ಮಳಖೇಡ ಕೋಟೆಯ ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮಕ್ಕೆ ದೇಗಾಂವ ಆಗ್ರಹ

ಕಲಬುರಗಿ: ಪುನರ್ ನಿರ್ಮಾಣದ ಹೆಸರಿನಲ್ಲಿ ಮಳಖೇಡ ಕೋಟೆಯ ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಮೋಘ ವರ್ಷ ನೃಪತುಂಗ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾ ಅಧ್ಯಕ್ಷ ರವಿ ಎನ್ ದೇಗಾಂವ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರಕೂಟರ ಹೆಮ್ಮೆಯ ರಾಜಧಾನಿ,ಕನ್ನಡದ ಮೊದಲ ಗದ್ಯ ಕೃತಿ ಕವಿರಾಜಮಾರ್ಗ ನೀಡಿದ ಪುಣ್ಯಭೂಮಿ ಮಳಖೇಡ ಕೋಟೆಯನ್ನು ಪುನರ್ ನಿರ್ಮಾಣದ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿ ಕರ್ನಾಟಕ ಇತಿಹಾಸಕ್ಕೆ ಅಪಚಾರ ಎಸಗಿರುವ ಕ್ರಮವಾಗಿದ್ದು, ಭಾರಿ ಮಳೆಗೆ ಒಂದೇ ತಿಂಗಳಲ್ಲಿ ಪುನರ್ ನಿರ್ಮಿಸಿದ ಕೋಟೆಯ ಕೆಲ ಭಾಗಗಳು ಎರಡೇರಡು ಬಾರಿ ಕುಸಿದಿರುವುದು ನೋಡಿದರೆ ಕಾಮಗಾರಿಯ ಸ್ವರೂಪ ಎಂತಹದಿರಬಹುದು ಎನ್ನುವುದು ಅರ್ಥವಾಗುತ್ತದೆ.ಇದು ಕಳಪೆ ಕಾಮಗಾರಿಗೆ ಹಿಡಿದ ಸ್ಪಷ್ಟ ಕೈಗನ್ನಡಿ.ಕೋಟೆ ಪುನರ್ ನಿರ್ಮಾಣದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದವರ ವಿರುದ್ಧ ಕರ್ನಾಟಕ ನವನಿರ್ಮಾಣ ಸೇನೆ ಲೋಕಾಯುಕ್ತಕ್ಕೆ ದೂರು ನೀಡಿ ಸೂಕ್ತ ತನಿಖೆಗೆ ಒತ್ತಾಯಿಸಿದರು.

ಆಳುವ ಜನಪ್ರತಿನಿಧಿಗಳಿಗೆ ಕೋಟೆ ಎನ್ನುವುದು ಕಲ್ಲು,ಮಣ್ಣಿನ ಕಟ್ಟಡವಾಗಿ ಕಂಡಿರಬಹುದು.ನಮಗೆ ಅವು,ಸ್ವಾಭಿಮಾನ,ಅಭಿಮಾನ,ಪುರಾತನತೆ,ನಮ್ಮ ತನದ ಅಂತಸಾಕ್ಷಿಯ ದೇವ ಶಿಲ್ಪಗಳು.ಅವುಗಳನ್ನು ಉಳಿಸುವ ವಜ್ರ ಸಂಕಲ್ಪ, ಇತಿಹಾಸ ಉಳಿಸಿ ಬೆಳೆಸುವ ಪ್ರಾಮಾಣಿಕ ಕೆಲಸ ಸರಕಾರ,ಜಿಲ್ಲಾಡಳಿತ, ಜನಪ್ರತಿನಿಧಿಗಳಿಂದ ಆಗುತ್ತಿಲ್ಲ.ನಮ್ಮನ್ನು ಆಳುವವರಿಗೆ ಇತಿಹಾಸದ ಅರಿವಿಲ್ಲದಿರುವುದು ನೋವಿನ ಸಂಗತಿ.ಮಳಖೇಡ ರಾಷ್ಟ್ರಕೂಟರ ರಾಜಧಾನಿ ಕೇಂದ್ರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಾಜಧಾನಿ ಕೇಂದ್ರ. ಅದರ ಪರಿಚಯವೇ ಇಲ್ಲದವರಂತೆ ಸ್ಥಳಿಯ ಆಡಳಿತ ವರ್ತಿಸುತ್ತಿರುವುದು ನಾಚಿಕೆಗೆಡುತನವಾಗಿದೆ.

ಚನ್ನಮ್ಮನ ರಾಜ್ಯಧಾನಿ ಕಿತ್ತೂರಿನಲ್ಲಿ ಸರಕಾರ ಕಟ್ಟಿಸಿರುವ ಕೋಟೆ,ಸಂಗೊಳ್ಳಿಯಲ್ಲಿ ರಾಯಣ್ಣನ ಸ್ಮರಣಾರ್ಥ ಕಟ್ಟಿಸಿರುವ ಕೋಟೆಯ ಮಾದರಿಯಲ್ಲಿ ಮಳಖೇಡ ಕೋಟೆ ನಿರ್ಮಿಸುವ ಕೆಲಸ ಕರ್ನಾಟಕ ಸರಕಾರ ‘ಮಳಖೇಡ ಅಭಿವೃದ್ಧಿ ಪ್ರಾಧಿಕಾರ’ ರಚಿಸಿ ಮಾಡಬೇಕು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಿಂದ ಸಮಗ್ರ ಕ್ರಿಯಾಯೋಜನೆ ತಯಾರಿಸಿ ಅದರ ಅನುದಾನದಲ್ಲೇ ಕೋಟೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ.ಇಂತಹದೊಂದು ಐತಿಹಾಸಿಕ ಕೆಲಸಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಾಕ್ಷಿಯಾಗಬೇಕು.

ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈ ಭಾಗದ ಹೆಮ್ಮೆಯ ರಾಜ್ಯ ಮನೆತನವನ್ನು ಆಳಿದ ಪ್ರಸಿದ್ಧ ಅರಸ ಅಮೋಘವರ್ಷ ನೃಪತುಂಗ ಹೆಸರಿನಲ್ಲಿ ಅಧ್ಯಯನ ಪೀಠ ಪ್ರಾರಂಭಿಸಿ ನಮ್ಮ ಹೆಮ್ಮೆಯ ರಾಜನ ಪರಿಚಯ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಆಗಬೇಕು.ರಾಷ್ಟ್ರಕೂಟ ಸಾಮ್ರಾಜ್ಯದ ಮತ್ತು ಅಮೋಘ ವರ್ಷ ನೃಪತುಂಗನ ಬಗ್ಗೆ ಇನ್ನೂ ಆಳವಾದ ಸಂಶೋಧನೆ ಆಗಬೇಕಿದೆ.ಕವಿರಾಜಮಾರ್ಗದ ಪರಿಚಯ ಅಖಂಡ ಭಾರತಕ್ಕೆ ತಿಳಿಸಬೇಕಿದೆ.ಈ ಎಲ್ಲಾ ಕಾರಣಗಳಿಗಾಗಿ ಸರಕಾರ ಅಮೋಘ ವರ್ಷ ನೃಪತುಂಗ ಹೆಸರಿನ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ನಾವು ಒತ್ತಾಯಿಸಿದ್ದಾರೆ.

ಕಲಬುರಗಿಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ವಿಮಾನ ನಿಲ್ದಾಣಕ್ಕೆ ಹೆಮ್ಮೆಯ ದೊರೆ ಅಮೋಘವರ್ಷ ನೃಪತುಂಗನ ಹೆಸರಿಡುವಂತೆ ನಾವು ಒತ್ತಾಯಿಸುತ್ತೇವೆ.ರಾಷ್ಟ್ರಕೂಟರ ರಾಜಧಾನಿ ಕೇಂದ್ರದ ಮಣ್ಣಿನಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಕ್ಕೆ ಅಮೋಘ ವರ್ಷ ನೃಪತುಂಗನ ಹೆಸರೇ ಸೂಕ್ತ.ಈ ವಿಚಾರದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಈ ಹಿಂದೆಯೂ ಹೋರಾಟಮಾಡಿದೆ. ಮುಂದಿನ ತಿಂಗಳು ಕಲಬುರಗಿ ನಗರದಲ್ಲಿ ರಾಜ್ಯಾಧ್ಯಕ್ಷರಾದ ಭೀಮಾಶಂಕರ ಪಾಟೀಲ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಕಾಲ್ನಡಿಗೆ ಜಾಥ ಮಾಡಿ ಜನ ಜಾಗೃತಿ ಮಾಡಲಾಗಿದೆ ಎಂದು ದೇಗಾಂವ  ಹೇಳಿದರು. ಈ ಸಂದರ್ಭದಲ್ಲಿ ಪ್ರಶಾಂತ್ ವಿ ಮಠಪತಿ, ಸಂತೋಷ್ ಪಾಟೀಲ್, ಭೀಮಶಂಕರ್ ಕೊರವಿ, ಅಶ್ವಥ್ ತರ್ಪೆಲ್, ಈರಣ್ಣ ಪಾಟೀಲ್, ರಾಮು  ಮಂಗಾ, ಮೌನೇಶ್ ದಿನಕೆರಿ, ಶೇಖರ್ ವಗದರಗಿ, ಹುಸೇನ್ ಮಿಯಾ ಸೇಡಂ ಇದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

5 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

16 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

16 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

18 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

18 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

18 hours ago