ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಋಣ ತೀರಿಸಲು ಬಂದಿರುವೆ; ರಾಜು ತಾಳಿಕೋಟೆ

ಸುರಪುರ: ಸತತ 82 ವರ್ಷಗಳಿಂದ ನಾಡಹಬ್ಬದ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುವ ಕನ್ನಡ ಸಾಹಿತ್ಯ ಸಂಘದ ಮುಖಂಡರು ನನಗೆ ಈ ಹಿಂದೆ ಅನೇಕ ಬಾರಿ ಕರೆದಿದ್ದಾರೆ,ಬರಲು ಸಾಧ್ಯವಾಗಿರಲಿಲ್ಲ,ಆದ್ದರಿಂದ ಆ ಋಣ ತೀರಿಸಲು ಇಂದು ಇಲ್ಲಿಗೆ ಬಂದಿರುವೆ ಎಂದು ಖ್ಯಾತ ಹಾಸ್ಯ ಕಲಾವಿದ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ ಮಾತನಾಡಿದರು.

ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ 82ನೇ ನಾಡ ಹಬ್ಬದ 4ನೇ ದಿನದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ,ಕನ್ನಡ ನಾಡು ನುಡಿ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದೆ.ನಾನು ಇಂದು ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ,ಆದರೆ ಈ ಸಂಘದ ಕಾರ್ಯಕ್ರಮ ನೋಡಲೆಂದೆ ಬಂದಿರುವೆ, ಒಬ್ಬ ಕಲಾವಿದನಿಗೆ ಮೊದಲು ಅವಮಾನ,ನಂತರ ಬಹುಮಾನ, ನಂತರ ಸನ್ಮಾನ ದೊರೆಯುತ್ತದೆ,ಅಂತಹ ಸನ್ಮಾನ ಇಲ್ಲಿ ದೊರೆತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

ನಾಡು ನುಡಿ ಸೇವೆ ಮಾಡುವವರಿಗೆ ಅನೇಕ ಅವಮಾನಗಳು ಬರುತ್ತವೆ,ಅದರಂತೆ ನಾನು ಖಾಸ್ಗತೇಶ್ವರ ನಾಟ್ಯ ಸಂಘ ಕಟ್ಟಿದಾಗ ಅದನ್ನು ಮುಂದುವರೆಸಲು ಅನೇಕ ಅವಮಾನಗಳನ್ನು ಸಹಿಸಿಕೊಂಡಿದ್ದೇನೆ ಎಂದು ನೆನೆಪಿಸಿಕೊಂಡರು.

ಇದೇ ಸಂದರ್ಭದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ರಾಜನಕೋಳೂರ ಶಿಕ್ಷಕ ಎಸ್.ಎಸ್.ಮಾರನಾಳ ಮಾತನಾಡಿ,ಬಸವಾದಿ ಶರಣರು ಕಾಯಕದ ಮೂಲಕ ಕೈಲಾಸ ಕಂಡವರಾಗಿದ್ದಾರೆ,ಶರಣರು ಬರೆದ ವಚನ ಸಾಹಿತ್ಯ ತುಂಬಾ ಅಮೂಲ್ಯವಾದುದಾಗಿದೆ,ವಚನಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕು,ಎಲ್ಲರು ಮಕ್ಕಳಿಗೆ ವಚನಗಳನ್ನು ತಿಳಿಸಿ ಸಂಸ್ಕಾರ ಕಲಿಸಬೇಕು ಎಂದರು.

12ನೇ ಶತಮಾನದಲ್ಲಿ ಶರಣರು ಮೊಟ್ಟ ಮೊದಲ ಅನುಭವ ಮಂಟಪವನ್ನು ಸ್ಥಾಪಿಸಿ ಜಗತ್ತಿಗೆ ಮೊದಲ ಸಂಸತ್ತನ್ನು ಪರಿಚಯಿಸಿದರು. ಆಯ್ದಕ್ಕಿ ಲಕ್ಕಮ್ಮ ತನ್ನ ಪತಿ ಮಾರಯ್ಯ ಹೆಚ್ಚಿನ ಅಕ್ಕಿ ತಂದರೆ ಅದನ್ನು ವಿರೋಧಿಸಿ ಆಸೆ ಎಂಬುದು ಅರಸನಿಗುಂಟು ಶಿವಭಕ್ತನಿಗುಂಟೆ ಅಯ್ಯಾ ಎಂದು ತಿಳಿಸಿದಳು ಇದು ಶರಣರ ನಿಜವಾದ ಗುಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪನೊಂದಣಾಧಿಕಾರಿ ಗುರುರಾಜ ಸಜ್ಜನ್ ಮಾತನಾಡಿ,ಕನ್ನಡ ಸಾಹಿತ್ಯ ಸಂಘ ಇಂತಹ ಕಾರ್ಯಕ್ರಮದ ಮೂಲಕ ಎಲ್ಲರಲ್ಲಿ ನಾಡು ನುಡಿಯ ಪ್ರೇಮ ಮೂಡಿಸುವ ಮೂಲಕ ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.ಇಂದು ನಮ್ಮ ನಾಡು ತಮ್ಮು ದೇಶದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಜವಬ್ದಾರಿ ಎಲ್ಲರ ಮೇಲಿದೆ,ಅಂತಹ ಮಹಾನ್ ಕಾರ್ಯವನ್ನು ಮಾಡುತ್ತಿರುವ ಸಂಘದ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ನನ್ನ ಪುಣ್ಯ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಭುವನೇಶ್ವರಿ ಹಾಗೂ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ದಿ.ಬುದ್ಧೀವಂತ ಶೆಟ್ಟರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿದ್ದ ರಾಜು ತಾಳಿಕೋಟೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಸುದೀಪ ಹಿ.ಪ್ರಾ.ಶಾಲೆ ಹಾಗೂ ಫಿನಿಕ್ಸ್ ಪ್ರಾಥಮಿಕ ಶಾಲೆ ಮಕ್ಕಳಿಂದ ಸಂಸ್ಕøತಿಕ ಕಾರ್ಯಕ್ರಮ ನಡೆಯಿತು.ಪದ್ಮಾಕ್ಷಿ ಶಹಾಪುರಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಅವರ ಪತಿ ಶಕೀಲ್ ಅಹ್ಮದ್, ಸಂಘದ ಅಧ್ಯಕ್ಷ ಸೂಗುರೇಶ ವಾರದ್ ಉಪಸ್ಥಿತರಿದ್ದರು.ಸಂಘದ ಎಲ್ಲಾ ಪದಾಧಿಕಾರಿಗಳು,ಮುಖಂಡರು ಹಾಗೂ ನೂರಾರು ಜನರು ಭಾಗವಹಿಸಿದ್ದರು.

emedialine

Recent Posts

ಅಂತರ್ ಜಿಲ್ಲಾ ಕುಖ್ಯಾತ ಮನೆಗಳ್ಳರ ಬಂಧನ: 14.70 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

ಶಹಾಬಾದ: ತಾಲೂಕಿನ ಮರತೂರ ಗ್ರಾಮದಲ್ಲಿನ ಅಬ್ದುಲ್ ರಜಾಕ್ ಬಾಗೋಡಿ ಅವರ ಮನೆಕಳ್ಳತನವಾಗಿರುವ ಬಗ್ಗೆ ದೂರಿನ್ವಯ ಜಾಡು ಹಿಡಿದ ಪೊಲೀಸರು ಇಬ್ಬರು…

2 hours ago

ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ

ಶಹಾಬಾದ: ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೆÇೀಕ್ರೂ) ನ್ಯಾಯಾಲಯವು ಅಪರಾಧಿಗೆ…

2 hours ago

ನಗರಸಭೆಯ ವಿವಿಧ ಕಾಮಗಾರಿಗಳ ಮಂಜೂರಾತಿಗೆ ಸದಸ್ಯರ ಒಪ್ಪಿಗೆ

ಶಹಾಬಾದ:sನಗರಸಭೆಯ ನೂತನ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಸಾಮನ್ಯ ಸಭೆ ನಡೆಯಿತು. ಸಭೆ…

2 hours ago

ಮನ್ನೂರ ಆಸ್ಪತ್ರೆ; ಬಡಜನರಿಗೆ ರಿಯಾಯಿತಿ ದರದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ನೀಡಲು ನಿರ್ಧಾರ

ಕಲಬುರಗಿ: ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ದೇಹ ದಂಡಿಸದೇ ಇರುವ ಕಾರಣದಿಂದ ಕ್ಯಾನ್ಸರ್ ರೋಗ…

3 hours ago

ದತ್ತಾತ್ರೇಯ ಪಾಟೀಲ್ ರೇವೂರ್ ಗೆ ಸನ್ಮಾನ

ಕಲಬುರಗಿ: ಬಿಜೆಪಿ ಮಹಾನಗರ ಜಿಲ್ಲೆಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಶಿವಲಿಂಗ ಪಾಟೀಲ್ ಸಾವಳಗಿ ಅವರನ್ನು ನೇಮಕ ಮಾಡಿದ ಕಾರಣೀಭೂತರಾದ ದಕ್ಷಿಣ…

3 hours ago

ಬಿಜೆಪಿ ಕಲಬುರಗಿ ಜಿಲ್ಲಾ ಒಬಿಸಿ ಮೋರ್ಚಾಕ್ಕೆ ಆಯ್ಕೆ

ಕಲಬುರಗಿ: ವಿಶ್ವ ಕರ್ಮಾ ಸಮಾಜ ವತಿಯಿಂದ ಬಿಜೆಪಿ ಮಹಾ ನಗರ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ದೇವೇಂದ್ರ ದೇಸಾಯಿ ಕಲ್ಲೂರ್…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420