ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರ ರಾಣಿ ಚೆನ್ನಮ್ಮ

ಸುರಪುರ: ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮೊದಲ ಮಹಿಳಾ ಹೋರಾಟಗಾರ್ತಿ ಎಂದರೆ ಅದು ಕಿತ್ತೂರ ರಾಣಿ ಚೆನ್ನಮ್ಮನವರಾಗಿದ್ದಾರೆ ಎಂದು ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮಾತನಾಡಿದರು.

ತಾಲ್ಲೂಕ ಆಡಳಿತ ದಿಂದ ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರ ರಾಣಿ ಚೆನ್ನಮ್ಮನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಣಿ ಚೆನ್ನಮ್ಮನವರು ಕೇವಲ ಹೋರಾಟಗಾರ್ತಿ ಮಾತ್ರವಲ್ಲದೆ ಉತ್ತಮ ಆಡಳಿತಗಾರರು ಆಗಿದ್ದರು ಎಂದರು.

ಇದೇ ಸಂದರ್ಭದಲ್ಲಿ ರಾಣಿ ಚೆನ್ನಮ್ಮನವರ ಕುರಿತು ನ್ಯಾಯವಾದಿ ಶಿವಾನಂದ ಆವಂಟಿ ಉಪನ್ಯಾಸ ನೀಡಿ,ರಾಣಿ ಚೆನ್ನಮ್ಮನವರು ಭಾರತದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.ಬ್ರೀಟಿಷರಿಗೆ ಸಿಂಹಸ್ವಪ್ನವಾಗಿದ್ದ ಅವರು ಬ್ರಿಟೀಷರು ಕಪ್ಪ ಕೇಳಿದರೆ ನಿಮಗೇಕೆ ಕೊಡಬೇಕು ಕಪ್ಪಾ ಎಂದು ಪ್ರಶ್ನಿಸಿದ ದಿಟ್ಟ ಮಹಿಳೆಯಾಗಿದ್ದರು.ಸಹಾಯಕ ಸೈನ್ಯ ಪದ್ಧತಿಯನ್ನು ವಿರೋಧಿಸಿದ್ದ ಅವರು ಬ್ರಿಟೀಷರ ಎದೆ ನಡುಗಿಸಿದ್ದರು.ಅವರು ಕೇವಲ ಹೋರಾಟ ಮಾಡಿರುವುದು ಮಾತ್ರವಲ್ಲದೆ ಅಂದು ಕಿತ್ತೂರನ್ನು ಉತ್ತಮವಾದ ವ್ಯಾಪಾರ ಕೇಂದ್ರವಾಗಿಸಿದ್ದರು.ವಜ್ರದ ವ್ಯಾಪಾರದಿಂದ ಕಿತ್ತೂರ ಕೇಂದ್ರ ಅಂದು ಹೆಸರುವಾಸಿಯಾಗಿತ್ತು.ಮೂರು ರಾಜ್ಯಗಳಿಗೆ ಹೊಂದಿಕೊಂಡಿದದ್ ಕಿತ್ತೂರು ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿತ್ತು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.ವೇದಿಕೆಯಲ್ಲಿ ಮುಖಂಡರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮಹೇಶ ಆನೆಗುಂದಿ,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಎಪಿಎಮ್‍ಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹುಕಾರ ನರಸಿಂಗಪೇಟ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖಂಡರಾದ ವಿಶ್ವರಾಧ್ಯ ಸತ್ಯಂಪೇಟೆ,ವಿರೇಶ ದೇಶಮುಖ,ಪ್ರಕಾಶ ಅಂಗಡಿ,ಶಿವಶರಣಪ್ಪ ಹೆಡಗಿನಾಳ,ಶಿವರಾಜ ಕಲಕೇರಿ,ದೇವಿಂದ್ರಪ್ಪಗೌಡ ಮಾಲಗತ್ತಿ,ರಾಜಶೇಖರ ತಂಬಾಕಿ,ಮಂಜುನಾಥ ಗುಳಗಿ,ಸಂಗಣ್ಣಗೌಡ ಬೆಳ್ಳಿ,ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ,ಸಿದ್ದಯ್ಯಸ್ವಾಮಿ ಕಡ್ಲೆಪ್ಪನವರ ಮಠ, ರಾಘವೇಂದ್ರ ಲಕ್ಷ್ಮೀಪುರ,ನಾಗಭೂಷಣ ಯಾಳಗಿ,ಶಿವು ಸಾಹುಕಾರ ರುಕ್ಮಾಪುರ,ಶಿವು ಸಾಹು ಸೂಗುರ,ಶರಣು ಅನಸೂರ,ಹೈಯಾಳಪ್ಪ ಗಾಂಧಿವಾದಿ ಹಾಗೂ ಅಧಿಕಾರಿಗಳಾದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ್,ಉಕ ಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಿತ್ತೂರ ರಾಣಿ ಚೆನ್ನಮ್ಮನವರ ಜಯಂತಿಯನ್ನು ಆಚರಣೆ ಆರಂಭಿಸಿರುವ ಹಿಂದಿನ ಹಾಗೂ ಈಗಿನ ಸರಕಾರಕ್ಕೆ ನಾವು ಅಭಿನಂಧನೆ ಸಲ್ಲಿಸೋಣ.ರಾಣಿ ಚೆನ್ನಮ್ಮನವರ ಶೌರ್ಯ ಸಾಹಸ ಮಕ್ಕಳಿಗೆ ತಿಳಿಸಿಕೊಡಬೇಕು- ಡಾ.ಸುರೇಶ ಸಜ್ಜನ್ ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು

ಕಿತ್ತೂರಿಗೂ ಸರಪುರಕ್ಕೂ ಅವಿನಾಭಾವ ಸಂಬಂಧವಿದೆ.ಸಂಗೊಳ್ಳಿ ರಾಯಣ್ಣ ಸುರಪುರ ಬೇಡರ ಪಡೆಯ ಸಹಾಯದೊಂದಿಗೆ ಬ್ರಿಟೀಷರ ವಿರುದ್ಧ ಯುದ್ಧ ಮಾಡಿ ಗೆದ್ದಿದ್ದರು.ಅದಕ್ಕಾಗಿ ಮೈಸೂರ ಅರಸರ ವಸ್ತುಗಳ ಸಂಗ್ರಹಾಲಯದಂತೆ ಕಿತ್ತೂರ ರಾಣಿ ಚೆನ್ನಮ್ಮನವರ ವಸ್ತು ಸಂಗ್ರಹಾಲಯ ಸರಕಾರ ನಿರ್ಮಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇನೆ- ಸೂಗುರೇಶ ವಾರದ ನಯೋಪ್ರಾ ಮಾಜಿ ಅಧ್ಯಕ್ಷ

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

36 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

37 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

40 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago