ಆಳಂದ: ಪಟ್ಟಣದಲ್ಲಿ ನವರಾತ್ರಿ ದಸರಾ ಹಬ್ಬದ ಉತ್ಸವವು ಕಳೆಕಟ್ಟಿದೆ. ವಿವಿಧ ವಾರ್ಡ್ ಗಳಲ್ಲಿ ನವರಾತ್ರಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ, ಸಂಜೆ ಪೂಜೆ ಮತ್ತಿತರ ಧಾರ್ಮಿಕ ಕೈಂಕರ್ಯಗಳು ವಿಶೇಷವಾಗಿ ಸಾಗಿವೆ.
ಪಟ್ಟಣದ ಚಕ್ರಿಕಟ್ನಾ ನವರಾತ್ರಿ ಉತ್ಸವಕ್ಕೆ ಈ ಬಾರಿ ೪೭ನೇ ವರ್ಷದ ಸಂಭ್ರಮವಾಗಿದೆ. ಪ್ರತಿ ವರ್ಷವೂ ವಿವಿಧ ಮಾದರಿಯಲ್ಲಿ ದೇವಿಯ ಮೂರ್ತಿ ಹಾಗೂ ಸುತ್ತಲಿನ ಮಂಟಪವು ಖ್ಯಾತ ದೇವಾಲಯಗಳ ಮಾದರಿಯಲ್ಲಿ ನಿರ್ಮಿಸುವದು ಇಲ್ಲಿಯ ವಿಶೇಷ, ಈ ಬಾರಿ ಪುಣೆಯ ಭವಾನಿಮಂದಿರ ಮಾದರಿಯಲ್ಲಿ ಅಲಂಕಾರ ಮಂಟಪ ಸಿದ್ಧಗೊಳಿಸಲಾಗಿದೆ. ಪ್ರತಿದಿನ ಇಲ್ಲಿಯ ಪೂಜೆಗೆ ಪಟ್ಟಣದ ಮಹಿಳೆಯರು ಆಮಿಸುವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಮಕ್ಕಳ ಆಟಿಕೆ ಸಾಮಗ್ರಿಗಳು ಅಲ್ಲಿಲ್ಲಿ ಬಂದವೆ, ಮನರಂಜನೆಯ ಕುದರೆ ಸವಾರಿ, ಕುಣಿತ, ಆಟವು ಮನ ಸೆಳೆಯುತ್ತಿವೆ.
ಪಟ್ಟಣದ ಸುಲ್ತಾನಪುರ ಗಲ್ಲಿ, ಹನುಮಾನ ಮಂದಿರ, ಶರಣನಗರ, ಶರಣಮಂಟಪ, ಬಾಳೇನಗಲ್ಲಿ, ರೇವಣಸಿದ್ಧೇಶ್ವರ ಕಾಲೋನಿ, ಮಾರ್ಕೇಂಡೇಶ್ವರ ದೇವಸ್ಥಾನ, ಭವಾನಿ ಮಂದಿರ, ಶಕ್ತಿ ಮಂದಿರ, ಹೊಸ ಬಾಳೇನಗಲ್ಲಿ, ರಾಮಮಂದಿರದಲ್ಲಿ ನವರಾತ್ರಿ ದೇವಿ ಪ್ರತಿಷ್ಠಾನ ಮಾಡಲಾಗಿದೆ.
ಪಟ್ಟಣದ ಗಣೇಶ ಚೌಕ್ ದಿಂದ ಸುಲ್ತಾನಪುರ ಗಲ್ಲಿಯ ಮುಖ್ಯರಸ್ತೆವರೆಗೂ ರಾತ್ರಿ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ. ಒಂಬತ್ತು ದಿನಗಳೂ ವಿಶೇಷ ದೇವಿಯ ಅಲಂಕಾರ, ಪೂಜೆ, ಭಜನೆ ಹಾಗೂ ಪುಸಾದ ವಿತರಣೆಯು ನಡೆದಿದೆ. ಪಟ್ಟಣದ ವಿವಿಧೆಡೆಯಿಂದ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಳುವದು ನಡೆದಿದೆ. ಸಂಜೆಯಾಗುತ್ತಲೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ದೇವಿ ಮಂಟಪದ ಮುಂದೆ ಕೋಲಾಟ, ಮಕ್ಕಳಿಗಾಗಿ ವಿವಿಧ ಗಾಯನ, ರಂಗೋಲಿ ಸ್ಪರ್ಧೆಯು ದಸರಾ ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ. ನೆರೆಯ ಮಹಾರಾಷ್ಟ್ರ ತುಳಜಾಪುರವು ಸಮೀಪವಾಗಿರುವ ಕಾರಣದಿಂದ ಪಟ್ಟಣದಲ್ಲಿ ನವರಾತ್ರಿ ಉತ್ಸವವು ಜೋರಾಗಿ ನಡೆಯುತ್ತಿದೆ. ರಾಯಚೂರು, ಕಲಬುರಗಿ ಜಿಲ್ಲೆಯ ದೂರದ ಭಕ್ತರು ಸಹ ಈಗಾಗಲೇ ತುಳಜಾಪುರಕ್ಕೆ ಕಾಲ್ನಡಿಗೆ ಮೂಲಕ ತೆರಳುವ ಭಕ್ತರ ಸಂಖ್ಯೆಯು ಹೆಚ್ಚಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…