ಕಲಬುರಗಿ: ಇಲ್ಲಿನ ಸಾರ್ವಜನಿಕ ಉದ್ಯಾನವನದ ಎದುರು ಇರುವ ಟಾಟಾ ತನಿಷ್ಕ್ ಫ್ರಾಂಚೈಸಿ ಮಾಲೀಕರಾದ ಸಚಿನ್ ಮೆಹತಾ, ಆನಂದ ಶಹಾ ಒಡೆತನದ ಆಭರಣ ಶೋರುಂನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ನವ ರಾಣಿ ಹೊಸ ವಿನ್ಯಾಸದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಬಾಹುಬಲಿ ಚಲನಚಿತ್ರ, ರಾಜ ಮನೆತನದ ಮಹಾರಾಣಿಯರ ಸಂಪ್ರಾದಾಯಿಕ ಶೈಲಿಯ ನವವಿನ್ಯಾಸ ಮಾದರಿಯ ನವರಾಣಿ ಅತ್ಯಾಕರ್ಷಕ ಚಿನ್ನಾಭರಣ ನೋಡುಗರ ಚಿತ್ತಾಕರ್ಷಿಸುವಂತಿವೆ. ವಲಯ ಶಾಖೆ ವ್ಯವಸ್ಥಾಪಕ ಅರ್ಜುನ ಶಿರೋಡಕರ್, ಶಾಖಾ ವ್ಯವಸ್ಥಾಪಕ ಸೈಯದ್ ಇಮ್ರಾನ್ ನೇತೃತ್ವದಲ್ಲಿ ಹಿಂದಿನ ಗತವೈಭವದ ಮರಕಳುಹಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ, ಪ್ರೇರಣಾತ್ಮಕ ಚಿನ್ನಾಭರಣಗಳನ್ನು ತಯಾರಿಸಲಾಗಿದೆ ಎಂದು ನೆರೆದ ಪ್ರೇಕ್ಷಕರಿಗೆ ಚಿನ್ನಾಭರಣಗಳ ವೈಶಿಷ್ಟತೆ ಬಗ್ಗೆ ತಿಳಿಸಿದರು.
ಅಲ್ಲದೆ ದಸರಾ ಹಬ್ಬದ ವರೆಗೆ ಚಿನ್ನಾಭರಣ ಮತ್ತು ಡೈಮಂಡ್ ಆಭರಣ ತಯಾರಿಕೆ ಮೇಲೆ ಶೇ.20ರವರೆಗೆ ರಿಯಾಯತಿ ದರ ಇರಲಿದೆ. ಯಾವುದೇ ಆಭರಣದಿಂದ ಖರೀದಿಸಿದ ಹಳೆಯ ಚಿನ್ನದ ಮೇಲೆ ವಿನಿಮಯ ಮೌಲ್ಯ ಶೇ. 100 ರಷ್ಟು ಹೆಚ್ಚುವರಿಯಾಗಿ ದೊರೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ಟೋರ್ ಮ್ಯಾನೇಜರ್ ಸೈಯದ್ ಇಮ್ರಾನ್ ಮನವಿ ಮಾಡಿದರು.
ಗ್ರಾಹಕಿಯರಾದ ಫರೀನಾ, ವಿಜಯಲಕ್ಷ್ಮೀ, ಶ್ರೀದೇವಿ ಟೆಂಗಳಿ, ಗ್ರಾಹಕರಾದ ಚೇತನ, ಅಮರೇಶ, ಪ್ರವೀಣ, ಶಾಹೀನ್ ಮೊದಲಾದವರು ಈ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ವೇಳೆಗೆ ಗ್ರಾಹಕರಿಂದ ಜ್ಯುವೆಲ್ಲರಿ ಶೋ ನಡೆಯಿತು. ಸಿಬ್ಬಂದಿಯವರಾದ ಯುವರಾಜ್, ಸ್ವಾಮಿ, ಸಿದ್ದು, ಅಜರ್, ನಶ್ರೀನ್ ಮತ್ತಿತರರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…