ಸಂಗೀತದಿಂದ ಮಾನಸಿಕ ಆರೋಗ್ಯ ಮತ್ತು ಸ್ಮರಣ ಶಕ್ತಿ ವೃದ್ಧಿ

ಕಲಬುರಗಿ: ನಗರದ ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಬಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಯುವ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿಸಲು ಏರ್ಪಡಿಸಿದ ವಿಶೇಷ ಕಾರ್ಯಕ್ರಮ “ವಚನ-ನಾದ-ಧ್ಯಾನ” ಕಾರ್ಯಕ್ರಮವನ್ನು ಬಾಪು ಪದ್ಮನಾಭ ಅಂತರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರು, ರಾಷ್ಟ್ರಪ್ರಶಸ್ತಿ ಪುರಸ್ಕøತರು ಅವರು ಉದ್ಘಾಟಿಸಿ ಕೊಳಲು ವಾದನ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ಮಾತನಾಡುತ್ತ, “ಬಿದಿರುಗೆ  ಸಂಸ್ಕಾರ ಕೊಟ್ಟಾಗ ಕೊಳಲಾಗುತ್ತದೆ. ಅದಕ್ಕೆ ಉತ್ತಮವಾಗಿ ನುಡಿಸಿದಾಗ ಸಂಗೀತ ಹೊರಹೊಮ್ಮುತ್ತದೆ. ಹಾಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ಅವಶ್ಯ ಎಂದರು.

ಬರೀ ದೈವಿಕೃಪೆ ಇರಬೇಕೆಂದು ಅಪೇಕ್ಷಿಸುತ್ತೇವೆ ಆದರೆ “ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯಶೀಲತೆ ಇದ್ದಲ್ಲಿ ದೈವಿಕೃಪೆ ಇರುತ್ತದೆ” ಎಂಬ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ ನುಡಿಮುತ್ತನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಿಮ್ಮ ವ್ಯಕ್ತಿತ್ವ ವಿಕಾಸಗೊಳುತ್ತದೆ ಅದಕ್ಕೆ ಸಂಗೀತ ಕಲಿಯುವುದರಿಂದ, ಹಾಡುವುದರಿಂದ ಮನಸ್ಸಿಗೆ ಆನಂದ ಉಂಟಾಗುತ್ತದೆ. ಏಕಾಗ್ರತೆ ಹೆಚ್ಚಾಗುತ್ತದೆ. ಪಠ್ಯಪುಸ್ತಕಗಳಲ್ಲಿನ ಪದ್ಯಗಳನ್ನು ಸಂಗೀತಕ್ಕೆ ಅಳವಡಿಸಿದರೆ ಸದಾಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರೇರೇಪಿಸಿದರು.

ಶರಣರ ವಚನಗಳನ್ನು ಕೊಳಲು ವಾದನದಲ್ಲಿ ನುಡಿಸಿ ಸಂಗೀತದ ರಸಾನುಭವವನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಕಲೆ, ಸಾಹಿತ್ಯ, ಸಂಗೀತದಲ್ಲಿಯೂ ಆಸಕ್ತಿ ಹೆಚ್ಚಾದರೆ ಏಕಾಗ್ರತೆ ಹೆಚ್ಚಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರೋತ್ಸಾಹಿಸಿದರು.

ಉದ್ದಂಡಯ್ಯ, ಸಂಚಾಲಕರು ಬಸವ ಸಮಿತಿ ಕಲಬುರಗಿ ಅವರು ವಿದ್ಯಾರ್ಥಿಗಳು ಶರಣರ ವಚನಗಳನ್ನು ಓದಿ ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದರು. ಡಾ. ಆನಂದ ಸಿದ್ಧಾಮಣಿ ಅವರು ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, “ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಏಕಾಗ್ರತೆ ಮತ್ತು ಧ್ಯಾನದ ಅವಶ್ಯಕತೆ ಇದೆ. ಶರಣರ ವಚನಗಳನ್ನು ಓದಿ ಅರ್ಥಿಸಿಕೊಂಡಾಗ ಅವು ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.

ಜೀವನದಲ್ಲಿ ಉತ್ತಮ ಮನುಷ್ಯನಾಗಲು, ಯಶಸ್ಸು ಸಾಧಿಸಲು ನಮ್ಮ ಗುರಿಯೇ ನಮ್ಮ ಧ್ಯಾನ, ಕತ್ತಲೇಯಲ್ಲಿ ಅದೇ ನಾದ ಮತ್ತು ಶ್ರೇಷ್ಠ ಸಾಧಕರಂತೆ ಸಾಧನೆ ಮಾಡಲು ಕಠಿಣ-ಪರಿಶ್ರಮ, ಪ್ರಾಮಾಣಿಕತೆ, ನಿರಂತರ ಅಧ್ಯಯನ, ಏಕಾಗ್ರತೆ, ಧ್ಯಾನ ನಿಮ್ಮದಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರ್ವಜ್ಞ ಕಾಲೇಜಿನ ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಐಐಟಿ’ಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ,ಪ್ರಭುಗೌಡ ಸಿದ್ಧಾರೆಡ್ಡಿ, ರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು.

emedialine

Recent Posts

ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ 117 ನೇ ಜನ್ಮದಿನೋತ್ಸವ

ರಾಯಚೂರು: ಭಾರತದ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 117 ನೇ ಜನ್ಮದಿನೋತ್ಸವವನ್ನು ಅಖಿಲಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ-ಎಐಆರ್ ಎಸ್…

3 hours ago

ಶಿವರಾಜ್ ಪಾಟೀಲ್ ಗೋಣಿಗಿಗೆ ಪ್ರಶಸ್ತಿ ಪ್ರದಾನ: ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಶಿವರಾಜ್ ಪಾಟೀಲ್ ಗೋಣಿಗಿ ಅವರಿಗೆ ನಗರ ರಂಗ ಮಂದಿರದಲ್ಲಿ ಶನಿವಾರ ಪೂಜ್ಯ ಹಾರಕೂಡ ಶ್ರೀಗಳು…

4 hours ago

ಕಲಬುರಗಿ: ಶ್ರೀರೇವಣಸಿದ್ದೇಶ್ವರ ಹುಂಡಿಯಲ್ಲಿ ಚಿನ್ನ, ಬೆಳ್ಳಿ 37.94 ಲಕ್ಷ ರೂ. ನಗದು ಸಂಗ್ರಹ

ಕಲಬುರಗಿ: ಇಲ್ಲಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ತಾಪ್ತಿಯ ಸುಪ್ರಸಿದ್ಧ ದೇವಸ್ಥಾನದಲ್ಲಿ ಒಂದಾಗಿರುವ ರೇವಗ್ಗಿ ರಟಕಲ್ ಶ್ರೀರೇವಣಸಿದ್ದೇಶ್ವರ ದೇವಸ್ಥಾನದ ಸುಮಾರು…

6 hours ago

ಕಲಬುರಗಿ: ದಾರಿದೀಪ ಕಂಬಗಳು ಲೋಕಾರ್ಪಣೆ

ಕಲಬುರಗಿ : ಮಹಾನಗರ ಪಾಲಿಕೆ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿ ಮೋಹನ್ ಲಾಡ್ಜ ವೃತ್ತದಿಂದ ರಾಮಮಂದಿರ…

20 hours ago

ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಎಸ್.ಯು.ಸಿ.ಐ(ಸಿ) ಮನವಿ

ಶಹಾಬಾದ: ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಗುರುವಾರ ನಗರದ ಎಸ್.ಯು.ಸಿ.ಐ(ಸಿ)ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ.ಕೆ.ಮಾನೆ ಅವರ ನೇತೃತ್ವದ…

20 hours ago

ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ

ಶಹಾಬಾದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ತಾಲೂಕು ಕಚೇರಿಯ ಮುಂದೆ ಗುರುವಾರ ಕಪ್ಪುಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420