ದಲಿತ ಚಳವಳಿ ಪುನರುತ್ಥಾನ, ಸವಾಲು ಅವಲೋಕನ ಸಭೆ

ಕಲಬುರಗಿ: ದಲಿತರಿಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು. ಅದನ್ನು ವ್ಯವಸ್ಥಿತವಾಗಿ ತಪ್ಪಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಆರೋಪಿಸಿದರು.

ಕಲಬುರಗಿ ನಗರದ ಐವಾನ್ ಇ ಶಾಹಿಯಲ್ಲಿ ದಲಿತ ಚಳವಳಿ ಪುನರುತ್ಥಾನ, ಮುಂದಿನ ಸವಾಲುಗಳು, ಅವಲೋಕನ ಮತ್ತು ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಕರ್ನಾಟಕದಲ್ಲಿ ದಲಿತರು ಸಿಎಂ ಆಗಿಲ್ಲ. ದಲಿತರು ಅಳುವವರಾಗಬೇಕು ಎನ್ನುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕಿದೆ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. ದಲಿತ ಸಿಎಂ ಕೂಗು ಬಲಗೊಳ್ಳಬೇಕು’ ಎಂದರು.

ದಲಿತರಿಗೆ ಅವರದೇ ಆದ ಪಕ್ಷವಿಲ್ಲ. ಆದ ಕಾರಣ ಕಾಂಗ್ರೆಸ್ ಅನಿವಾರ್ಯ. ಈಗ ರಾಜ್ಯದಲ್ಲಿ ದಲಿತರಿಗೆ ಸಿಎಂ ಆಗುವ ಅವಕಾಶ ಇದೆ. ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ದಲಿತರಿದ್ದಾರೆ. ಅದರಲ್ಲಿ ಶೇ 90ರಷ್ಟು ಜನ ಅಸ್ಪೃಶ್ಯ ಜಾತಿಗಳಿಗೆ ಸೇರಿದವರಾಗಿದ್ದಾರೆ. ನಮ್ಮ ಪಾಲಿನ ಹಕ್ಕು ಕೇಳಬೇಕು’ ಎಂದರು. ದಲಿತರು ಆರ್‍ಎಸ್‍ಎಸ್‍ನ್ ಗುಪ್ತ ಕಾರ್ಯಸೂಚಿ ಜಾಗೃತರಾಗಬೇಕು’ ಎಂದು ಹೇಳಿದರು.

ರಾಜ್ಯ ಸಂಘಟನಾ ಸಂಚಾಲಕ ವಿಜಯ ನರಸಿಂಹ ಮಾತನಾಡಿ, ‘ಸಂಘ ಪರಿವಾರ ದೇಶದಲ್ಲಿ ಸಂಘಟನೆಗಳನ್ನು ಹುಟ್ಟು ಹಾಕಿ ಅಂಬೇಡ್ಕರ್ ಅವರ ವಿಚಾರಗಳನ್ನು ಅಳಿಸಿ ಹಾಕುವ ಹುನ್ನಾರ ಮಾಡುತ್ತಿದೆ. ಶೋಷಿತರು ಒಂದಾಗದಿದ್ದರೆ ಉಳಿಗಾಲವಿಲ್ಲ. ‘ತುಳಿತಕ್ಕೊಳಗಾದ ಸಮುದಾಯ ಗಳನ್ನು ಜಾಗೃತಗೊಳಿಸುವಲ್ಲಿ ದಲಿತ ಸಂಘರ್ಷ ಸಮಿತಿ ಪಾತ್ರ ದೊಡ್ಡದು’ ಎಂದು ಹೇಳಿದರು.

ರಾಜ್ಯ ಸಂಘಟನಾ ಸಂಚಾಲಕ ಭೀಮಜ್ಯೋತಿ ಶ್ರೀನಿವಾಸ, ಬೇಗೂರು ಮುನಿರಾಜು, ಎಚ್.ವಿ.ವೆಂಕಟೇಶ, ಷಣ್ಮುಖಪ್ಪ ಘಂಟೆ, ಸುರೇಶ ಮಂಗನ್, ಭರತ ಧನ್ನಾ, ಶಿವಕುಮಾರ ಅಜಾದಪುರ, ಬಸವರಾಜ ಅಷ್ಟಗಿ, ಭೀಮಶಾ ಖನ್ನಾ, ದವಲಪ್ಪ ಮದನ, ಭಾಗಪ್ಪ ಕೋಳಕೂರ, ಮಡಿವಾಳಪ್ಪ ಮಲ್ಲಾಬಾದಿ, ಯಲ್ಲಾಲಿಂಗ ದೊಡ್ಡಮನಿ ಸೇರಿ ಹಲವರು ಭಾಗವಹಿಸಿದ್ದರು.

ದಸಂಸಗೆ ಪದಾಧಿಕಾರಿಗಳ ಆಯ್ಕೆ; ದಲಿತ ಸಂಘರ್ಷ ಸಮಿತಿಯ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ದಸಂಸ ಜಿಲ್ಲಾ ಸಮಿತಿ: ಭೀಮಶಾ ಖನ್ನಾ, ದವಲಪ್ಪ, ವಿಜಯಕುಮಾರ ಟೈಗರ್ (ಸಂಘಟನಾ ಸಂಚಾಲಕರು), ದಸಂಸ ನಗರ ಘಟಕ: ಅಭಿಷೇಕ ಉಪಾಧ್ಯಾಯ, ಅರುಣಕುಮಾರ ಇನಾಂದಾರ, ಗೌತಮ ಉಪಾಧ್ಯಾಯ (ಸಂಘಟನಾ ಸಂಚಾಲಕರು), ಅಂಬಾರಾಯ ದರ್ಗಿ (ಖಜಾಂಚಿ), ದಲಿತ ವಿದ್ಯಾರ್ಥಿ ಒಕ್ಕೂಟ: ಮಡಿವಾಳಪ್ಪ ಮಲ್ಲಾಬಾದಿ, ಯಲ್ಲಾಲಿಂಗ ದೊಡ್ಡಮನಿ, ಅರುಣಕುಮಾರ ಶಿಂಧೆ (ಸಂಘಟನಾ ಸಂಚಾಲಕರು), ದಸಂಸ ಮಹಿಳಾ ಒಕ್ಕೂಟ: ಉಷಾ ಎಂ.ಗಾಯಧನಕರ (ಸಂಚಾಲಕಿ), ಸಂಗೀತಾ ಕಲ್ಲೂರ, ಶಶಿಕಲಾ ಜೇವರ್ಗಿ (ಸಂಘಟನಾ ಸಂಚಾಲಕರು), ಕಲಾ ಮಂಡಳಿ: ಭಾಗಣ್ಣ ಕಟ್ಟಿ ಕೋಳಕೂರ (ಜಿಲ್ಲಾ ಸಂಚಾಲಕ),

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago