87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ

ಕಮಲಾಪುರ: ಕನ್ನಡ ನಾಡು ನುಡಿಯ ಊಳಿಸಿ ಬೆಳೆಸಲು ಎಲ್ಲರೂ ಶ್ರಮಿಸೋಣ, ಕನ್ನಡ ಭಾಷೆ ನಮ್ಮೆಲ್ಲರಿಗೂ ಅನ್ನದ ಭಾಷೆಯಾಗಿದೆ, ಸಕ್ಕರೆ4 ನಾಡು ಎಂಬ ಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಕಮಲಾಪುರ ತಹಸಿಲ್ದಾರ್ ಮಹಮ್ಮದ್ ಮೋಹ ಸಿನ್ ಹಾರೈಸಿದರು.

ಶುಕ್ರವಾರ ಕಮಲಾಪುರ ತಾಲೂಕು ಆಡಳಿತ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕಮಲಾಪುರ ವತಿಯಿಂದ ಹಮ್ಮಿಕೊಂಡ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದವರು ಕನ್ನಡ ಭಾಷೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ಕನ್ನಡ ನಾಡು ತನ್ನದೇ ಆದ ವಿಶೇಷ ಪರಂಪರೆಯನ್ನು ಹೊಂದಿರುವಂಥದ್ದು. ಈ ನಾಡಿನ ಪರಂಪರೆಯನ್ನು ಬಿಂಬಿಸುವ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲು ಆಗಮಿಸಿದ ಎಲ್ಲರಿಗೂ ನಾನು ಚಿರಋಣಿ ಎಂದರು.

ತಾಲ್ಲೂಕಿನ ಕಗ್ಗನಮಡಿ ಕ್ರಾಸ್ ಬಳಿ ಕಲಬುರ್ಗಿ ಗ್ರೇಡ್ 2 ತಹಶೀಲ್ದಾರ ಗಂಗಾಧರ ಪಾಟೀಲ ಅವರು ಕಮಲಾಪುರ ತಹಶೀಲ್ದಾರ ಮಹಮದ್ ಮೋಹಸಿನ್ ಅವರಿಗೆ ರಥಯಾತ್ರೆ ಹಸ್ತಾಂತರಿಸಿದಾಗ ರಥಯಾತ್ರೆಗೆ ಹೂಮಾಲೆ ಹಾಕಿ ವಿವಿಧ ಜಯಘೋಶಗಳನ್ನು ಕೂಗಿ ಸ್ವಾಗತಿಸಲಾಯಿತು.

ತದನಂತರ ಸಿರಗಾಪುರ ಕ್ರಾಸ್ , ತಾಲೂಕಿನ ಮಹಾಗಂವ ಕ್ರಾಸ್ ಮತ್ತು ಕಮಲಾಪುರದ ಬಳಿ ವಿವಿಧ ಕನ್ನಡ ಗೀತೆಗಳಿಗೆ ಕನ್ನಡ ಪ್ರೇಮಿಗಳು ಕುಣಿದು ಕುಪ್ಪಳಿಸಿ ಜಯಾಘೋಷ್ ಕೂಗಿ ಮೆರವಣಿಗೆಗೆ ಕಳೆ ತಂದರು.

ಬಳಿಕ ಕಮಲಾಪುರ, ಮರಾಗುತ್ತಿ ಕ್ರಾಸ್, ಕಿಣ್ಣಿಸಡಕ್ ಗಡಿ ಬಳಿ ತೆರಳಿ ಹುಮನಾಬಾದ ತಹಶೀಲ್ದಾರ ಅಂಜುಮ್ ಟಾಬಸುಮ್ ಅವರಿಗೆ ರಥಯಾತ್ರೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಹಾಗಾಂವ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು, ವೀರಶೈವ ಲಿಂಗಾಯತ ಮುಖಂಡ ರವಿ ಬಿರಾದರ್ ಕಮಲಾಪುರ ತಾಸಿಲ್ದಾರ್ ಮಹಮದ್ ಮೋಹಸಿನ್ ತಾಲೂಕು ಪಂಚಾಯಿತಿ ಓ ನೀಲಗಂಗಾ ಬಬಲಾದ್ , ಗ್ರೇಡ್ 2 ತಹಶೀಲ್ದಾರ ಶಿವಕುಮಾರ ಶಾಬಾ, ಕಮಲಾಪುರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಶಾಂತಪ್ಪ ಹಾದಿಮನಿ, ಕಮಲಾಪುರ್ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಲೆಂಗಟಿ , ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ, ಸರಕಾರಿ ನೌಕರರ ತಾಲೂಕು ಅಧ್ಯಕ್ಷ ಮಿಟ್ಟೆಸಾಬ್ ಮುಲ್ಲಾ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪರಮೇಶ್ವರ ಓಕಳಿ, ಮಜರ ಅಲಿ ದರ್ಜಿ, ಮೆಹಬೂಬ್ ಸಾಬ್ ಮಾದಕ, ತಿಪ್ಪಣ್ಣ, ಸಂತೋಶ್ ರಾಂಪೂರ, ಜಯ ಕರ್ನಾಟಕ ಸಂಘಟನೆಯ ತಾಲುಕು ಅಧ್ಯಕ್ಷ ಆಕಾಶ ಜಾಲಳ್ಳಿ, ನಟರಾಜ್ ಕಲ್ಯಾಣ, ಚನವೀರ್ ಹಿರೇಮಠ್, ಶರಣಬಸಪ್ಪ ಜಾಲಳ್ಳಿ, ರಘುನಂದನ್ ದ್ಯಾಮನಿ, ಮಂಜುನಾಥ ಬಿರಾದಾರ್, ಲಕ್ಷ್ಮೀಕಾಂತ್ ಶಿರೋಳ್ಳಿ, ಸುಹಾಸಿನಿ ಹಾಲು, ಜಯಪ್ರಕಾಶ್ ಹಣಕುನಿ, ಅಂದಪ್ಪ, ಅವಿನಾಶ್, ಭೀಮಶಾ,ಸಿದ್ಧಲಿಂಗ ದಿಘಾವ, ಶಿವಪ್ಪ ಚಿಂಚೋಳಿ , ಶರಣಪ್ಪಾ ಗೊಬ್ಬುರ ವಾಡಿ, ಶರಣಪ್ಪಾ ನಾಟಿಕಾರ ಇತರರು ಇದ್ದರು.

ಭರ್ಜರಿ ಸ್ಟೆಪ್ಸ್: ತಾಲ್ಲೂಕಿನ ಮಹಾಗಾಂವ ಕ್ರಾಸ್ ಮತ್ತು ಮತ್ತು ಕಮಲಾಪುರದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮುಖಂಡ ರವಿ ಬಿರಾದರ್, ತಹಶೀಲ್ದಾರ ಮಹಮದ್ ಮೋ ಹಸಿನ್, ಕಸಾಪ ತಾಲ್ಲೂಕು ಅಧ್ಯಕ್ಷ ಸುರೇಶ ಲೆಂಗಟಿ ನೇತೃತ್ವದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕರುನಾಡೇ ಕೈ ಬೀಸಿ ನೋಡೇ, ಜೀವ ಕನ್ನಡ , ಬಾಳು ಕನ್ನಡ ವಿವಿಧ ಗೀತೆಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಮೆರವಣಿಗೆಗೆ ಶೋಭೆ ತಂದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago