ವೃತ್ತಿಪರ ಮಹಿಳಾ ಹಾಸ್ಟೆಲ್ ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ‌ ಭೇಟಿ

ಕಲಬುರಗಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ರವಿವಾರ ಸಂಜೆ ಗುಲಬರ್ಗಾ ವಿ.ವಿ. ಅವರಣದಲ್ಲಿರುವ ವೃತ್ತಿಪರ ಮಹಿಳಾ ಹಾಸ್ಟೆಲ್ ಗೆ ಭೇಟಿ ನೀಡಿ ಎರಡ್ಮೂರು ಗಂಟೆಗಳ ಕಾಲ ನಿಲಯಾರ್ಥಿಗಳೊಂದಿಗೆ ಸಂವಾದ ನಡೆಸಿದಲ್ಲದೆ ಅವರ ಅಹವಾಲುಗಳನ್ನು ಆಲಿಸಿದರು.

ಊಟ ಸರಿಯಾಗಿ ನೀಡುತ್ತಿಲ್ಲ, ಬೇರೆ ಕಡೆ ಊಟ ಸಿದ್ಧಪಡಿಸಿ ಇಲ್ಲಿಗೆ ತಂದು ಪೂರೈಸಲಾಗುತ್ತಿದೆ. ವಸತಿ ನಿಲಯದಲ್ಲಿ ಕರೆಂಟ್, ಫ್ಯಾನ್ ಸೇರಿದಂತೆ ಮೂಲಸೌಕರ್ಯ ಕೊರತೆ ಇದೆ ಎಂದು ವಿದ್ಯಾರ್ಥಿನಿಯರು ಅಧ್ಯಕ್ಷರ‌ ಗಮನಕ್ಕೆ ತಂದರು. ನಾಲ್ಕು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದಾದ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು ಇದೂವರೆಗೆ ಕ್ರಮ‌ ಕೈಗೊಳ್ಳದಿರುವುದಕ್ಕೆ ವಾರ್ಡನ್ ಮತ್ತು ವಿ.ವಿ‌ ಆಡಳಿತದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸುತ್ತಾ ವಿ.ವಿ. ರಿಜಿಸ್ಟ್ರಾರ್ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷರು ಸೂಚನೆ ನೀಡಿದರು.

ಸ್ಥಳದಲ್ಲಿದ್ದ ವಾರ್ಡನ್ ಅವರು ಹಿಂದೆ ತಾವು ಭೇಟಿ ಸಂದರ್ಭದಲ್ಲಿ ನೀಡಿರುವ‌ ನಿರ್ದೇಶನದಂತೆ ಅಡುಗೆ ಕೋಣೆಗೆ ಸುಣ್ಣ ಬಣ್ಣ ಮಾಡಿದ್ದು, ವಸತಿ ನಿಲಯದ ಹಲವು ಕಡೆ ಡಸ್ಡ್ ಬಿನ್ ಇಡಲಾಗಿದ್ದು, ಕೆಲವು ಸುಧಾರಣಾ ಕ್ರಮಗಳು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರ‌ ಗಮನಕ್ಕೆ ತಂದರು.

ನಂತರ ವಿ.ವಿ. ಅವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯಕ್ಕೂ ಭೇಟಿ ನೀಡಿದ ಡಾ.ನಾಗಲಕ್ಷ್ಮೀ ಚೌಧರಿ ಅವರು ಅಲ್ಲಿರುವ ವಿದ್ಯಾರ್ಥಿಗಳ ಕುಂದುಕೊರತೆಗೆ ಕಿವಿಯಾದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಕಲಬುರಗಿ ನಗರ ಸಿ.ಡಿ.ಪಿ.ಓ ಭೀಮರಾಯ ಕಣ್ಣೂರು, ಇದ್ದರು.

ವೃದ್ದಾಶ್ರಮಕ್ಕೆ ಭೇಟಿ: ಇದಕ್ಕು ಮುನ್ನ ಅಧ್ಯಕ್ಷೆ ಡಾ. ನಾಗಲಕ್ಣ್ಮೀ ಚೌಧರಿ ಅವರು ಕಲಬುರಗಿ ನಗರದ ಅಳಂದ‌ ರಸ್ತೆಯ ರಾಣಸ್ಪೀರ್ ದರ್ಗಾ ರಸ್ತೆಯಲ್ಲಿರುವ ಮಾರ್ಗದರ್ಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ನೆಮ್ಮದಿ ಹಿರಿಯರ ಮನೆ (ವ್ರದ್ದಾಶ್ರಮ)ಕ್ಕೆ‌ ಭೇಟಿ ನೀಡಿ ಹಿರಿಯ ಜೀವಿಗಳ ಆರೋಗ್ಯ ಕ್ಷೇಮ ವಿಚಾರಿಸಿದಲ್ಲದೆ ಅವರೊಂದಿಗೆ ಕೇಕ್‌ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಅಲ್ಲದೆ ಹಿರಿಯರೊಂದಿಗೆ ಸೇರಿ ಊಟ ಸಹ ಮಾಡಿದರು.

ಸಂಸ್ಥೆಯ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ನಾಗಲಕ್ಷ್ಮೀ ಚೌಧರಿ ಅವರು, ಸಂಸ್ಥೆಗೆ ಸರ್ಕಾರದಿಂದ‌ ನೆರವು ನೀಡಲು ಕ್ರಮ ವಹಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಮಾರ್ಗದರ್ಶಿ ಸಂಸ್ಥೆಯ ಕಾರ್ಯದರ್ಶಿ ಆನಂದರಾಜ, ವ್ರದ್ದಾಶ್ರಮದ ಅಧೀಕ್ಷಕಿ ಬಸಮ್ಮ ಸ್ವಾಮಿ ಅಲ್ಲದೆ ಪರಮೇಶ ಅಲಗೂಡ, ಪ್ರಕಾಶ್ ಖಾತ್ರಿ, ಯುವರಾಜ್ ಜಾಗಿರದಾರ್, ಶಿವರಾಜ್ ಪೂಜಾರಿ, ಶರಣು ಬೇಲೂರ, ಸತೀಶ್ ಪೂಜಾರಿ, ಯಲಗೊಂಡ ಹಿರೆಕುರುಬರ ಹಾಗೂ ಮತ್ತಿತರು ಈ ಸಂದರ್ಭದಲ್ಲಿ ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago