ಶ್ರೀನಿವಾಸ ಸರಡಗಿ ಮಹಾಲಕ್ಷ್ಮೀ ಶಕ್ತಿ ಪೀಠದಲ್ಲಿ ಅ.12.ರಂದು 12ನೇ ದಸರಾ ದರ್ಬಾರ

ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಕ್ಷ್ಮೀ ಶಕ್ತಿ ಪೀಠದ 12ನೇ ದಸರಾ ದರ್ಬಾರದ ಪ್ರಯುಕ್ತ 2ನೇ ಮೈಸೂರು ಮಾದರಿಯಲ್ಲಿ ಜಂಬೂ ಸವಾರಿ ಭವ್ಯ ಮೆರವಣಿಗೆ ಹಾಗೂ ತುಲಾಭಾರ ಮತ್ತು ಭಾವೈಕ್ಯ ಧರ್ಮಸಭೆ ಅ. 12 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವವು.

ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಇವರ ಅಪ್ಪಣೆಯ ಮೇರೆಗೆ ಜರಗಲಿದೆ. 12. ರಂದು ವಿಜಯದಶಮಿ ಶನಿವಾರ ಬೆಳಗ್ಗೆ 6 ಗಂಟೆಗೆ ದೇವಿಯ ಮಹಾಭಿಷೇಕ ಮಹಾಅಲಂಕಾರ, ಮಹಾನೈವಿದ್ಯ ಮಧ್ಯಾಹ್ನ 12.30 ಗಂಟೆಗೆ ಜಂಬೂ ಸವಾರಿ ಭವ್ಯ ಮೆರವಣಿಗೆಯನ್ನು ಗ್ರಾಮೀಣ ವಿಭಾಗದ ಡಿ.ವಾಯ್.ಎಸ್.ಪಿ ಡಿ.ಜಿ.ರಾಜಣ್ಣ ಹಾಗೂ ವಿಶ್ವವಿದ್ಯಾಲಯ ಪೆÇಲೀಸ್ ಠಾಣೆಯ ಪೆÇಲೀಸ್ ಸರ್ಕಲ್ ಇನ್ಸಪೆಕ್ಟರ್ ಸುಶೀಲಕುಮಾರ ಉದ್ಘಾಟಿಸುವರು. ನಂತರ ಮೈಸೂರು ಮಾದರಿಯಲ್ಲಿ ಗ್ರಾಮದ ಪ್ರಮುಖ ರಾಜ ಬೀದಿಯಿಂದ ಶ್ರೀ ದೇವಿಯ ಶಕ್ತಿಪೀಠದವರೆಗೆ ಆನೆ ಅಂಬಾರಿ ಮೇಲೆ ಜಂಬೂ ಸವಾರಿ ಹಾಗೂ ಈ ನಾಡಿನ ಅನೇಕ ನುರಿತ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗುವುದು.

ಸಾಯಂಕಾಲ 5. 45 ಗಂಟೆಗೆ ಪರೇಡ್ ಕವಾಯತ್ ಮುಖಾಂತರ ಬನ್ನಿ ಮುಡಿಯುವ ಕಾರ್ಯಕ್ರಮ ಸಾಯಂಕಾಲ 6 ಗಂಟೆಗೆ ಭಾವೈಕ್ಯ ಧರ್ಮಸಭೆ ಜರುಗವುದು. ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಸುಕ್ಷೇತ್ರ ಶ್ರೀನಿವಾಸ ಸರಡಗಿ ಶ್ರೀ ಶಕ್ತಿಪೀಠದ ವತಿಯಿಂದ ಪ್ರಶಸ್ತಿ ಪ್ರದಾನದೊಂದಿಗೆ ಗೌರವಿಸಲಾಗುವದು. ಪೂಜ್ಯರಿಗೆ ತುಲಾಭಾರ ಸೇವೆ ಜರುಗುವುದು.

ಭಾವೈಕ್ಯ ಧರ್ಮಸಭೆ ಸಾ. 6 ಗಂಟೆಗೆ ಶ್ರೀ ಸರಡಗಿ ಅನ್ನಪೂರ್ಣೇಶ್ವರಿ ಬಸವಕಲ್ಯಾಣ ಸಂಸ್ಥಾನ ಮಕ್ಕಳಿಂದ ಹಾಗೂ ಶ್ರೀ ಸರಡಗಿ ಶಕ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ಕಲಬುರಗಿ ರೂಪಕ ಸಾಂಸ್ಕøತಿಕ ಕಾರ್ಯಕ್ರಮ ಮುಗಳನಾಗಾಂವ ಕಟ್ಟಮನಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಇವರು ಸಾನಿಧ್ಯ ವಹಿಸುವರು.

ಭರತನೂರ ವಿರಕ್ತಮಠದ ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯರು ಇವರು ಉಪಸ್ಥಿತಿ ಇರುವರು. ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.

ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸುವರು. ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ, ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ, ಸ.ನೌ.ಸಂಘದ ಅಧ್ಯಕ್ಷ ರಾಜು ಲೇಂಗಟಿ, ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ, ಉದ್ದಿಮೇದಾರ ಯುವರಾಜ ಚಿಂಚೋಳಿ, ಬಿಜೆಪಿ ಮುಖಂಡ ಪ್ರದೀಪ ವಾತಡೆ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಮಾಜಿ ತಾ.ಪಂ.ಅಧ್ಯಕ್ಷ ಸಂಗಮೇಶ ನಾಗನಳ್ಳಿ, ಆಹಾರಧಾನ್ಯ ಬೀಜ ವ್ಯಾಪಾರಿಗಳ ಅಧ್ಯಕ್ಷ ಸಂತೋಷ ಲಂಗಾರ, ಉದ್ದಿಮೇದಾರ ಸುನೀಲ ಪಾಟೀಲ, ಶ್ರೀನಿವಾಸ ಸರಡಗಿ ಗ್ರಾ.ಪಂ.ಅಧ್ಯಕ್ಷೆ ಅನುಸೂಬಾಯಿ ರಾಠೋಡ, ಉದ್ದಿಮೆದಾರರಾದ ದಿವ್ಯಾ ಹಾಗರಗಿ, ದಾಲ ಇಂಡಸ್ಟ್ರೀಜ್‍ನ್ ರವಿ ಪಾಟೀಲ ಸರಡಗಿ, ಮಾಜಿ ಎ.ಪಿ.ಎಂ.ಸಿ.ಅಧ್ಯಕ್ಷ ಶಾಂತಕುಮಾರ ಬಿರಾದಾರ, ಬಿಜೆಪಿ ಮುಖಂಡ ವಿನೋದ ಪಾಟೀಲ, ಕಾಂಗ್ರೇಸ್ ಮುಖಂಡ ಆನಂದ ಪಾಟೀಲ ಸೇರಿದಂತೆ ವಿವಿಧ ರಾಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮದ್ದು ಸುಡುವ ಕಾರ್ಯಕ್ರಮವನ್ನು ಸೋಲಾಪೂರ ಸದ್ಭಕ್ತರಿಂದ ಜರುಗುವುದು.

ಶ್ರೀ ದೇವಿಯ ಪವಿತ್ರ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗ್ರಾಮಸ್ಥರು, ಸಕಲ ಸದ್ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago