ಜಾತಿ, ಧರ್ಮ, ಭಾಷೆ, ಎಲ್ಲವನ್ನು ಮೀರಿನಿಂತ ಭಕ್ತಿಯ ದೇವರ ಉಪಾಸನೆಯೇ ಭಜನೆ

ಕಲಬುರಗಿ: ಎಷ್ಟೋ ಜನರ ಜೀವನ ಭಜನೆಯಿಂದ ಬದಲಾಗಿಗೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆ ಮಾಡುವುದರಿಂದ ಎದ್ದು ಗುಣಮುಖರಾದ ಚರಿತ್ರೆ ಭಜನೆಗಿದೆ ಎನ್ನುತ್ತ ಭಜನೆಯ ಮೂಲಕ ದೇವರಿಗೆ ಆಪ್ತರಾದವರು ಒಂದಿಲ್ಲ ಒಂದು ದಿನ ಬದುಕಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಅನ್ನುವುದು ಹಿರಿಯ ಭಜನೆ ಸಂಗೀತಗಾರರ ಬಲವಾದ ನಂಬಿಕೆ ಹಾಗೂ ವಿಶ್ವಾಸವು ಇದೆ ಎಂದು ಮರತೂರಿನ ಹುಣಚಿರಾಯ ಮುತ್ಯ ನುಡಿದರು.

ಜಿ.ಡಿ.ಎ. ಲೇಔಟನ ಶಿವಶರಣನಂದ ಆಶ್ರಮ  ಕಾಲೋನಿಯಲ್ಲಿ ಪಿತೃಪಕ್ಷದ ದಿII ಸಿದ್ದಪ್ಪ ಬುಳ್ಳಾ ಅವರ ಸ್ಮಣಾರ್ಥ ನಿಮಿತ್ಯ ಹಮ್ಮಿಕೊಂಡ “ವಚನಗಳಿಂದ ಭಜನೆ” ವಿಶೇಷ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿವರಾಜ ಅಂಡಗಿ ಅವರು ಮಾತನಾಡುತ್ತ ಇವನಾರವ ಇವನಾರವ ಇವನಾರವನೆಂದಸದೆರಯ್ಯ, ನೆಲನೋಂದೆ ಹೊಲಗೇರಿ ಶಿವಾಲಯಕ್ಕೆ, ಕಲಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಹೀಗೆ ಅನೇಕ ಶರಣ ಶರಣಿಯರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ವೈಚಾರಿಕ ಚಿಂತನೆ ನ್ಯಾಯದ ಪರಿಕಲ್ಪನೆಗಳಿವೆ ಅವುಗಳನ್ನು ಸರಳ ಕನ್ನಡದ ಭಾಷೆಗಳಲ್ಲಿ ರಚನೆಯಾದ ವಚನಗಳನ್ನೆ ಭಜನೆಗಳಲ್ಲಿ ಹಾಡುವ ಮೂಲಕ ಜನಸಾಮಾನ್ಯರಿಗೆ ದೃದಯದಿಂದ ದೃದಯಕ್ಕೆ ವಚನ ಸಾಹಿತ್ಯ ಬಿತ್ತರಿಸಿ ಅರ್ಥಿಸಿಕೊಂಡು ಜೀವನದಲ್ಲಿ ಅನುಕರಣೆ ಮಾಡುವ ಉದ್ದೇಶದಿಂದಲೆ ವಚನೋತ್ಸವ ಪ್ರತಿಷ್ಠಾನ ಯುವಘಟಕದ ವತಿಯಿಂದ “ವಚನಗಳಿಂದ ಭಜನೆ” ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾತನಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಥೀತಿಗಳಾಗಿ ಆಗಮಿಸಿದ ನ್ಯಾಯವಾದಿ ಶಿವಲಿಂಗಪ್ಪ ಅಸ್ಟಗಿ ಅವರು ಮಾತನಾಡುತ್ತ ನಾನು ಬಹಾಳಷ್ಟು ಭಜನೆ ಕಾರ್ಯಕ್ರಮ ಭಾಗವಹಿಸಿದ್ದೇನೆ ಭಕ್ತಿ ಮತ್ತು ಆಧ್ಯಾತ್ಮಿಕ ಬಿತ್ತರಿಸುವ ಪದಗಳನ್ನೆ ಕೇಳಿದ್ದೇವೆ ಇಲ್ಲಿ ವಚನಗಳಿಂದ ಭಜನೆ ವಿಶೇಷ ಕಾರ್ಯಕ್ರಮ ನಾನು ಮೊಟ್ಟ ಮೊದಲ ಬಾರಿಗೆ ನೊಡುತಿದ್ದೇನೆ ಒತ್ತಡದ ಬದುಕಿನಲ್ಲಿ ಜೀವಿಸಿರುತ್ತಿರುವ ಜನಸಾಮಾನ್ಯರಿಗೆ ವಚನ ಸಾಹಿತ್ಯದಲ್ಲಿ ಅಡಗಿದ ಮಹತ್ವದ ಸಂದೇಶ ನೀಡುವ ಒಳ್ಳೆಯ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಕವಿ ಎಮ್.ಎನ್.ಸುಗಂಧಿ ಪ್ರಾರ್ಥಿಸಿ ಓಂಕಾರ ಪಠಿಸಿ ಅದರ ವೈಜ್ಞಾನಿಕವಾಗಿ ಮತ್ತು ದೈಹಿಕವಾಗಿ ಆಗುವ ಅನುಕೂಲತೆಗಳ ಬಗ್ಗೆ ವಿವರಿಸಿದರು ವಿನೋದ ಕುಮಾರ ಜೆನೆವೇರಿ ಸ್ವಾಗತಿಸಿದರು ಸಾಯಿಕುಮಾರ ರುಸ್ತಂಪೂರ ವಂದಿಸಿದರು.

ಭಜನೆ ಸಂಗೀತ ಪೇಟಿ ಮಾಸ್ಟರ್ ತಿಪ್ಪಣ್ಣ ಬಟಗೇರ, ತಬಲ ಕಲಾವಿದರಾದ ಮಲ್ಲಿಕಾರ್ಜುನ ವಿಶ್ವಕರ್ಮ ಹುಣಚಿರಾಯ ಮುತ್ಯಾ ಹಾಗೂ ಶಿವಶರಣಪ್ಪ ಅಗಸಿಮನಿ, ಶರಣಮ್ಮ ಸೇಡಂ, ಮಹಾದೇವಿ ಸೇಡಂ, ಮಹಾದೇವಿ ಬೀರನಳ್ಳಿ, ಚಿದಾನಂದ ಬುಳ್ಳಾ, ವಿಜಯಲಕ್ಷ್ಮಿ, ಶಿವಶರಣಪ್ಪ ಪೂಜಾರಿ, ಮಹಾದೇವಿ, ವಿದ್ಯಾಶ್ರೀ ಡಾ. ವಿವೇಕನಂದ ಬುಳ್ಳಾ ಕಲಾವಿದರಿಂದ ಇಡಿ ರಾತ್ರಿ ಅನೇಕ ವಚನಗಳಿಂದ ಹಾಗೂ ಭಕ್ತಿ ಪದಗಳಿಂದ ಭಜನೆ ಮಾಡಿ ಜಾಗರಣೆ ಮಾಡಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago