ಕಲಬುರಗಿ: ದಾಂಡಿಯಾ ನೃತ್ಯದ ರೋಮಾಂಚಕ ಮತ್ತು ಲಯಬದ್ಧವಾದ ಬೀಟ್‌ಗಳು ಶತಮಾನಗಳಿಂದ ಪಶ್ಚಿಮ ಭಾರತದಲ್ಲಿ ಲಕ್ಷಾಂತರ ಜನರ ಹೃದಯವನ್ನು ಸೂರೆಗೊಂಡಿವೆ. ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಈ ಶಕ್ತಿಯುತ ಜಾನಪದ ನೃತ್ಯ ರೂಪವು ಗುಜರಾತ್ ಮತ್ತು ರಾಜಸ್ಥಾನದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ ಎಂದು ಶ್ರೀಮತಿ ಪೂರ್ಣಿಮಾ ಶಶೀಲ್ ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ದಾಂಡಿಯಾ ಗಾರ್ಭ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಜಗತ್ತಿನಲ್ಲೆ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಹೊಂದಿದ್ದು ಅದಕ್ಕಾಗಿಯೆ ಭಾರತವನ್ನು ವಿಶ್ವ ಗುರು ಸ್ಥಾನದಲ್ಲಿ ಕಾಣುತ್ತೇವೆ. ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಸಾಂಸ್ಕೃತಿಕ ಆಚರಣೆಗಳು ವಿವಿಧ ವೇಷ ಭೂಷಣಗಳಿದ್ದರು ಆದರೆ ನಾವೆಲ್ಲರೂ ಒಂದೇ ಎನ್ನುವ ಭಾವನೆ ಇದೆ. ನಮ್ಮ ರಾಜ್ಯದ ಮೈಸೂರು ದಸರಾ ವೈಭವ ವಿಶ್ವದಾದ್ಯಂತ ಮನ್ನಣೆಗೊಳಿಸಿ ನಮ್ಮ ರಾಜ್ಯದ ಸಂಸ್ಕೃತಿಯನ್ನು ಶ್ರೀಮಂತಗೊಳಿದೆ ಎಂದು ಹೇಳಿದರು.
ನವರಾತ್ರಿಯನ್ನು ನವದುರ್ಗೆಯರ ಹೆಸರಿನಲ್ಲಿ ನಾವು ಆರಾಧಿಸುವ ಸಂಸ್ಕೃತಿ ಪವಿತ್ರತೆಯ ಸಂಕೇತವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಈ ಎಲ್ಲ ಆಚರಣೆಗಳು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತವೆ.
ಇಂದು ದಾಂಡಿಯಾ ಗಾರ್ಭ ಕೇವಲ ರಾಜಸ್ಥಾನ, ಗುಜರಾತ್ ಮಾತ್ರ ಸೀಮಿತವಾಗಿರದೆ ದೇಶದ ಎಲ್ಲ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದ ನೃತವಾಗಿದೆ. ಇಂತಹ ನೃತ್ಯ ಪ್ರದರ್ಶನ ಮುಂದಿನ ಜನಾಂಗಕ್ಕೂ ಉಳಿಯಬೇಕು ಎಂಬುದು ನನ್ನ ಅಭಿಪ್ರಾಯ ಇಂತಹ ಶ್ರೀಮಂತ ಸಾಂಸ್ಕೃತಿಕ ದಾಂಡಿಯಾ ನೃತ್ಯವನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವದು ಅಭಿನಾಂದರ್ಹವಾಗಿದೆ.ಎಂದು ಹೇಳಿದರು.
ನಂತರ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಪುಷ್ಪ ಚಿಂಚೋಳಿ, ಡಾ ಇಂದಿರಾ ಶಕ್ತಿ ಲೋಯಾ ಮಾತನಾಡಿದರು.
ನಂತರ ಶ್ರೀಮತಿ ಪೂರ್ಣಿಮಾ ನಮೋಶಿ ಅವರ ನೇತೃತ್ವದಲ್ಲಿ ದಾಂಡಿಯಾ ನೃತ್ಯವನ್ನು ಮಾಡಲಾಯಿತು, ನಂತರ ಕಾಲೇಜಿನ ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಸಖತ್ ಸ್ಟೆಪ್ ಹಾಕಿ ಗಾರ್ಭಾ ನೃತ್ಯ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ ರೋಹಿಣಿ ಕುಮಾರ್ ಹಿಳ್ಳಿ ವಹಿಸಿದ್ದರು. ವೇದಿಕೆಯ ಮೇಲೆ ಶ್ರೀಮತಿ ರೇಣುಕಾ ರಾಂಪೂರೆ, ಶ್ರೀಮತಿ ಶಿವಲೀಲಾ ಮರಗೋಳ, ಶ್ರೀಮತಿ ಜ್ಯೋತಿ ಘಂಟಿ,ಪ ಪೂ ಕಾಲೇಜಿನ ಪ್ರಾಚಾರ್ಯ ಶ್ರೀಮತಿ ಶಿಲ್ಪಾ ಅಲ್ಲದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿರೂಪಣೆ ಡಾ ಮೈತ್ರಾದೇವಿ ಹಳಿಮನಿ, ಡಾ ರೂಪಾಲಿ ಭೀಮಳ್ಳಿ ಸುಮಂಗಲಾ ಪಾಟೀಲ್ ಪ್ರಾರ್ಥನೆ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಪ್ರಿಯಾಂಕಾ,ಮೇಘಾರಾಣಿ ನಡೆಸಿಕೊಟ್ಟರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…