ಕಲಬುರಗಿ: 12ನೇ ಶತಮಾನದ ಅಕ್ಕಮಹಾದೇವಿ ಮಹಿಳೆಯರ ಸ್ವಾತಂತ್ರ್ಯದ ಪ್ರತೀಕವಾಗಿದ್ದಾರೆ ಎಂದು ಶರಣಬಸವೇಶ್ವರ ಸಂಸ್ಥಾನದ ಚೇರ್ ಪರ್ಸ್ ನ್ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ವೇದಿಕೆ ಇವುಗಳ ಆಶ್ರಯದಲ್ಲಿ ನಗರದ ಜೈಭವಾನಿ ಕನ್ವೆನ್ಸ್ಯನ್ ಹಾಲ್ ನಲ್ಲಿ ಶನಿವಾರದಿಂದ ಆರಂಭವಾದ 12ನೇ ರಾಜ್ಯ ಮಟ್ಟದ ಕದಳಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಅವರು, ಮಹಿಳೆಯರಿಗೆ ಮೊದಲು ಶಿಕ್ಷಣ ಒದಗಿಸಿದವರು. ಹಿಂದಣ ಹೆಜ್ಜೆ ಅರಿತಲ್ಲದೆ ಮುಂದಣ ಹೆಜ್ಜೆ ಅರಿಯಲಾಗದು ಎನ್ನುವಂತೆ ಅಕ್ಕನ ವ್ಯಕ್ತಿತ್ವ ಮಹಿಳೆಯರಿಗೆ ಮಾದರಿಯಾಗಿದೆ. ಶರಣಬಸವೇಶ್ವರರು, ಖ್ವಾಜಾ ಬಂದೇನವಾಜರ ಸಾಮರಸ್ಯದ ಬೀಡು ಇದಾಗಿದೆ. ಅನುಭವ ಮಂಟಪ, ಕಲ್ಯಾಣ ರಾಜ್ಯದ ಕನಸು ನನಸು ಮಾಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.
ಶರಣ ದರ್ಶನ ಚಿತ್ರಕಲಾ ಪ್ರದರ್ಶನ ಮತ್ತು ಪುಸ್ತಕಗಳ ಮಳಿಗೆಗಳ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಮಾತನಾಡಿ, ವಚನ ಸಾಹಿತ್ಯದ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ವಚನ ಸಾಹಿತ್ಯದಲ್ಲಿ ಬಹಳ ದೊಡ್ಡ ಶಕ್ತಿಯಿದೆ. ಶರಣರ ವಚನಗಳು ಪಚನವಾದಾಗ ಮತ್ತು ಆ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಯಶಸ್ವಿಯಾಗುತ್ತದೆ ಎಂದರು.
ಲಿಂಗ ಕಟ್ಟಿಕೊಳ್ಳುವ, ಲಿಂಗಪೂಜೆ ಮಾಡುವ ಸಂಸ್ಕೃತಿ ಮಕ್ಕಳಲ್ಲಿ ಬೆಳೆಸಬೇಕು. ಅನುಭವ ಮಂಟಪದಲ್ಲಿ ಅಕ್ಕನಿಗೆ ವಿಶೇಷ ಸ್ಥಾನವಿತ್ತು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, ವಚನ ಸಾಹಿತ್ಯ ಬಹಳ ಶ್ರೀಮಂತ ಸಾಹಿತ್ಯವಾಗಿದೆ. 33ಕ್ಕೂ ಹೆಚ್ಚು ವಚನಕಾರ್ತಿಯರು ವಚನ ರಚಿಸಿದ್ದು ಗಮನಾರ್ಹ ಸಂಗತಿ ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ವಸ್ತ್ರದ ಮಾತನಾಡಿ, ಶರಣರ ವಚನಗಳ ಪ್ರಚಾರ ಮತ್ತು ಪ್ರಚುರಪಡಿಸುವ ಕೆಲಸ ಈಗಾಗಲೇ ಆಗಿದೆ. ಆದರೆ ಆ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಶರಣ-ಶರಣೆಯರು ಅನುಭವ ಮಂಟಪದಲ್ಲಿ ಅಂದು ಸಾಮಾಜಿಕ ಪ್ರಜ್ಞೆ ಕುರಿತು ಮಾತನಾಡಿದರು. ಸಾಮಾನ್ಯ ಜನರಿಗೆ ತಿಳಿಯುವಂತೆ ಹೇಳಿದರು ಎಂದರು.
ವಚನಕಾರರು ವರ್ಗ, ವರ್ಣ ಹಾಗೂ ಲಿಂಗಭೇದ ಕುರಿತು ಮಾತನಾಡಿದರು ಮಾತ್ರವಲ್ಲ ಸರ್ವ ಸಮಾನತೆಯ ಸಮಾಜ ಕಟ್ಟಲು ಅಹರ್ನಿಶಿ ಪ್ರಯತ್ನಿಸಿದರು ಎಂದು ತಿಳಿಸಿದರು.
ಗದಗಿನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಾರಂಗಮಠ, ಶ್ರೀಶೈಲಂನ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.
ಸಂಸದ ಡಾ.ರಾಧಾಕೃಷ್ಣ ದೊಡ್ಡಮನಿ, ವಚನಗಳ ಕಟ್ಟು, ಅಕ್ಕಮಹಾದೇವಿ ಭಾವಚಿತ್ರ ಮೆರವಣಿಗೆಯನ್ನು ಉದ್ಘಾಟಿಸಿದರು.
ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ. ಸಿ. ಸೋಮಶೇಖರ ಆಶಯ ನುಡಿಗಳನ್ನಾಡಿದ, ಕಂಗಳ ಮುಂದಿನ ಕತ್ತಲೆ ನಿವಾರಿಸುವ, ಸಾಮರಸ್ಯದ ಬದುಕು ಕಟ್ಟಿಕೊಡುವ ಶರಣ ಪಥದಲ್ಲಿ ಸಾಗಲು. ವಚನ ಸಂವಿಧಾನ, ಜೀವನ ಸಂವಿಧಾನ ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ, ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ವಸ್ತ್ರದ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಶರಣ ಸಾಹಿತ್ಯ ಪರಿಷತ್ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಸುಶೀಲಾ ಸೋಮಶೇಖರ, ಚಂದ್ರಿಕಾ ಪರಮೇಶ್ವರ ವೇದಿಕೆಯಲ್ಲಿದ್ದರು.
ಡಾ. ಸುಜಾತಾ ಪಾಟೀಲ, ಎಸ್.ಕೆ. ಬಿರಾದಾರ ನಿರೂಪಿಸಿದರು. ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ. ಶಾಂತಾ ಅಸ್ಟಿಗೆ ಸ್ವಾಗತಿಸಿದರು.
ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ,
ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಲಿಂಗ ಪಾಟೀಲ ಕೋಳಕೂರ, ಕೆ.ನೀಲಾ, ಡಾ.ಸುಜಾತಾ ಜಂಗಮಶೆಟ್ಟಿ, ಡಾ.ಜಯಶ್ರೀ ದಂಡೆ, ಡಾ.ಸರಸ್ವತಿ ಚಿಮ್ಮಲಗಿ, ಬಸವರಾಜ ಮೊರಬದ ಇತರರಿದ್ದರು.
ಶರಣರು ವೈದಿಕತೆಯನ್ನು ವಿರೋಧಿಸಿದರು: ಸಮ್ಮೇಳನಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ
ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಮೇಲ್ನೋಟಕ್ಕೆ ಸಂಕೇತವಾಗಿರಬಹುದು. ಆದರೆ ನಿಜಕ್ಕೂ ಅದು ದಾರ್ಶನಿಕ ದಿಗ್ವಿಜಯದ ಸಾಧನವಾಗಿದೆ ಎಂದು ಸಮ್ಮೇಳನಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಅಭಿಮತ ವ್ಯಕ್ತಪಡಿಸಿದರು.
ಜಾತಿ, ಬಡತನ, ಅಸಮಾನತೆಯ ಬಗ್ಗೆ ಮಾತನಾಡಿಲ್ಲ ಎಂಬ ಹುನ್ನಾರ ಇತ್ತೀಚಿಗೆ ನಡೆದಿದೆ. ಕಲ್ಯಾಣದಲ್ಲಿ ಕ್ರಾಂತಿ ಆಗಿಲ್ಲರಲಿಕ್ಕಿಲ್ಲ. ಶಾಸನಗಳು ಹೊಟ್ಟೆ ತುಂಬಿದವರ ಸಾಹಿತ್ಯ. ಶರಣರು ಮೌಖಿಕವಾಗಿ ತಮ್ಮ ಪರಂಪರೆಯನ್ನು ಕಟ್ಟಿಕೊಂಡು ಬಂದಿದ್ದಾರೆ. ವೇದ, ಉಪನಿಷತ್ ಗಳನ್ನು ಶರಣರು ನಖಶಿಕಾಂತವಾಗಿ ಖಂಡಿಸಿದರು. ಅಂತೆಯೇ ವೈದಿಕರು ವಚನ ಸಾಹಿತ್ಯಕ್ಕೆ ನಡಗುತ್ತಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸಕಲ ಜೀವಾತ್ಶರಿಗೆ ಲೇಸ ಬಯಸಿದ ಶರಣರು ವ್ಯಕ್ತಿಯನ್ನು ವಿರೋಧಿಸಲಿಲ್ಲ. ಸಮಾಜಕ್ಕೆ ಧಕ್ಕೆ ತರುವ ವಿಚಾರಗಳನ್ನು ವಿರೋಧಿಸಿದರು. ಶರಣರು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ದಾರ್ಶನಿಕತೆಯನ್ನು ಒದಗಿಸಿದವರು ಎಂದರು.
ಬ್ರಾಹ್ಮಣ್ಯವನ್ನು ಒದ್ದು, ವೈದಿಕತೆಯನ್ನು ವಿರೋಧಿಸಿದ ಬಸವಣ್ಣನವರು ಅನುಭವ ಪ್ರಮಾಣವನ್ನು ಒಪ್ಪಿದವರು. ಯಾವ ವೈದಿಕ ದರ್ಶನದಲ್ಲೂ ಮಹಿಳೆಯನ್ನು ಗುರು ಸ್ಥಾನದಲ್ಲಿ ನೋಡಿಲ್ಲ. ಕಾಯಕವನ್ನು ಕೈಲಾಸದೆತ್ತರದ ಸ್ಥಾನ ನೀಡಿದ ವಚನ ಸಾಹಿತ್ಯ ಹಾಳು ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ಇದೇವೇಳೆಯಲ್ಲಿ ಕಲ್ಯಾಣ ಕದಳಿ, ಅಕ್ಕ ಕೇಳವ್ವ ಎಂಬ ಎರಡು ಸ್ಮರಣ ಸಂಚಿಕೆ, ಶರಣ ಪ್ರಸಾದ, ಅರವತ್ಮೂರು ಪುರಾತನರ ಚಿತ್ರಪಟಗಳು ಕೃತಿಗಳು ಬಿಡುಗಡೆಯಾದವು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…