ಸಂಸ್ಕøತಿ ಉಳಿಸಿ ಬೆಳೆಸುವ ಸಂಘದ ಕಾರ್ಯ ಶ್ಲಾಘನೀಯ

ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಈ ಕನ್ನಡ ಸಾಹಿತ್ಯ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು.

ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಹಮ್ಮಿಕೊಂಡಿದ್ದ 82ನೇ ನಾಡಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ,ಬುದ್ಧಿವಂತ ಶೆಟ್ಟರ್ ಅವರೊಂದಿಗೆ ಅನೇಕ ಮಹನಿಯರು ಸಂಘ ಕಟ್ಟಿ ಬೆಳೆಸಿದ್ದಾರೆ.ರಾಜ್ಯೋತ್ಸವ ಪ್ರಶಸ್ತಿಕೂಡ ಬಂದಿರುವುದು ಸಂತೋಷದ ಸಂಗತಿಯಾಗಿದೆ. ಈ ಸಂಘದ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ,ಕಳೆದ ವರ್ಷ ನನ್ನ ತಂದೆ ಬಂದು ಉದ್ಘಾಟಿಸಿದ್ದರು,ಈಬಾರಿ ಅವರಿಲ್ಲ ಎನ್ನುವುದು ನೋವಿನ ಸಂಗತಿ,ಈಬಾರಿಯ ಕಾರ್ಯಕ್ರಮಕ್ಕೆ ನನ್ನನ್ನು ಉದ್ಘಾಟಿಸಲು ಆಹ್ವಾನಿಸಿದ ಸಂಘದ ಎಲ್ಲಾ ಹಿರಿಯರಿಗೂ,ಪದಾಧಿಕಾರಿಗಳಿಗು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿ,ಬಸವಾದಿ ಶರಣರ ವಿಚಾರಧಾರೆ ಯಿಂದ ಪ್ರಭಾವಿತಳಾಗಿ ಮೊದಲು ಪ್ರವಚನ ಮಾಡುತ್ತಿದ್ದೆ,ನಂತರದಲ್ಲಿ ದೃಶ್ಯವಾಹಿನಿಗಳ ಅವಕಾಶ ದಿಂದ ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ನಾನಾ ರಾಜ್ಯ ಹಾಗೂ ವಿದೇಶಗಳಲ್ಲಿಯೂ ಇಂದು ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ,ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ಎಲ್ಲ ಮಹಿಳೆಯರು ಅರಿತುಕೊಳ್ಳ ಬೇಕು ಎಂದರು.

ನಾನು ಈ ಸಂಘಕ್ಕೆ ಕಳೆದ ಎರಡು ದಶಕದ ಹಿಂದೆ ಬಂದಿದ್ದೆ,ಸಂಘವು ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಇದರ ಅಧ್ಯಕ್ಷರಾದ ಸೂಗುರೇಶ ವಾರದ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ನಾಟಿ ವೈದ್ಯ ಸಂಗಯ್ಯಸ್ವಾಮಿ ಸ್ಥಾವರಮಠ ಲಕ್ಷ್ಮೀಪುರ,ಶಿಕ್ಷಕಿ ಸುಮಿತ್ರಾ ಉಕ್ಕಲಿ ,ಕಲಾವಿದ ಲಕ್ಷ್ಮೀಕಾಂತ ಶಿರವಾಳ,ವೈದ್ಯ ಡಾ:ಮಲ್ಲೇಶ ಪೂಜಾರಿ,ಯೋಗ ಶಿಕ್ಷಕಿ ಶಿಲ್ಪಾ ಆವಂಟಿ,ಪತ್ರಕರ್ತ ಶ್ರೀಕರ ಭಟ್ ಜೋಷಿ,ತಬಲಾ ವಾದಕ ಉಮೇಶ ಯಾದವ್,ನಾಡ ದೇವಿ ಪೂಜೆ ಸಲ್ಲಿಸಿದ ರಾಮಭಟ್ ಜೋಷಿ,ಅಭಿಷೇಕ ಬಶೆಟ್ಟಿ ಅವರ ತಾಯಿ ಪದ್ಮಾಕ್ಷಿ ಹಸನಾಪುರ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ),ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಎಪಿಎಮ್‍ಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹು ನರಸಿಂಗಪೇಟ,ಸಿಂಗಾಡೆ ಕನ್ಸ್ಟ್ರಕ್ಷನ್ ಮಾಲೀಕ ನಾರಾಯಣರಾವ್ ಸಿಂಗಾಡೆ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸೂಗುರೇಶ ವಾರದ್ ಅಧ್ಯಕ್ಷೆತ ವಹಿಸಿ ಮಾತನಾಡಿದರು.ಸಾಹಿತಿ ಮಹಾಂತೇಶ ಗೋನಾಲ ನಿರೂಪಿಸಿದರು,ಶಿಕ್ಷಕ ಮಹಾದೇವಪ್ಪ ಗುತ್ತೇದಾರ ಸ್ವಾಗತಿಸಿ ವಂದಿಸಿದರು. ರಮೇಶ ಕುಲಕರ್ಣಿ ನೇತೃತ್ವದಲ್ಲಿ ಭೂಮಿಕಾ,ದೀಪಿಕಾ ಸ್ಥಾವರಮಠ ಇವರಿಂದ ಸಂಗೀತ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ಭರತ ನಾಟ್ಯ ಪ್ರದರ್ಶನ ಜರುಗಿತು.

82ನೇ ನಾಡಹಬ್ಬದ ಅಂಗವಾಗಿ ಗುರುವಾರ ಬೆಳಿಗ್ಗೆ ಸಂಘದ ಭವನದಲ್ಲಿ ನಾಡದೇವಿ ಭುವನೇಶ್ವರಿ ಮೂರ್ತಿಗೆ ಪೂಜೆ ನೆರವೇರಿಸಿ ಪ್ರಸಾದ ವಿತರಣೆ ಮಾಡಲಾಯಿತು.ಅಧ್ಯಕ್ಷ ಸೂಗುರೇಶ ವಾರದ್,ಕಾರ್ಯಾಧ್ಯಕ್ಷ ಶ್ರೀರಂಗ ಮಿರಿಯಾಲ್,ಉಪಾಧ್ಯಕ್ಷ ಶರಣಗೌಡ ಪಾಟೀಲ್,ಯಂಕಣ್ಣ ಗದ್ವಾಲ್,ಮುದ್ದಪ್ಪ ಅಪ್ಪಾಗೋಳ,ರವಿಕುಮಾರ ತ್ರಿವೇದಿ,ರಘುರಾಮ ಕಡಬೂರ,ಪ್ರಕಾಶ ಅಲಬನೂರ,ಬಸವರಾಜ ಚೆಟ್ಟಿ,ಮಲ್ಲಿಕಾರ್ಜುನರಡ್ಡಿ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago