ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ ಕಲ್ಯಾಣದ ಎಳು ಜಿಲ್ಲೆಗಳ ಎಳು ಹೋರಾಟ ಮುಖಂಡರಿಗೆ ಗೌರವ ಸನ್ಮಾನ ನೇರವೇರಿಸಿ ಮಾತ್ನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಸೆಪ್ಟೆಂಬರ್ 2024 ರಂದು ಸಂಪುಟ ಸಭೆ ನಡೆಸಿ ತೀರ್ಮಾನ ಕೈಗೊಂಡಂತೆ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಆದಷ್ಟು ಶೀಘ್ರ ಅಸ್ತಿತ್ವಕ್ಕೆ ತರಲಾಗುವುದೆಂದು ಹೇಳಿದರು.
4ನೇ ಅಕ್ಟೋಬರ್ ರಿಂದ ಆಯೋಜಿಸಿರುವ ಒಂಬತ್ತು ದಿನಗಳ ದಸರಾ ಮಹೋತ್ಸವ ಅಂಗವಾಗಿ ಶುಕ್ರವಾರ ರಾತ್ರಿ ಸಿಂಧನೂರ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ನಾಗರಿಕ ಸನ್ಮಾನ ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ 371ನೇ ಕಲಂ ತಿದ್ದುಪಡಿ ಜಾರಿಗೆ ತರಲು ದಶಕಗಳಿಂದ ಹೋರಾಟದ ನಡೆಸಿದ ಫಲಸ್ವರೂಪ ಮತ್ತು ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ರವರ ಬಲವಾದ ರಾಜಕೀಯ ಇಚ್ಛಾಶಕ್ತಿಯಿಂದ ಸಂವಿಧಾನದ 371ನೇ ಜೇ ಕಲಂ ಜಾರಿಗೆ ಬಂದಿದೆ.ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ತಾವು ವಿಶೇಷ ಬದ್ದತೆ ಪ್ರದರ್ಶಿಸಿದ್ದು ಮುಂದೆಯೂ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದರು.
371ನೇ ಕಲಂ ತಿದ್ದುಪಡಿ ಮಾಡಿ ಜಾರಿಗೆ ತರಲು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿರುವ ಕಲ್ಯಾಣದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ ಹಿರಿಯ ಹೋರಾಟಗಾರರಾದ ಡಾ.ಲಕ್ಷ್ಮಣ ದಸ್ತಿ ಡಾ.ರಜಾಕ ಉಸ್ತಾದ್, ರಾಘವೇಂದ್ರ ಕುಷ್ಟಗಿ, ಅನಿಲಕುಮಾರ ಬೇಲ್ದಾರ, ಸಿರಿಗೆರೆ ಪನ್ನರಾಜ, ಬಸವರಾಜ ದಳಪತಿ, ಸಂತೋಷ ದೇಶಪಾಂಡೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತ ಸಚಿವರಾದ ಎಚ್ .ಕೆ.ಪಾಟೀಲ ಡಾ.ಶರಣ ಪ್ರಕಾಶ ಪಾಟೀಲ,ಎನ್ .ಎಸ್.ಬೋಸರಾಜು, ರಾಯಚೂರು ಕೊಪ್ಪಳ ಜಿಲ್ಲೆಗಳ ಸಂಸದರು ಶಾಸಕರು ವಿಶೇಷ ಸನ್ಮಾನ ನೀಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಸಚಿವರಾದ ಎಚ್ ಕೆ ಪಾಟೀಲ್ ರವರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಗೆ ಬಂದಿರುವ ಸಂವಿಧಾನದ ವಿಶೇಷ ಸ್ಥಾನಮಾನದಂತೆ ಮಿಕ್ಕುಳಿದ ಹುದ್ದೆಗಳಲ್ಲಿ ಮತ್ತು ಕಲ್ಯಾಣ ಕರ್ನಾಟಕದ ಪ್ರದೇಶದ ಮೀಸಲಾತಿಗೆ ಪೂರಕವಾಗಿ ಸರ್ಕಾರಿ ನೌಕರರಿಗಳಲ್ಲಿ ನ್ಯಾಯ ಒದಗಿಸುವ ಲಾಗುವುದು ಎಂದ ಅವರು ಈಗಾಗಲೇ ಮುಖ್ಯಮಂತ್ರಿ ಗಳು ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಿರುವಂತೆ ಕಾಲಮಿತಿಯಲ್ಲಿ ಭರ್ತಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಶರಣ ಪ್ರಕಾಶ್ ಪಾಟೀಲ್ ಮಾತ್ನಾಡಿ ಸಂವಿಧಾನದ 371ನೇ ಜೇ ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಸಹಸ್ರಾರು ಡಾಕ್ಟರ್ ಗಳು ಮತ್ತು ಇಂಜಿನಿಯರ್ ಗಳು ಒಂದನೇ ಎರಡನೆ ದರ್ಜೆ ಸೇರಿದಂತೆ ಸಿ.ಡಿ.ಗುಂಪಿನ ಸಹಸ್ರಾರು ಹುದ್ದೆಗಳಿಗೆ ನೇಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.371ನೇ ಜೇ ಕಲಂ ನೇಮಕಾತಿಗಳಲ್ಲಿ ಆಗಾಗ ಆಗುವ ಲೋಪಗಳ ಬಗ್ಗೆ ನಮ್ಮ ಪ್ರದೇಶದ ಹೋರಾಟಗಾರು ತಕ್ಷಣ ಎಚ್ಚೆತ್ತುಕೊಂಡು ನಮ್ಮ ಗಮನಕ್ಕೆ ತರುತ್ತಾರೆ ಈ ಬಗ್ಗೆ ತಾವು ಗಂಭೀರವಾಗಿ ಪರಿಗಣಿಸಿ ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಬಾರಿಗೆ 2024 ರಿಂದ ಮೈಸೂರು ದಸರಾ ಮಹೋತ್ಸವ ಮಾದರಿಯಲ್ಲಿ ಒಂಬತ್ತು ದಿನಗಳ ವೈಭವ ಪೂರ್ವಕವಾದ ದಸರಾ ಮಹೋತ್ಸವ ಸಿಂಧನೂರು ತಾಲೂಕಾ ಆಡಳಿತದ ವತಿಯಿಂದ ಅಧಿಕೃತವಾಗಿ ಹಮ್ಮಿಕೊಳ್ಳಲಾಗಿದೆ.ಈ ಅರ್ಥ ಪೂರ್ಣವಾದ ಸಾಮಾಜಿಕ ಸಾಮರಸ್ಯದ ಪ್ರತೀಕವಾದ ಉತ್ಸವದಲ್ಲಿ ರಾಯಚೂರು ಕೊಪ್ಪಳ ಜಿಲ್ಲೆಗಳ ಅಪಾರ ಜನಸ್ತೋಮ ಸೇರಿತ್ತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…