ಕಲಬುರಗಿ: ‘ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗ ಮಂಡಲ ಬೆಂಗಳೂರು, ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಹಯೋಗದಲ್ಲಿ ಐಡಿಯಲ್ ಫೈನ್ ಆರ್ಟ್ಸನ ಕಲಾ ನಿಕೇತನ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತೊಗರಿ ನಾಡಿನಲ್ಲಿ ಜನರೆಡೆಗೆ ಕಾವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ದೀಪದ ಹಾಗೆ ದೀಪಕ್ಕೆ ದಿಕ್ಕಿನ ಪರಿವೇ ಇರುವುದಿಲ್ಲ. ಜಗತ್ತಿನಲ್ಲಿ ಇಂದು ಮದ್ದು ಗುಂಡುಗಳ ಸಪ್ಪಳ ಕೇಳಿ ಬರುತ್ತಿದ್ದು, ಜನರ ನೋವಿಗೆ ಸ್ಪಂದಿಸುವ, ಮದ್ದಾಗುವ, ಮುಲಾಮು ಹಚ್ವುವ ಕೆಲಸ ಆಗಲಿ ಎಂದು ತಿಳಿಸಿದರು.
ವಚನಕಾರರ ಮಾತಿನಂತೆ ಕಾವ್ಯಕ್ಕೆ ಜ್ಯೋತಿ ಮುಟ್ಟಿ ತಾ ಜ್ಯೋತಿಯಾಗುವ ಶಕ್ತಿ ಇದೆ. ಕಾವ್ಯ ಖಡ್ಗವಾಗುವುದರ ಜೊತೆಗೆ ಕಾವ್ಯ ಬದುಕಾಗಬೇಕು ಎಂದು ಅವರು ಕರೆ ನೀಡಿದರು.
ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ಕಾಶೀನಾಥ ಅಂಬಲಗೆ ಮಾತನಾಡಿ, ಕವಿಯಾದವರು ಕೇವಲ ಶಬ್ದಗಳನ್ನು ಜೋಡಿಸಿ, ಪೋಣಿಸಿ ಹೆಣೆದ ಕಾವ್ಯ ಆಗುವುದಿಲ್ಲ. ಕಾವ್ಯ ತನ್ನ ಕಾಲಘಟ್ಟದ ಸಂಘರ್ಷಗಳನ್ನು ಚಿತ್ರಿಸಬೇಕು ಎಂದರು.
ಕಾವ್ಯಕ್ಕೆ ಯುದ್ಧ ನಿಲ್ಲಿಸುವ ತಾಕತ್ತು ಇದೆ. ಹೀಗಾಗಿ ಕಾವ್ಯ ಬೆಳಕಾಗಬೇಕು, ಕಾವ್ಯ ಬೆಳದಿಂಗಳಾಗಬೇಕು. ಶರಣರ ಸಮತಾ ಯೋಗದ ದೀಕ್ಷೆ ಕೊಡಬೇಕು ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಡಾ. ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಜಿ.ಎನ್. ಮೋಹನ ಮಾತನಾಡಿದರು. ಹಿರಿಯ ರಂಗಕರ್ಮಿ ಕೆ.ಗುಂಡಣ್ಣ ವೇದಿಕೆಯಲ್ಲಿದ್ದರು. ಮಹಿಪಾಲರೆಡ್ಡಿ ಮುನ್ನೂರ್ ನಿರೂಪಿಸಿದರು. ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ಕಿರಣ ಪಾಟೀಲ ಪ್ರಾರ್ಥನೆಗೀತೆ ಹಾಡಿದರು.
ಕಾವ್ಯ ಮನುಷ್ಯನಿಗೆ ಆತ್ಮಸ್ಥೈರ್ಯ, ಚೈತನ್ಯ ತುಂಬುತ್ತದೆ. ಕಾವ್ಯ ಮತ್ತು ರಂಗಭೂಮಿಯಿಂದ ನೋವು ನಿವಾರಣೆಯಾಗುತ್ತದೆ. ಈ ಕಾವ್ಯ ಯಾನ ಈಗಾಗಲೇ 3 ಜಿಲ್ಲೆಗಳನ್ನು ದಾಟಿದ್ದು, ಮಂಡ್ಯದಲ್ಲಿ ನಡೆಯುವ 10ನೇ ಕಾವ್ಯಯಾನ ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲಾಧ್ಯಕ್ಷರ ಸಮಾಗಮ ಕಾರ್ಯಕ್ರಮ ನಡೆಯಲಿದೆ. -ಡಿ.ಬಿ. ಮಲ್ಲಿಕಾರ್ಜುನ ಸ್ವಾಮಿ, ಕಾವ್ಯಯಾನದ ರೂವಾರಿ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…