ಕಲಬುರಗಿ: ಇಲ್ಲಿನ ಕೆಕೆಸಿಸಿಐ ಸಭಾಂಗಣದಲ್ಲಿ ಕೆಕೆಸಿಸಿಐ ಆಶ್ರಯದಲ್ಲಿ ಜಿಎಸ್‍ಟಿ ಸಂಬಂಧಿತ ಟ್ಯಾಲಿ ಪ್ರೈಮ್ 5.0 ವಿಶಿಷ್ಟ ಸಾಫ್ಟವೇರ್ ಡೆವಲಪೇರ್ ನಿರ್ವಹಣೆ ಕುರಿತು ಸಂವಾದ ಹಾಗೂ ಮಹಿಳಾ ಉದ್ದಿಮೆದಾರರ ಜಾಗೃತಿ ತರಬೇತಿ ಶಿಬಿರ ನಡೆಯಿತು.
ಈ ವೇಳೆ ಅಧ್ಯಕ್ಷತೆವಹಿಸಿದ್ದ ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಬಿ. ಪಾಟೀಲ್, ಕೌಶಲ್ಯ ಆಧಾರಿತ ಗುಡಿ ಕೈಗಾರಿಕೆ ಆರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಉದ್ದಿಮೆದಾರರು ಹೊಸ ಹೊಸ ಕೌಶಲ್ಯ ಬೆಳೆಸಿಕೊಂಡು ಆರ್ಥಿಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಕೆಕೆಸಿಸಿಐ ತೆರಿಗೆ ನಿರ್ವಹಣಾ ಸಮಿತಿ ಸಹ ಮುಖ್ಯಸ್ಥ, ಕೆಕೆಸಿಸಿಐ ಖಜಾಂಚಿ ಸಿ.ಎ. ಉತ್ತಮ ಬಜಾಜ್ ಮಾತನಾಡಿ, ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಂಡು ವ್ಯಾಪಾರ ವಹಿವಾಟು ಡಿಜಿಟಲಕರಣಗೊಳಿಸಬೇಕು. ಗ್ರಾಹಕರ ಮತ್ತು ವ್ಯಾಪಾರ ದೃಷ್ಟಿಕೋನದಿಂದ ಡಿಜಿಟಲ್ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಬೆಳೆಯುತ್ತಿದೆ ಎಂದು ಹೇಳಿದರು.
ವಾಣಿಜ್ಯ ಮತ್ತು ಗುಡಿ ಕೈಗಾರಿಕೆಗಳಲ್ಲಿ ಮಹಿಳಾ ಉದ್ದಿಮೆದಾರರು ಬಂಡವಾಳ ಹೂಡಲು ತೆರಿಗೆ ವಿನಾಯಿತಿ, ಸಹಾಯಧನ ಸೌಲಭ್ಯಗಳು ಹೆಚ್ಚಿವೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಎಫ್‍ಓಡಬ್ಲೂಇ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಸಮಾಜ ಸೇವಕಿ ಶ್ರೀದೇವಿ ಪಾಟೀಲ್ ಮಾತನಾಡಿ, ಮಹಿಳೆಯರು ಸಬಲೆಯರಾಗಲು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಣ್ಣ, ಗುಡಿ ಕೈಗಾರಿಕೆ ಆರಂಭಿಸುವ ಮೂಲಕ ಆರ್ಥಿಕ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಕೆಕೆಸಿಸಿಐ ಮಾಜಿ ಅಧ್ಯಕ್ಷ ಪ್ರಶಾಂತ ಮಾನಕರ್, ಕೆಸಿಸಿಐ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ತೆರಿಗೆ ಉಪ ಸಮಿತಿ ಅಧ್ಯಕ್ಷ ವೆಂಕಟ್ ಚಿಂತಾಮಣಿರಾವ್, ಷಣ್ಮುಖ ಸಿ.ಜೆÉ ಸೇರಿ ಅನೇಕ ಉದ್ದಿಮೆದಾರರು, ವರ್ತಕರು, ವ್ಯಾಪಾರಸ್ಥರು ಪಾಲ್ಗೊಂಡು ಸಲಹೆ ಸೂಚನೆ ಪಡೆದುಕೊಂಡರು.
ಎಫ್‍ಓಡಬ್ಲ್ಯೂಇ ಅಧ್ಯಕ್ಷೆ ರೂಪಾರಾಣಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಿಂದ ಸ್ವಯಂ ಉದ್ಯೋಗ ಮಾಡುವ ಮಹಿಳೆಯರು ಅನೇಕ ಸೌಲಭ್ಯಗಳ ಜೊತೆಗೆ ತೆರಿಗೆ ವಿನಾಯಿತಿ, ಸಹಾಯಧನ ಸಿಗಲಿವೆ. ಸಣ್ಣ ಪ್ರಮಾಣದಲ್ಲಿ ಬಂಡವಾಳ ಹೂಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಮ್ಮ ಸಂಸ್ಥೆಯು ನಿರಂತರ ಪ್ರೋತ್ಸಾಹ, ಸೂಕ್ತ ತರಬೇತಿ, ಮಾರ್ಗದರ್ಶನ ನೀಡಲಿದೆ. ಮಹಿಳಾ ಉದ್ದಿಮೆದಾರರು ಇದರ ಲಾಭಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…