ಶಹಾಬಾದ- ಜೇವರ್ಗಿ ರಾಜ್ಯ ಹೆದ್ದಾರಿ ನಿರ್ಮಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಶಹಾಬಾದ: ದಶಕಗಳಿಂದ ರಸ್ತೆ ನಿರ್ಮಾಣಕ್ಕಾಗಿ ಶಹಾಬಾದ ಜನರು, ಪ್ರಗತಿಪರ ವಿಚಾರವಂತರು,ಗ್ರಾಮಸ್ಥರು ನಿರಂತರವಾಗಿ ಹೋರಾಟ ಮಾಡಿ ಗಮನಕ್ಕೆ ತಂದರೂ ರಸ್ತೆ ನಿರ್ಮಾಣ ಮುಂದಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ಎಸ್‍ಯುಸಿಐ(ಸಿ) ಪಕ್ಷದ ವತಿಯಿಂದ ಸೋಮವಾರ ತೊನಸನಹಳ್ಳಿ (ಎಸ್) ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು.

ಎಸ್‍ಯುಸಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಮ್.ಶಶಿಧರ್ ಹಾಗೂ ಸ್ಥಳೀಯ ಕಾರ್ಯದರ್ಶಿ ಗಣಪತರಾವ.ಕೆ.ಮಾನೆ ಮಾತನಾಡಿ, ಶಹಾಬಾದ ತಾಲೂಕಿನ ಪ್ರಮುಖ ಗ್ರಾಮವಾದ ತೋನಸನಹಳ್ಳಿ ಗ್ರಾಮವು ಶಹಾಬಾದ ಹಾಗೂ ಜೇವರ್ಗಿ ತಾಲೂಕಿನ ಜನರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಹೊಂದಿದೆ. ಗ್ರಾಮದಿಂದ ದಿನನಿತ್ಯ ನೂರಾರು ಜನ ವಿದ್ಯಾರ್ಥಿ-ಯುವಜನರು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ವಿವಿಧ ಕಾರ್ಯಗಳಿಗಾಗಿ ಶಹಾಬಾದ, ಕಲಬುರಗಿ, ಚಿತ್ತಾಪೂರ ಹಾಗೂ ಜೇವರ್ಗಿಗೆ ಹೋಗಲು ಈ ಹೆದ್ದಾರಿಯನ್ನೇ ಅವಲಂಬಿಸಿದ್ದಾರೆ.

ಆದರೇ ರಸ್ಥೆ ಮಾತ್ರ ಅದೋಗತಿ. ಸಂಪೂರ್ಣ ಕಳಪೆ ಕಾಮಗಾರಿ ನಡೆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕೇಳುತ್ತಿಲ್ಲ.ಅಲ್ಲದೇ ಬಿಲ್ ಕೂಡ ತಡೆಯುತ್ತಿಲ್ಲ. ಇದೆಂಥ ಭ್ರಷ್ಟ ವ್ಯವಸ್ಥೆ. ಪ್ರಜಾಪ್ರಭುತ್ವದಲ್ಲಿ ಜನರ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸದಿರವುದು ನೋಡಿದರೇ ನಾಚಿಕೆಯಾಗುತ್ತದೆ.ಶಹಾಬಾದನ ರಾಜ್ಯ ಹೆದ್ದಾರಿ ಹಾಳಾಗಿ ದಶಕಗಳೇ ಉರುಳಿವೆ. ಹಲವು ಬಾರಿ ನಾವು ಹೋರಾಟ ಮಾಡಿದ್ದೆವೆ.

ಯಾವ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಈ ರಸ್ತೆಯಿಂದ ನಗರದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.ನಿತ್ಯ ಇದೇ ರಸ್ತೆಯಿಂದ ಅಧಿಕಾರಿಗಳು ಸಂಚರಿಸುತ್ತಾರೆ.ಆದರೂ ಈ ಬಗ್ಗೆ ಮೌನ ವಹಿಸಿದ್ದು ನೋಡಿದರೇ, ಇಂತಹ ಅಧಿಕಾರಿಗಳು ನಮಗೇ ಬೇಕಾ ಎಂಬ ಪ್ರಶ್ನೆ ಮೂಡುತ್ತಿದೆ.

ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಎಲ್ಲಿಲ್ಲ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಾದರೆ ಕೆಸರು, ಹೊಂಡಗಳಿಂದ ಜನರು ಅಪಘಾತಕ್ಕೆ ಒಳಗಾದರೆ, ಮಳೆಯಿಲ್ಲದ ಸಂದರ್ಭದಲ್ಲಿ ಧೂಳಿನ ಸಮಸ್ಯೆ ಎದುರಾಗುತ್ತಿದೆ. ರಸ್ತೆಯಲ್ಲಿ ತಗ್ಗುಗಳಿವೆಯೀ ಅಥವಾ ತಗ್ಗುಗಳಲ್ಲಿ ರಸ್ತೆಯಿದೆಯೋ ಗೊತ್ತಾಗುತ್ತಿಲ್ಲ. ಮರಗೋಳ ಕಾಲೇಜಿನಿಂದ ದಾದಿ ಪೀರ ದರ್ಗಾವರೆಗಿನ ರಸ್ತೆಯ ಮೇಲೆ ಮೋಟಾರ್ ಬೈಕ್ ಹೋಗುವ ಹಾಗಿಲ್ಲ.ಕಾರು, ಲಾರಿಗಳ ಸಂಚಾರ ಎಲ್ಲಿಲ್ಲದ ಕಷ್ಟ. ರಸ್ತೆ ಕಳಪೆ ಮಾಡಿ ಬಿಲ್ ಎತ್ತಿ ಹಾಕಿದರೂ ಯಾವ ಅಧಿಕಾರಿಗಳು ಏನು ಮಾಡೋದಿಲ್ಲ ಎಂದರೆ.

ಜನಪ್ರತಿನಿಧಿಗಳಿಗೆ ಕಿವಿ, ಬಾಯಿ ಇದೆಯೋ ? ಇಲ್ಲ ಎಂಬ ಪ್ರಶ್ನೆ ಮೂಡುತ್ತದೆ.ಕೂಡಲೇ ಉತ್ತಮ ರಾಜ್ಯ ಹೆದ್ದಾರಿಯನ್ನು ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದರು. ಪಿಎಸ್‍ಐ ಚಂದ್ರಕಾಂತ ಮಕಾಲೆ ಅವರಿಂದ ಬಿಗಿ ಪೊಲೀಸ್ ಬಂದೋಬಸ್ಥ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಪ್ರಭು ಮಂಗಳೂರು,ಸದಸ್ಯರಾದ ಗುಂಡಮ್ಮ ಮಡಿವಾಳ, ರಾಘವೇಂದ್ರ.ಎಮ್.ಜಿ, ಭಾಗಣ್ಣ ಬುಕ್ಕಾ, ರಾಜೇಂದ್ರ ಅತನೂರ್,ಸಿದ್ದು ಚೌದ್ರಿ, ನೀಲಕಂಠ ಹುಲಿ,ಜಗನ್ನಾಥ.ಎಸ್.ಹೆಚ್, ಮಲ್ಲಣ್ಣಗೌಡ, ಬಸವರಾಜ ರೆಡ್ಡಿ, ಬಸವರಾಜ ಗೊಳೇದ್, ಅಭಿಷೇಕ ಪಾಟೀಲ ಸೇರಿದಂತೆ ಎಸ್‍ಯುಸಿಐ(ಸಿ) ಪಕ್ಷದ ಪದಾಧಿಕಾರಿಗಳು ಹಾಗೂ ತೊನಸನಹಳ್ಳಿ(ಎಸ್) ಗ್ರಾಮಸ್ಥರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago