ಕಲಬುರಗಿ; ಹಿಂದೂಸ್ತಾನಧ ಸಹೋದರರೇ ನೀವು ಯಾವುದೇ ಧರ್ಮದವರಾಗಿ ದೇಶದ ಕೆಲಸದಲ್ಲಿ ಬಾಗಿಯಾಗಲು ನಿಮ್ಮೊಳಗೆ ನೀವು ಜಗಳವಾಡಿಬೇಡಿ ದಾರಿ ಬೇರೆ ಬೇರೆ ಇದ್ದರು ನಮ್ಮೆಲ್ಲರ ಉದ್ದೇಶ ಒಂದೇ ಭಾರತ ಸ್ವಾತಂತ್ರ್ಯ ಗೊಳಿಸುವುದಾಗಿದೆ ಎಂದು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ಹೇಳಿದ್ದಾರೆ ಎಂದು ಎಐಡಿವೈಒ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್ ಹೇಚ್ ಹೇಳಿದರು.
ಎಐಡಿವೈಒ ಸ್ಥಳೀಯ ಸಮಿತಿಯು ಶಹಾಬಾದ ಬಸವೇಶ್ವರ ವೃತ್ತದಲ್ಲಿ ಹಮಿಕೊಂಡ ಅಶ್ಫಾಕುಲ್ಲಾ ಖಾನ್ ಅವರ 125ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದೆವರೆದು ಅವರು ಚಿಕ್ಕ ವಯಸ್ಸಿನಲ್ಲೇ ದೇಶಪ್ರೇಮ ಹಾಗೂ ಬ್ರಿಟಿಷರ ವಿರುದ್ಧ ಕ್ರೋಧವನ್ನೆ ಬೆಳೆಸಿಕೊಂಡ ಅಶ್ಫಾಕುಲ್ಲಾ ಖಾನ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡುವುದೇ ನನ್ನ ಗುರಿ ಎಂದು ನಿರ್ಧರಿಸಿದ್ದರು ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ರವರ ವಿಚಾರಗಳಿಂದ ಪ್ರಭಾವಿತರಾಗಿ ಕ್ರಾಂತಿಕಾರಿ ಸಂಘಟನೆಯಾದ ಹೇಚ್, ಆರ್ ,ಎ ,ನ ಸದಸ್ಯರಾದರು.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಹಿಂದೂ- ಮುಸ್ಲಿಂರ ಮಧ್ಯೆ ಇದ್ದ ಅಪೂರ್ವ ಸ್ನೇಹದ ಆಳವನ್ನು ಈ ಒಂದು ಘಟನೆಯಿಂದ ತಿಳಿಯಬಹುದು. ಒಮ್ಮೆ ಆಶ್ವಾಕುಲ್ಲಾ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದರು. ಅವರು ಆಗಾಗ ‘ರಾಮ್’, ‘ರಾಮ್’ ಎಂದು ಕನವರಿಸುತ್ತಿದ್ದರು. ಆತನ ತಂದೆತಾಯಿ ಇದೊಂದು ‘ಸೈತಾನನ ಕಾಟ’ವೆಂದು ತಪ್ಪರ್ಥ ಮಾಡಿಕೊಂಡು, ಸೈತಾನನನ್ನು ಓಡಿಸಲು ಮೌಲ್ವಿಯನ್ನು ಕರೆತರಲು ಅಶ್ಫಾ ಕುಲ್ಲಾ ಖಾನ್ ರ ಸ್ನೇಹಿತನಿಗೆ ಹೇಳಿದರು. ಅದೃಷ್ಟವಶಾತ್, ಆತನಿಗೆ ರಾ ರಹಸ್ಯ ಅರ್ಥವಾಯಿತು. ಮೌಲ್ವಿಯ ಬದಲು ರಾಮ್ ಪ್ರಸಾದ್ ಬಿಸ್ಮಿಲ್ ಆಗಮಿಸಿದರು.
ಅವರನ್ನು ಹಾಸಿಗೆಯ ಬಳಿ ನೋಡಿದ ಅಕ್ಷಾಕುಲ್ಲಾ ಕನವರಿಸುವುದನ್ನು ನಿಲ್ಲಿಸಿದರು. ಬ್ರಿಟಿಷ್ ಸರ್ಕಾರದ ‘ಒಡೆದು ಆಳುವ’ ನೀತಿಯ ಹಿನ್ನೆಲೆಯಲ್ಲಿ ಒಬ್ಬ ಹಿಂದೂ ಮತ್ತು ಒಬ್ಬ ಮುಸ್ಲಿಂ ಹುಡುಗನ ಮಧ್ಯೆ ಈ ಸ್ನೇಹ, ಆ ಕಾಲದಲ್ಲಿ ಅದ್ವಿತೀಯವಾದುದು. ಆತನ ಗುಣನಡತೆಯಲ್ಲಿ ಕ್ರಾಂತಿಕಾರಿ ನೈತಿಕತೆ ಮತ್ತುಸಿದ್ಧಾಂತದ ಪ್ರಭಾವ ಎಷ್ಟಿತ್ತೆಂದರೆ, ಭಾಷೆ ಅಥವಾ ಧರ್ಮದ ಪ್ರಶ್ನೆಗಳು ಬದಿಗೆ ಸರಿದಿದ್ದವು. ಇಡೀ ಮುಸ್ಲಿಂ ಜನಾಂಗವನ್ನು ರಾಜಿರಹಿತ ಸ್ವಾತಂತ್ರ್ಯ ಸಂಗ್ರಾಮದ ಹಿಡಿತಕ್ಕೆ ತರುವ ಬಗ್ಗೆ ಅವರು ಚಿಂತಿಸುತ್ತಿದ್ದರು. ಜನರನ್ನು ಸ್ವಾತಂತ್ರ್ಯ ಚಳುವಳಿಗೆ ಬರುವಂತೆ ಉತ್ತೇಜಿಸಲು, ಬಿಸ್ಮಿಲ್ ರನ್ನು ಅವರು ಉರ್ದುವಿನಲ್ಲಿ ಕವನ ಬರೆಯಬೇಕೆಂದು ಕೇಳಿಕೊಂಡರು.
ಆದರೆ ಆ ಸಮಯದಲ್ಲಿ ಹೆಚ್ಚಿನ ಕ್ರಾಂತಿಕಾರಿ ಸಾಹಿತ್ಯ ಮತ್ತು ದೇಶಭಕ್ತಿಕವನಗಳು ಹಿಂದಿಯಲ್ಲಿ ಬರೆದವುಗಳಾಗಿದ್ದವು. ತನ್ನ ಸಂಗಾತಿಗಳನ್ನು ತನಗಾಗಿ ಅವುಗಳನ್ನೆಲ್ಲಾ ಓದಿ ಹೇಳಬೇಕೆಂದು ಕೇಳಿಕೊಳ್ಳುತ್ತಿದ್ದರು. ಈ ರೀತಿಯಾಗಿಯೇ, ಆನಂದಮಠ, ಐರಿಷ್ ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಗಳು, ಮೋತಿಲಾಲರ ಕವನ ‘ಕನಯ್‌ಲಾಲ್’, ಕಾಜಿ ನಜ್ರುಲ್ ಇಸ್ಲಾಮ್‌ರ ಕ್ರಾಂತಿಕಾರಿ ಕವನಗಳು ಅವರಿಗೆ ಪರಿಚಿತವಾಗಿದ್ದವು.
ಧೀರರು ಸಾವಿಗೆ ಹೆದರುವುದನ್ನು ನಾನೆಂದೂ ಕಂಡಿಲ್ಲ” ಎಂಬುವುದು ಅಶ್ವಾಕುಲ್ಲಾರ ಮರೆಯಲಾಗದ ಹೇಳಿಕೆಯಾಗಿದೆ. ಭಾರತ ಸ್ವಾತಂತ್ರ್ಯವನ್ನು ಗೆದ್ದ ನಂತರ ಮತ್ತು ಬಿಳಿಯರ ಆಡಳಿತದ ಜಾಗದಲಿ, ಬಡವ-ಶ್ರೀಮಂತ, ಜಮೀನ್ದಾರ-ರೈತರ ಭೇದಗಳನ್ನು ಜೀವಂತವಾಗಿಟ್ಟು ಕೊಂಡು, ಸ್ವದೇಶೀ ಶೋಷಕರು ಅಧಿಕಾರವನ್ನು ಕೈವಶಮಾಡಿಕೊಂಡರೆ, ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ – ದೇವರೇ ನಮ್ಮ ಮಾತೃಭೂಮಿಯಲ್ಲಿ ಸಮಾನತೆ ಬರುವವರೆಗೂ ನಮಗೆ ಅಂತಹ ಸ್ವಾತಂತ್ರ್ಯ ಕೊಡಬೇಡ. ಯಾವುದೇ ಭೇದಭಾವ ಇಲ್ಲದೆ ನಾವೆಲ್ಲರೂ ಸಮಾನರು ಎಂದು ಹೇಳಿದರೆ ಇಂತಹ ಮಹಾನ್ ಕ್ರಾಂತಿಕಾರಿಯ ವಿಚಾರಗಳು ಯುವಜನರು ಅರಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಹಾಬಾದ್ ಅಧ್ಯಕ್ಷರಾದ ರಘು ಪವಾರ್, ಕಾರ್ಯದರ್ಶಿ ರಮೇಶ ದೇವಕರ್, ಉಪಾಧ್ಯಕ್ಷರು ತೇಜಸ್ ಆರ್ ಇಬ್ರಾಹಿಂಪುರ, ಕಿರಣ ಮಾನೆ, ಆನಂದ ದಂಡಗುಲಕರ್, ಶಾಮ ಪವಾರ್, ಅಜೇಯ ದೊರೆ, ಹಾಗೂ ಇನ್ನಿತರು ಯುವಜನರು ಭಾಗವಹಿಸಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…