ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ತಲಾ ಇಬ್ಬರು ವಿದ್ಯಾರ್ಥಿಗಳು, ಐಒಟಿ ಆಧಾರಿತ ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆ, ಜಿಪಿಎಸ್ ಸ್ಥಳ ಹಾಗೂ ಮಾನಿಟರಿಂಗ್ ಸಿಸ್ಟಮ್‍ನ ವಿನೂತನ ಯೋಜನೆಯು ಅಭಿವೃದ್ಧಿಪಡಿಸಿದ್ದಾರೆ.
ಈ ಯೋಜನೆಯು ಪ್ರಾಜೆಕ್ಟ್ ಅಭಿವೃದ್ಧಿ ಮತ್ತು ಪ್ರಾಜೆಕ್ಟ್ ಪ್ರದರ್ಶನಕ್ಕಾಗಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಆರು ಯೋಜನೆಗಳಲ್ಲಿ ಒಂದಾಗಿದೆ. ನವೆಂಬರ್ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಠಿತ 5ನೇ IEEE ಇಂಟನ್ರ್ಯಾಷನಲ್-WINTECHON 2024 ರಲ್ಲಿ ಪ್ರದರ್ಶನ ಮಾಡಲಾಗುವುದು.
ಕಲಬುರಗಿ ನಗರದಲ್ಲಿ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಶರಣಬಸವ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕಿ ಡಾ. ಆಶಾರಾಣಿ ಪಾಟೀಲ, ಏಳನೇ ಸೆಮಿಸ್ಟರ್‍ನಲ್ಲಿರುವ ನಿದಾ ಮುಸ್ಕಾನ್ ಮತ್ತು ವೈಷ್ಣವಿ ಅವರು ಯೋಜನೆಯನ್ನು ಪರಿಪೂರ್ಣವಾಗಿ ರೂಪಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಶರಣಬಸವ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಪಿಯು ಕಾಲೇಜಿನ ಕೀರ್ತಿ ಸುಭಾμï ಮತ್ತು ಅನ್ನಪೂರ್ಣ ಜಮಾದಾರ್ ಅವರು ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯವಿರುವ ಭದ್ರತೆಯನ್ನು ಒದಗಿಸುವ ಯೋಜನೆಯನ್ನು ಕಾನ್ಫಿಗರ್ ಮಾಡಿದ್ದಾರೆ.
ಕಲಬುರಗಿಯ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರಾಜೆಕ್ಟ್ ಇಡೀ ಉತ್ತರ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಯೋಜನೆಯಾಗಿದೆ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದ ಉಳಿದ ಐದು ಯೋಜನೆಗಳು ದಕ್ಷಿಣ, ಮಧ್ಯ ಮತ್ತು ಕರಾವಳಿ ಕರ್ನಾಟಕ ಭಾಗಗಳಿಂದ ಆಯ್ಕೆಯಾಗಿವೆ ಎಂದು ಡಾ. ಪಾಟೀಲ ಹೇಳಿದರು.
IEEE ಬೆಂಗಳೂರು ಮತ್ತುIEEEಸಿಎಎಸ್ ಬೆಂಗಳೂರು, IEEE WIE ಬೆಂಗಳೂರು ಸಹಯೋಗದಲ್ಲಿ Arduino ಆಧಾರಿತ ಎಂಬೆಡೆಡ್ ಸಿಸ್ಟಮ್ ಪ್ರಾಜೆಕ್ಟ್‍ನ ಅಭಿವೃದ್ಧಿಗಾಗಿ ವಿವಿಧ ಘಟಕಗಳು ಮತ್ತು ಕಿಟ್‍ಗಳನ್ನು ಸಮಾಜದ ಕಲ್ಯಾಣ ಯೋಜನೆಗಾಗಿ ಹಾಗೂ ಮಹಿಳೆಯರು ಮತ್ತು ಮಕ್ಕಳಿಗಾಗಿ ಒದಗಿಸಿದೆ. ಈ ಸಂಸ್ಥೆಗಳು ಒದಗಿಸಿದ ಕಿಟ್‍ನಲ್ಲಿ UNO R3 ATmega328p ಬೋರ್ಡ,Arduino L293D ಮೋಟಾರ್ ಡ್ರೈವ್ ಶೀಲ್ಡ್, ಆಅ ಅಡಾಪ್ಟರ್, ಡಿಜಿಟಲ್ ಮಲ್ಟಿಮೀಟರ್, ಪ್ರೋಫೆಷನಕಲ್ ಸ್ಟಾರ್ಟರ್ ಕಿಟ್,UNO ಸಂವೇದಕಗಳು ಮತ್ತು ಮಾಡ್ಯೂಲ್‍ಗಳು, ಸ್ಕೀಮ್ಯಾಟಿಕ್ ಆಧಾರಿತ ಕೋಡ್ ಮತ್ತು ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಎಲ್ಲಾ ರೀತಿಯ ಪರಿಕರಗಳು ಸೇರಿವೆ.
IEEE ಬೆಂಗಳೂರು ವಿಭಾಗ,IEEE CAS ಬೆಂಗಳೂರು ಚಾಪ್ಟರ್, WIE-ವಿಮೆನ್ ಇನ್ ಇಂಜಿನಿಯರಿಂಗ್ ಅಫಿನಿಟಿ ಗ್ರೂಪ್ ಬೆಂಗಳೂರು ವಿಭಾಗದಿಂದ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಆಶಾರಾಣಿ ಪಾಟೀಲ್ ಹೇಳಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…