ಕಲಬುರಗಿ: ಉಚಿತ ಸರಕಾರಿ ವಸತಿ ಜಾಗೃತಿ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಕಾಲೇಜಿನಲ್ಲಿ ಮಹಿಳಾ ಕೋಶದ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಸರ್ಕಾರಿ ವಸತಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಬಾಲಕಿಯರ ವಸತಿ ನಿಲಯ ಕಲಬುರ್ಗಿಯ ವಾರ್ಡನ್ ಶ್ರೀಮತಿ ಗಾಯತ್ರಿ ಮಠ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮಹಿಳೆಯರ ಶಿಕ್ಷಣಕ್ಕಾಗಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಸೌಲಭ್ಯಗಳನ್ನು ನೀಡಿದ್ದಾರೆ.ಆ ಸೌಲಭ್ಯಗಳನ್ನು ನಾವು ಪಡೆದುಕೊಂಡು ಶಿಕ್ಷಣದ ಮೂಲಕ ಮಹಿಳೆ ಸಬಲೆ ಯಾಗಬೇಕು ಎಂದು ಹೇಳಿದರು.

ನಂತರ ವಿದ್ಯಾರ್ಥಿಗಳಿಗೆ ಸರ್ಕಾರಿ ವಸತಿ ನಿಲಯದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಇನ್ನೋರ್ವ ಅತಿಥಿಗಳಾದ ಎನ್ ವಿ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ ಶ್ವೇತಾ ಕಟ್ಟಿ ಮಾತನಾಡಿದರು.

ಕಾಲೇಜಿನ ಗಣಿತಶಾಸ್ತ್ರ ಮುಖ್ಯಸ್ಥರಾದ ಜಗದೇವಿ ಹಿರೇಮಠ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಮಹಿಳಾ ಕೋಶದ ಸಂಯೋಜಕರಾದ ಡಾ ಮೈತ್ರಾದೇವಿ ಹಳೆಮನಿ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿಕೊಟ್ಟರು.ವಿದ್ಯಾರ್ಥಿನಿಯರಾದ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ವಂದಿಸಿದರು

emedialine

Recent Posts

ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಡಿಸೆಂಬರ್ 4ಕ್ಕೆ ಮತದಾನ,ಅಂದೇ ಫಲಿತಾಂಶ ಪ್ರಕಟ ಕಲಬುರಗಿ,ನ.16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ 2024-29…

17 hours ago

ಆನು ಒಲಿದಂತೆ ಹಾಡುವುದು ಕೂಡ ಕಾವ್ಯ: ಚಂದ್ರಕಲಾ ಬಿದರಿ

ಕಲಬುರಗಿ: ಕಾವ್ಯ ಅನ್ನುವುದು ಸುಲಭವಾಗಿ ಒಲಿಯುವುದಿಲ್ಲ.‌ ಅದು ತಪಸ್ಸು ಇದ್ದ ಹಾಗೆ. ಕವಿಗಳಿಗೆ ಅಧ್ಯಯನ ಹಾಗೂ ಶಬ್ದ ಭಂಡಾರ ಅಗತ್ಯ…

18 hours ago

ಜನಪದ ನೃತ್ಯೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕøತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ…

19 hours ago

ಶುಕ್ಲಾ ಶಾಲೆಯ ವಾರ್ಷಿಕೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್…

19 hours ago

ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ: ನಾಗರಾಜ ಗುಂಡಗುರ್ತಿ

ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್…

19 hours ago

ಭೀಮಾಶಂಕರ್, ಚಂದ್ರು, ನಾಡಗಿರಿ,ಗೋಪಾಲ ಸೇರಿ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕವಿಗೋಷ್ಠಿ,…

20 hours ago