ಶಿವನ ಸೊಮ್ಮಿನಲ್ಲಿದೆ ಪ್ರಜಾಪ್ರಭುತ್ವದ ಪರಿಕಲ್ಪನೆ

ಕಲಬುರಗಿ: ಬಹುತ್ವದ ಆಯಾಮದ ಕ್ರಾಂತಿ, ಚಳವಳಿ, ಸಮಾಜ ಒಪ್ಪಿಕೊಂಡು ಶಿವನ ಸೊಮ್ಮು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ಷನ್‌ ಹಾಲ್ ನಲ್ಲಿ ಶನಿವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಎರಡನೇ ಗೋಷ್ಠಿಯಲ್ಲಿ ಗೋತ್ರನಾಮವ ಬೆಸಗೊಂಡಡೆ ವಿಷಯ ಕುರಿತು ಧಾರವಾಡದ ಪ್ರಾಧ್ಯಾಪಕಿ ಡಾ.‌ ಅನಸೂಯಾ ಕಾಂಬಳೆ ಮಾತನಾಡಿ, ಬೌದ್ಧಿಕ ರಾಜಕಾರಣದ ಭಂಜಕರು ಬಸವಣ್ಣನವರು, ಎಲ್ಲರೂ ಮನುಷ್ಯರು ಎಂದು ಹೇಳಿಕೊಟ್ಟರು. ವಚನಕಾರರು ಪರಮಾತ್ಮನ ಚಿಂತನೆಗೆ ಹೆಚ್ಚು ಮಹತ್ವ ಕೊಡದೆ ಪದಾರ್ಥ ಚಿಂತನೆ ಮಾಡಿದರು ಎಂದು ಹೇಳಿದರು.

ಅಂತ್ಯಜರೆಂದು ಕರೆಯಲ್ಪಡುವವರಿಗೆ ಕಾಯಕದ ಸ್ವಾಭಿಮಾನ ಮೂಡಿಸಿದ ಬಸವಣ್ಣನವರು, ನಿಮ್ಮ ಗೋತ್ರವೇನು ಎಂದು ಪ್ರಶ್ನಿಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಖಂಡಿಸಿದರು ಎಂದು ತಿಳಿಸಿದರು.

ಒಕ್ಕು, ಮಿಕ್ಕ, ಶಿವನ ಸೊಮ್ಮು, ಇಂದಿಗೆ ನಾಳಿಂಗೆ ಬೇಕೆಂದನಾದೊಡೆ ನಿಮ್ಮಾಣೆ ಎನ್ನುವ ವಚನಗಳು ಪ್ರಜಾಪ್ರಭುತ್ವದ ವಿಚಾರಗಳನ್ನು ಒಳಗೊಂಡಿತ್ತು ಎಂದು ಹೇಳಿದರು.

ಸದ್ವಿನಿಯೋಗದ ಮಾರ್ಗದಲ್ಲಿ ಶಿವನ ಸೊಮ್ಮು ಉಪಯೋಗಿಸಬೇಕು.‌ ನೇಮದ ಕೂಲಿಯಿಂದ ಪಡೆದ ಹಣವನ್ನು ದಾಸೋಹ ಮಾಡುವುದು ಶಿವನ ಸೊಮ್ಮು. ಸಮಾಜದ ಸಂಪತ್ತು ಎಂದು ಶರಣರು ಕರೆದರು ಎಂದರು.

ಶರಣರು ಜಾತಿ ಅಸ್ಪೃಶ್ಯತೆಗಿಂತ ಭೌದ್ಧಿಕ ಅಸ್ಪೃಶ್ಯತೆಯನ್ನು ಸಹ ಮೀರಿದ್ದರು ಎಂದು ತಿಳಿಸಿದರು.

ಧಾರವಾಡದ ಪ್ರಾಧ್ಯಾಪಕಿ ಡಾ.‌ ಅನಸೂಯಾ ಕಾಂಬಳೆ ಗೋತ್ರನಾಮವ ಬೆಸಗೊಂಡಡೆ ವಿಷಯ ಕುರಿತು ಮಾತನಾಡಿದರು.

ಸಿಯುಕೆ ಕನ್ನಡ ಪ್ರಾಧ್ಯಾಪಕ ಡಾ.‌ ಅಪ್ಪಗೆರೆ ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಡಾ.‌ಜಯದೇವಿ ಗಾಯಕವಾಡ,‌ ಸೋಮಶೇಖರ ಗಾಂಜಿ,‌ ಶಿವಾನಂದ ಮಠಪತಿ, ಶಾರದಾ ಶಿವಲಿಂಗಸ್ವಾಮಿ, ಬಸವರಾಜ ಐನೋಳಿ, ಡಾ. ತೀರ್ಥಕುಮಾರ ಪಾಟೀಲ, ಪ್ರೊ. ಶಿವರಾಜ ಪಾಟೀಲ ಇತರರು ವೇದಿಕೆಯಲ್ಲಿದ್ದರು.

ಡಾ.‌‌ ಶಾಮಾಲಾ ಸ್ವಾಮಿ ನಿರೂಪಿಸಿದರು. ಡಾ.‌ಸುನಿತಾ ಗುಮ್ಮಾ ಸ್ವಾಗತಿಸಿದರು.‌ ಬಾಬುರಾವ ಪಾಟೀಲ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago