬಸವರಾಜ ಕುಬಕಡ್ಡಿ ಮಾತನಾಡಿ “ವಿಶ್ವವಿದ್ಯಾಲಯವು ಸುಸಜ್ಜಿತ ಗ್ರಂಥಾಲಯ, ವಸತಿನಿಲಯಗಳು, ಇಂಟರನೆಟ್ ಸೌಲಭ್ಯ, ಉತ್ತಮ ಶಿಕ್ಷಕರು, ಓದುವ ವಾತವರಣವನ್ನು ಹೊಂದಿದೆ ಇದನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಓದಿಗೆ ತೊಂದರೆ ಆಗದಿರಲಿಯೆಂದು ಎಲ್ಲ ವಸತಿನಿಲಯಗಳಲ್ಲಿ ಬಟ್ಟೆ ತೊಳೆಯಲು ವಾಶಿಂಗ ಮಶಿನ್ ಸೌಲಭ್ಯ ಒದಗಿಸಲಾಗುವುದು. ಎಲ್ಲರೂ ಒಂದು ಕುಟುಂಬದಂತೆ ನಡೆದುಕೊಳ್ಳಿ, ಯಾರು ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಬೇಡಿ, ನಿತಿ ನಿಯಮಿ ಪಾಲಿಸಿ. ಒಂದುವೇಳೆ ತಾವು ವಿಶ್ವವಿದ್ಯಾಲಯಕ್ಕೆ ದಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರೆ ತಕ್ಕ ಶಿಕ್ಷೆ ನೀಡಲಾಗುವುದು. ” ಎಂದು ಹೇಳಿದರು.

ಕ್ಯಾಂಪಸ್ ಡೆವಲಪ್‍ಮೆಂಟ್ ಡೀನ್ ಪೆÇ್ರ.ಚನ್ನವೀರ ಆರ್.ಎಂ ಅವರು ಮಾತನಾಡಿ “ಸಿಯುಕೆ ಕಾಂಪಸ್ ಬಹಳ ವಿಶಾಲ ಮತ್ತು ಸುಂದರವಾಗಿದೆ. ನಿಮ್ಮ ಅಧ್ಯನಕ್ಕೆ ಹೇಳಿಮಾಡಿಸಿದಂತ ಕ್ಯಾಂಪಸ್ ಇದಾಗಿದೆ. ನಮ್ಮಲ್ಲಿ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಖ್ಯಾತಿಯ ಶಿಕ್ಷಕರಿದ್ದಾರೆ ಅವರ ಜ್ಞಾನ ಮತ್ತು ಅನುಭವದ ಸದುಪಯೋಗ ಪಡಿಸಿಕೊಳ್ಳಿ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜಿವನ ರೂಪಿಸುವ ಕೇಂದ್ರಗಳು. ತಾವು ತಮ್ಮ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ” ಎಂದು ಹೆಳಿದರು.

ಕಾರ್ಯಕ್ರಮದ ಸಂಯೋಜಕರಾದ ಡಾ.ಎನ್.ಬಾಬು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ “ಎ ಕಾರ್ಯಕ್ರಮದ ಪ್ರಕಾರ ನೀವು ಒಆಅ, ಗಿಂಅ, ಉಇಅ, Pಒ ಗತಿಶಕ್ತಿ, ಕೌಶಲ್ಯ ವರ್ಧನೆ ಕೋರ್ಸ್ ಮತ್ತು ನಿಮ್ಮ ಪ್ರಮುಖ ವಿಷಯಗಳ ಹೊರತಾಗಿ ಭಾμÉಗಳನ್ನು ಆಯ್ಕೆ ಮಾಡಬೇಕು. ಆದ್ದರಿಂದ ಈ ಕೋರ್ಸ್‍ಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಪ್ರತಿ ವರ್ಗದ ಅಡಿಯಲ್ಲಿ ನೀಡಲಾಗುವ ಕೋರ್ಸ್‍ಗಳ ಗುಂಪಿನಿಂದ ಯಾವುದಾದರೂ ಒಂದು ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಈ ಸಂದರ್ಭದಲ್ಲಿ ಗ್ರಂಥಪಾಲಕ ಡಾ.ಪಿ.ಎಸ್.ಕಟ್ಟಿಮನಿ, ಮುಖ್ಯ ವಾರ್ಡನ್ ಡಾ.ಬಸವರಾಜ ಎಂ.ಎಸ್., ಎನ್‍ಎಸ್‍ಎಸ್ ಅಧಿಕಾರಿ ಡಾ.ಶಿವಮ ಮಿಶ್ರಾ ಮತ್ತಿತರ ಅಧಿಕಾರಿಗಳು ತಮ್ಮ ವಿಭಾಗಗಳ ಕುರಿತು ಮಾಹಿತಿ ನೀಡಿದರು. ಡಾ.ನಿತಿನ್ ವಂದಿಸಿದರು. ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago