ಕಲಬುರಗಿ: ಕನ್ನಡ ನಿತ್ಯೋತ್ಸವ ಆಗಬೇಕೆಂಬ ಡಾ.ಕೆ.ಎಸ್.ನಿಸ್ಸಾರ್ ಅಹ್ಮದ್ ಅವರ ಆಶಯದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ನಿರಂತರವಾಗಿ ಶ್ರಮಿಸುತ್ತಿದೆ. ಈ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆ. ನಾಡಿನ ಭಾμÉ ಸಂಸ್ಕøತಿ, ಕಲೆ ಸಾಹಿತ್ಯ, ನೆಲ ಜಲ ಹಾಗೂ ಸಾಂಸ್ಕೃತಿಕ ಹಿರಿಮೆಗಾಗಿ ಕಲಬುರಗಿ ಜಿಲ್ಲಾ ಘಟಕವು ಅರ್ಹನಿಸಿ ಕಾರ್ಯ ನಿರ್ವಹಿಸುತ್ತಿದೆ. ಮತ್ತು ಕನ್ನಡಪರ ಕಾರ್ಯ ಚಟುವಟಿಕೆಗಳು ನಿತ್ಯ ನೂತನವಾಗಿ ನಡೆಯುತ್ತಿವೆ.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಹೊಸ ಪರಿಕಲ್ಪನೆಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗೂ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗಿ ಕಟ್ಟಬೇಕೆಂಬ ಬೆಟ್ಟದಷ್ಟು ಕನಸುಗಳನ್ನು ಹೊಂದಲಾಗಿದೆ. ಆ ಮೂಲಕ ಯುವ ಕವಿ ಕಲಾವಿದ ಪ್ರತಿಭೆಗಳಿಗೆ ಮುಕ್ತ ವೇದಿಕೆ ಅವಕಾಶ ಕಲ್ಪಿಸುತ್ತಿದೆ.
ಕಳೆದ ಎರಡುವರೆ ವರ್ಷದಲ್ಲಿ ಹತ್ತು ಹಲವು ರಚನಾತ್ಮಕ ಯೋಜನೆಗಳು ಅನುμÁ್ಠನಗೊಳಿಸಲಾಗುತ್ತಿದೆ.
ಭಾμÁಭಿವೃದ್ಧಿಗೆ ಪೂರಕವಾಗುವಂಥ ಕಾರ್ಯಗಳು ಕೂಡ ಪರಿಷತ್ತಿನಿಂದ ನಡೆಯುತ್ತಿವೆ. ಕಲಬುರಗಿ ಜಿಲ್ಲೆಯನ್ನು ಒಂದು ಸಾಂಸ್ಕೃತಿಕ ಜಿಲ್ಲೆಯನ್ನಾಗಿಸಬೇಕೆಂಬ ವಿಜಯ ಕುಮಾರ ಪಾಟೀಲ ಅವರ ಸಂಕಲ್ಪವಾಗಿದೆ. ಇದಕ್ಕೆ ಪೂರಕವಾಗಿ ನಿತ್ಯ ನಿರಂತರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿ ಕಲಾವಿದರು ಸೇರಿ ಜನಸಾಮಾನ್ಯರತ್ತ ಕೊಂಡ್ಯೊಯಲಾಗಿದೆ. ಹಾಗೂ ತುಂಬಾ ಜನಪ್ರಿಯ ಪರಿಷತ್ತಾಗಿ ಹೆಗ್ಗಳಿಕೆ ಹೊಂದಿದೆ.
ತತ್ವ ಪದ ಸಾಹಿತ್ಯ ಸಮ್ಮೇಳನ, ಯುವ ಸಾಹಿತ್ಯ ಸಮ್ಮೇಳನ, ಪ್ರಥಮ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನ, ಪ್ರಥಮ ದಲಿತ ಚಳವಳಿ ಸಮ್ಮೇಳನ, ಪ್ರಥಮ ದಾಸ ಸಾಹಿತ್ಯ ಸಮ್ಮೇಳನಗಳು ಪರಿಷತ್ತ ಅಡಿಯಲ್ಲಿ ಜರುಗಿವೆ. ನ.10ರಂದು ಪ್ರಥಮ ಜನಪದ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೂಡ ಹಮ್ಮಿಕೊಳ್ಳಲಾಗಿದೆ.
ಈ ಮೂಲಕ ಕನ್ನಡ ಭಾμÉ ಮತ್ತು ಸಂಸ್ಕೃತಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಜತೆಗೆ ಎಲ್ಲರನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸುವ ದಿಸೆಯಲ್ಲಿ ಕನ್ನಡ ಭವನ ಇಂದು ನಮಗೆಲ್ಲ ಸಾಕ್ಷಿಯಾಗಿ ನಿಂತಿದೆ. ವಿಜಯ ಕುಮಾರ ಪಾಟೀಲ ತೇಗಲತಿಪ್ಪಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಮ್ಮ ಇಡೀ ತಂಡದೊಂದಿಗೆ ದಾಪುಗಾಲು ಹಾಕುತ್ತಿದ್ದಾರೆ. ಅವರಲ್ಲಿನ ಕನ್ನಡ ನೆಲ ಜಲ ಮತ್ತು ಭಾμÉ ಕುರಿತಾದ ತುಡಿತಗಳೇ ಕಾರ್ಯಕ್ರಮಗಳು ಕನ್ನಡ ಭವನದಲ್ಲಿ ಝೆಂಕರಿಸುತ್ತಿವೆ.
ಜಿಲ್ಲೆಯ ಸಾಹಿತ್ಯ ಪರಂಪರೆ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದೂರದೃಷ್ಟಿ ಯೋಜನೆಗಳು ನಿರೂಪಿಸಲಾಗುತ್ತಿದೆ. ಇಂದು ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳು ನಡೆದಿವೆ. ಆ ಮೂಲಕ ಜಿಲ್ಲೆಯಲ್ಲಿ ಕನ್ನಡಮಯ ವಾತಾವರಣ ಮಾಡಿದೆ. ಕನ್ನಡ ಭವನಕ್ಕೆ ಕಾಲಿಟ್ಟರೆ, ಸುಂದರ ಪರಿಸರ, ಸಾರ್ವಜನಿಕ ಗ್ರಂಥಾಲಯ ಹಾಗೂ ಕಲಾ ಸೌಧಗಳು ಕೈ ಮುಗಿದು ಕರೆಯುತ್ತವೆ. ಹಾಗೂ ಕನ್ನಡ ಸಾಹಿತ್ಯ ದಿಗ್ಗಜರ ನುಡಿ ಮುತ್ತುಗಳು ಕಣ್ಣಿಗೆ ಹೊಸ ಭಾಷ್ಯ ಬರೆಯುತ್ತವೆ. ಅಂಥ ಕನ್ನಡದ ಪರಿಮಳ ಸೂಸುವ ಪ್ರಾಯೋಗಿಕ ಕಾರ್ಯಕ್ರಮಗಳು ನಡೆದು ಹೊಸ ಪರಂಪರೆಗೆ ನಾಂದಿ ಹಾಡಿವೆ.
ನಾಡಿನ ಹಿರಿಯ ಸಾಹಿತಿ, ಕಲಾವಿದರು, ಚಿತ್ರ ನಟರು, ಹೋರಾಟಗಾರರನ್ನು ಕನ್ನಡ ಭವನಕ್ಕೆ ಆಹ್ವಾನಿಸಿ ಪರಿಚಯಿಸಲಾಗಿದೆ. ಅವರ ಮಾತು ಕೃತಿಗಳು ನಮ್ಮೊಂದಿಗೆ ಮಾತಾಡುವಂತೆ ಅಧ್ಯಕ್ಷರು ಮಾಡುತ್ತಿದ್ದಾರೆ.
ನೆಲ ಜಲ ಭಾμÉಗೆ ಧಕ್ಕೆ ಬಂದಾಗ ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ತು ಧ್ವನಿ ಎತ್ತಿದೆ. ಇದಕ್ಕಾಗಿ ದುಡಿದವರನ್ನು ಗೌರವಿಸಿ ಸತ್ಕರಿಸವಾಗಿದೆ. ಪ್ರತಿನಿತ್ಯ ನೂರಾರು ಕನ್ನಡಿಗರು ಪರಿಷತ್ ಅಂಗಳಕ್ಕೆ ಆಗಮಿಸುತ್ತಿದ್ದಾರೆ. ತವಗ ಭೀಮಸೇನರಾವ ಅವರು ಕಸಾಪ ಪ್ರಥಮ ಜಿಲ್ಲಾಧ್ಯಕ್ಷರಾಗಿ ಇಂದು ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅವರ ಇಡೀ ತಂಡವೂ ಸಕ್ರಿಯವಾಗಿ ಕನ್ನಡದ ಅಸ್ಮಿತೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಇಂದು ಕನ್ನಡ ಸಾಹಿತ್ಯ ಪರಿಷತ್ತು ಹಿರಿಮೆಗೆ ಪಾತ್ರವಾಗಿದೆ.
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಸರಕಾರದ ಘೋಷ ವ್ಯಾಕ್ಯದಂತೆ ವರ್ಷವಿಡಿ ಕಾರ್ಯಕ್ರಮಗಳು ಹಮ್ಮಿಕೊಂಡು ಬರಲಾಗಿದೆ. ಈ ವರ್ಷದ ನವಂಬರ ತಿಂಗಳಾದ್ಯಂತ ಕಾರ್ಯಕ್ರಮಗಳು ಸಂಯೋಜಿಸಲಾಗಿದೆ. ಕನ್ನಡ ಜಾಗೃತಿ ಜಾಥಾ, ಉಪನ್ಯಾಸ, ಹಾಸ್ಯ ಹಬ್ಬ, ಮಕ್ಕಳೊತ್ತವ ಸೇರಿವೆ. ಬಾರಿಸು ಕನ್ನಡ ಡಿಂ ಡಿಂ ವ, ಎನ್ನುತ್ತ ಝೇಂಕಾರ ಮೊಳಗಿಸುತ್ತಿದೆ.- ಧರ್ಮಣ್ಣ ಎಚ್. ಧನ್ನಿ, ಗೌರವ ಕಾರ್ಯದಶಿ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…